ಫೇಸ್ ಬುಕ್ ವ್ಯತ್ಯಯದಿಂದ 600 ಕೋಟಿ ಡಾಲರ್ ಕಳಕೊಂಡ ಮಾರ್ಕ್ ಜಕರ್ ಬರ್ಗ್

ಸೋಮವಾರ ರಾತ್ರಿ 3- 4 ಗಂಟೆಗಳ ಕಾಲ ಫೇಸ್ ಬುಕ್ ಸಾಮಾಜಿಕ ಜಾಲತಾಣ ಸ್ಥಗಿತಗೊಂಡು ವಿಶ್ವಾದ್ಯಂತ ಕೋಟ್ಯಂತರ ಬಳಕೆದಾರರು ಪರದಾಡಿದ್ದರು. ವಾಟ್ಸ್ ಆಪ್ ಮತ್ತು ಇನ್ ಸ್ಟಾ ಗ್ರಾಂ ಸೇವೆಗಳನ್ನೂ ಬಳಕೆದಾರರು ಬಳಸಲಾಗದೆ ತೊಂದರೆಗೀಡಾಗಿದ್ದರು. 
ಫೇಸ್ ಬುಕ್ ಸ್ಥಾಪಕ, ಸಿಇಒ ಮಾರ್ಕ್ ಜಕರ್ ಬರ್ಗ್
ಫೇಸ್ ಬುಕ್ ಸ್ಥಾಪಕ, ಸಿಇಒ ಮಾರ್ಕ್ ಜಕರ್ ಬರ್ಗ್

ವಾಷಿಂಗ್ಟನ್: ಸೋಮವಾರ ರಾತ್ರಿ 3- 4 ಗಂಟೆಗಳ ಕಾಲ ಫೇಸ್ ಬುಕ್ ಸಾಮಾಜಿಕ ಜಾಲತಾಣ ಸ್ಥಗಿತಗೊಂಡು ವಿಶ್ವಾದ್ಯಂತ ಕೋಟ್ಯಂತರ ಬಳಕೆದಾರರು ಪರದಾಡಿದ್ದರು. ವಾಟ್ಸ್ ಆಪ್ ಮತ್ತು ಇನ್ ಸ್ಟಾ ಗ್ರಾಂ ಸೇವೆಗಳನ್ನೂ ಬಳಕೆದಾರರು ಬಳಸಲಾಗದೆ ತೊಂದರೆಗೀಡಾಗಿದ್ದರು. ಈ ಸಂಬಂಧ ಮಾರ್ಕ್ ತಮ್ಮ ಫೇಸ್ ಬುಕ್ ಪೋಸ್ಟಿನಲ್ಲಿ ಕ್ಷಮೆಯಾಚಿಸಿದ್ದರು.

ಕೆಲ ಗಂಟೆಗಳ ವ್ಯತ್ಯಯಕ್ಕೆ ಫೇಸ್ ಬುಕ್ ಸ್ಥಾಪಕ, ಸಿಇಒ ಮಾರ್ಕ್ ಜಕರ್ ಬರ್ಗ್ ಭಾರೀ ಬೆಲೆ ತೆತ್ತಿದ್ದಾರೆ. ಫೇಸ್ ಬುಕ್ ಸಂಪರ್ಕ ಕಡಿತದಿಂದಾಗಿ ಮಾರ್ಕ್ ಅವರ ಸಂಪತ್ತಿನಲ್ಲಿ 600 ಕೋಟಿ ಡಾಲರ್ ಮೊತ್ತ ಕುಸಿತ ಕಂಡಿದೆ. 600 ಕೋಟಿ ಡಾಲರ್ ಎಂದರೆ ಭಾರತೀಯ ಕರೆನ್ಸಿಯಲ್ಲಿ 44,000 ಕೋಟಿ ರೂ. 

ಇದಕ್ಕೂ ಮುನ್ನ ಫೇಸ್ ಬುಕ್ಕಿನಲ್ಲಿ ಮ್ಯಾನೇಜರ್ ಆಗಿ ಉನ್ನತ ಹುದ್ದೆ ನಿರ್ವಹಿಸಿ ಹೊರಬಂದಿದ್ದ ಫ್ರಾನ್ಸಸ್ ಹೋಗನ್ ಅವರು ಫೇಸ್ ಬುಕ್ ಅಕ್ರಮದಲ್ಲಿ ನಿರತವಾಗಿದೆ ಎಂಬುದಾಗಿ ಸಂದರ್ಶನದಲ್ಲಿ ತಿಳಿಸಿದ್ದರು. ಸಂದರ್ಶನದಲ್ಲಿ ಫೇಸ್ ಬುಕ್ ನಂಬರ್ ಒನ್ ಆಗಲು ಅಳವಡಿಸಿಕೊಂಡಿರುವ ಕ್ರಮ ಮಾರ್ಗಗಳು, ತಂತ್ರಗಳ ಕುರಿತಾಗಿ ಬೆಳಕು ಚೆಲ್ಲಿದ್ದರು.

ಅಮೆರಿಕ ಶ್ವೇತಭವನದ ಮೇಲೆ ನಡೆದ ಟ್ರಂಪ್ ಬೆಂಬಲಿಗರ ದಾಳಿಗೆ ಫೇಸ್ ಬುಕ್ ನೀಡಿದ ಕುಮ್ಮಕ್ಕು ಕಾರಣ ಎಂದು ಫ್ರಾನ್ಸಸ್ ಗಂಭೀರ ಆರೋಪವನ್ನೂ ಮಾಡಿದ್ದರು. ಮಾರ್ಕ್ ಜಕರ್ ಬರ್ಗ್ ಸಂಪತ್ತಿನಲ್ಲಿ ಕುಸಿತ ಕಾಣಲು ಇದೂ ಒಂದು ಕಾರಣ ಎಂದು ಪರಿಣತರು ವಿಶ್ಲೇಷಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com