ಕೋವಿಡ್ ಸಂಕಷ್ಟ: ಜಿಯೋ ಫೋನ್‍ ಬಳಕೆದಾರರಿಗೆ ಪ್ರತಿ ತಿಂಗಳು 300 ನಿಮಿಷಗಳ ಔಟ್ ಗೋಯಿಂಗ್ ಕರೆ ಉಚಿತ

ಕೋವಿಡ್ ಜಾಗತಿಕ ಸಾಂಕ್ರಾಮಿಕ ಸಂದರ್ಭದಲ್ಲಿ ಎಲ್ಲರೂ ಪರಸ್ಪರ ಸಂಪರ್ಕದಲ್ಲಿರುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಜಿಯೋ ಕಂಪೆನಿ, ಎರಡು ವಿಶೇಷ ಉಪಕ್ರಮಗಳನ್ನು ಘೋಷಿಸಿದೆ.
ಜಿಯೋ
ಜಿಯೋ

ಮುಂಬೈ: ಕೋವಿಡ್ ಜಾಗತಿಕ ಸಾಂಕ್ರಾಮಿಕ ಸಂದರ್ಭದಲ್ಲಿ ಎಲ್ಲರೂ ಪರಸ್ಪರ ಸಂಪರ್ಕದಲ್ಲಿರುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಜಿಯೋ ಕಂಪೆನಿ, ಎರಡು ವಿಶೇಷ ಉಪಕ್ರಮಗಳನ್ನು ಘೋಷಿಸಿದೆ.

ಮೊದಲ ಉಪಕ್ರಮವಾಗಿ ರಿಲಯನ್ಸ್ ಫೌಂಡೇಶನ್‌ ಜೊತೆಗೆ ಕೈಜೋಡಿಸಿರುವ ಜಿಯೋ, ಸದ್ಯದ ಜಾಗತಿಕ ಸೋಂಕಿನಿಂದಾಗಿ ರೀಚಾರ್ಜ್ ಮಾಡಿಸಲು ಸಾಧ್ಯವಾಗದ ಜಿಯೋಫೋನ್ ಬಳಕೆದಾರರಿಗೆ ಜಾಗತಿಕ ಸೋಂಕಿನ ಸಂಪೂರ್ಣ ಅವಧಿಗೆ ಪ್ರತಿ ತಿಂಗಳೂ 300 ನಿಮಿಷಗಳ ಉಚಿತ ಔಟ್‌ಗೋಯಿಂಗ್ ಕರೆಗಳನ್ನು (ದಿನಕ್ಕೆ 10 ನಿಮಿಷಗಳು) ಒದಗಿಸಲಿದೆ.

ಹೆಚ್ಚುವರಿಯಾಗಿ ಈ ಸೌಲಭ್ಯ ಮತ್ತಷ್ಟು ಸುಲಭವಾಗಿ ಕೈಗೆಟುಕುವಂತೆ ಮಾಡಲು, ಜಿಯೋಫೋನ್ ಬಳಕೆದಾರರು ರೀಚಾರ್ಜ್ ಮಾಡಿದ ಪ್ರತಿ ಜಿಯೋಫೋನ್ ಪ್ಲಾನ್‌ಗೆ ಅದೇ ಮೌಲ್ಯದ ಹೆಚ್ಚುವರಿ ರೀಚಾರ್ಜ್ ಪ್ಲಾನ್ ಅನ್ನು ಉಚಿತವಾಗಿ ಪಡೆಯಲಿದ್ದಾರೆ. ಉದಾಹರಣೆಗೆ, 75 ರೂ ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡುವ ಜಿಯೋಫೋನ್ ಬಳಕೆದಾರರು 75 ರೂ. ಹೆಚ್ಚುವರಿ ಪ್ಲಾನ್ ಅನ್ನು ಸಂಪೂರ್ಣ ಉಚಿತವಾಗಿ ಪಡೆಯಲಿದ್ದಾರೆ.

ಈ ಕೊಡುಗೆ ವಾರ್ಷಿಕ ಅಥವಾ ಜಿಯೋಫೋನ್ ಡಿವೈಸ್ ಬಂಡಲ್ಡ್ ಪ್ಲಾನ್‌ಗಳಿಗೆ ಅನ್ವಯಿಸುವುದಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com