ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರಿಗೆ ಇಂಡಿಗೋದಿಂದ ರಿಯಾಯಿತಿ ಘೋಷಣೆ

ಜೂ.23 ರಿಂದ ಇಂಡಿಗೋ ವಿಮಾನ ಸಂಸ್ಥೆ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರಿಗೆ ಶೇ.10 ರಷ್ಟು ರಿಯಾಯಿತಿ ನೀಡುವುದಾಗಿ ಘೋಷಿಸಿದೆ. 
ಇಂಡಿಗೋ ವಿಮಾನ
ಇಂಡಿಗೋ ವಿಮಾನ

ನವದೆಹಲಿ: ಜೂ.23 ರಿಂದ ಇಂಡಿಗೋ ವಿಮಾನ ಸಂಸ್ಥೆ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರಿಗೆ ಶೇ.10 ರಷ್ಟು ರಿಯಾಯಿತಿ ನೀಡುವುದಾಗಿ ಘೋಷಿಸಿದೆ. 

ಮೂಲ ಬೆಲೆಯ ಆಧಾರದಲ್ಲಿ ರಿಯಾಯಿತಿ ದೊರೆಯಲಿದ್ದು, ಲಿಮಿಟೆಡ್ ಇನ್ವೆಂಟರಿ ಲಭ್ಯವಿದೆ ಎಂದು ಏರ್ ಲೈನ್ಸ್ ನ ಹೇಳಿಕೆ ಮೂಲಕ ತಿಳಿದುವಂದಿದೆ.

ಭಾರತದಲ್ಲಿನ 18 ವರ್ಷದ ಮೇಲ್ಪಟ್ಟ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರಿಗೆ ಈ ಆಫರ್ ಅನ್ವಯವಾಗಲಿದ್ದು, ಭಾರತದಿಂದ ಬುಕ್ ಮಾಡುವವರು ಕನಿಷ್ಟ ಒಂದು ಡೋಸ್ ಲಸಿಕೆ ಪಡೆದಿರಬೇಕು ಎಂದು ಇಂಡಿಗೋ ಸಂಸ್ಥೆ ತಿಳಿಸಿದೆ. ಬುಕ್ಕಿಂಗ್ ವೇಳೆ ಈ ಸೌಲಭ್ಯವನ್ನು ಪಡೆಯುವ ಪ್ರಯಾಣಿಕರು  ಏರ್ ಪೋರ್ಟ್ ಚೆಕ್-ಇನ್ ವೇಳೆ ಕೋವಿಡ್-19 ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಥವಾ ಆರೋಗ್ಯ ಸೇತು ಆಪ್ ನಲ್ಲಿ ತಮ್ಮ ಲಸಿಕೆ ಸ್ಥಿತಿ ಏನಿದೆ ಎಂಬುದನ್ನು ತೋರಿಸಬಹುದಾಗಿದೆ. ಇಂಡಿಗೋದ ಮುಖ್ಯ ಕಾರ್ಯತಂತ್ರ ಹಾಗೂ ಆದಾಯ ವಿಭಾಗದ ಅಧಿಕಾರಿ ಸಂಜಯ್ ಕುಮಾರ್ ಈ ಬಗ್ಗೆ ಮಾತನಾಡಿದ್ದು, ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿ ರಾಷ್ಟ್ರೀಯ ಲಸಿಕೆ ಅಭಿಯಾನಕ್ಕೆ ಕೊಡುಗೆ ನೀಡಬೇಕೆಂದೆನಿಸಿತು, ಇದಕ್ಕಾಗಿ ಲಸಿಕೆ ಪಡೆಯುವುದನ್ನು ಉತ್ತೇಜಿಸುವುದಕ್ಕಾಗಿ ಈ ರಿಯಾಯಿತಿ ಆಫರ್ ನ್ನು ಘೋಷಿಸಲಾಗಿದೆ ಎಂದು ಹೇಳಿದ್ದಾರೆ. 

ಮಂಗಳವಾರ ಲಸಿಕೆ ಲಭ್ಯತೆ ಬಗ್ಗೆ ಮಾಹಿತಿ ನೀಡಿದ್ದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ರಾಜ್ಯಗಳ ಪೈಕಿ 2.14 ಕೋಟಿ ಲಸಿಕೆ ಡೋಸ್ ಗಳು ಲಭ್ಯವಿದೆ ಎಂದು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com