ಸೂಕ್ಷ್ಮ ಜಾಹೀರಾತು ಕೆಟಗರಿಗಳನ್ನು ತೆಗೆಯಲಿರುವ ಫೇಸ್ ಬುಕ್ ಮಾತೃಸಂಸ್ಥೆ ಮೆಟಾ

ಈವರೆಗೆ, ಫೇಸ್ ಬಳಕೆದಾರರ ರಾಜಕೀಯ ಧೋರಣೆ, ಅವರ ಲಿಂಗ, ಜಾತಿ ಸೇರಿದಂತೆ ಅವರ ಪೋಸ್ಟ್ ಗಳಲ್ಲಿನ ಮಾಹಿತಿಯನ್ನು ಆಧರಿಸಿ ಅವರ ಪುಟದಲ್ಲಿ ಜಾಹೀರಾತುಗಳನ್ನು ಫೇಸ್ ಬುಕ್ ತೋರಿಸುತ್ತಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕ್ಯಾಲಿಫೋರ್ನಿಯ: ಆರೋಗ್ಯ, ಜನಾಂಗೀಯ- ಸಮುದಾಯ, ರಾಜಕೀಯ, ಧಾರ್ಮಿಕ ಮತ್ತು ಲಿಂಗಾಧಾರಿತ ಜಾಹೀರಾತು ಪ್ರದರ್ಶಿಸುವುದಕ್ಕೆ ನಿರ್ಬಂಧ ಹೇರುವುದಾಗಿ ಫೇಸ್ ಬುಕ್ ಮಾತೃಸಂಸ್ಥೆ ಮೆಟಾ ತಿಳಿಸಿದೆ. 

ಫೇಸ್ ಬಳಕೆದಾರರ ರಾಜಕೀಯ ಧೋರಣೆ, ಅವರ ಲಿಂಗ, ಜಾತಿ ಸೇರಿದಂತೆ ಅವರ ಪೋಸ್ಟ್ ಗಳಲ್ಲಿನ ಮಾಹಿತಿಯನ್ನು ಆಧರಿಸಿ ಅವರ ಪುಟದಲ್ಲಿ ಜಾಹೀರಾತುಗಳನ್ನು ಈವರೆಗೆ ಫೇಸ್ ಬುಕ್ ತೋರಿಸುತ್ತಿತ್ತು. ಈ ವ್ಯವಸ್ಥೆಯಲ್ಲಿನ ಸೂಕ್ಷ್ಮ ಕೆಟಗರಿಗಳಿಗೆ ನಿರ್ಬಂಧ ಹೇರುವುದಾಗಿ ಫೇಸ್ ಬುಕ್ ತಿಳಿಸಿದೆ. 

ಈ ರೀತಿಯಾಗಿ ಕೆಟಗರಿಯಾಧಾರಿತ ಜಾಹೀರಾತು (targeted ads) ನೀಡುವ ವ್ಯವಸ್ಥೆಯಲ್ಲಿನ ಕೆಲ ನಿರ್ದಿಷ್ಟ ಕೆಟಗರಿಗಳನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯನ್ನು ಮನಗಂಡು ಈ ತೀರ್ಮಾನ ಕೈಗೊಳ್ಳುತ್ತಿರುವುದಾಗಿ ಸಂಸ್ಥೆ ತಿಳಿಸಿದೆ.

ಫೇಸ್ ಬುಕ್ಕಿನ targeted ads ಸವಲತ್ತನ್ನು ಉಪಯೋಗಿಸಿಕೊಂಡು ರಾಜಕೀಯ ಪಕ್ಷಗಳು ಪ್ರಚೋದನಾತ್ಮಕ ಪೋಸ್ಟ್ ಗಳ ಪ್ರಚಾರ ಮಾಡಿದ್ದವು. ಅಲ್ಲದೆ ಸುಳ್ಳು ಸುದ್ದಿಗಳ ಹರಡುವಿಕೆಗೂ ಈ ಸವಲತ್ತನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿರುವುದು ಗಮನಕ್ಕೆ ಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com