The New Indian Express
ನವದೆಹಲಿ: 91 ದೇಶದ 35 ಮಂದಿ ಪ್ರಭಾವಿ ವಿಶ್ವ ನಾಯಕರು, 330 ರಾಜಕಾರಣಿಗಳು ಮತ್ತು ಸಾರ್ವಜನಿಕ ಅಧಿಕಾರಿಗಳ ರಹಸ್ಯ ಸಂಪತ್ತಿನ ಮಾಹಿತಿಯನ್ನೊಳಗೊಂಡ ಲಕ್ಷಾಂತರ ದಾಖಲೆಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿವೆ. ಪ್ರಭಾವಿ ವ್ಯಕ್ತಿಗಳು ವಿದೇಶದಲ್ಲಿ ನಡೆಸಿರುವ ಹೂಡಿಕೆ ಮಾಹಿತಿಯನ್ನು ಈ ದಾಖಲೆಗಳು ಒಳಗೊಂಡಿವೆ. ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಮಂಡಳಿ ಈ ತನಿಖೆಯನ್ನು ನಡೆಸಿತ್ತು.
ಇದನ್ನೂ ಓದಿ: ಈ ವರ್ಷ ಅದಾನಿ ಆದಾಯ ದಿನವೊಂದಕ್ಕೆ 1,000 ಕೋಟಿ: ಶ್ರೀಮಂತರ ಪಟ್ಟಿ ಹೀಗಿದೆ...
ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ರಷ್ಯಾ ಅಧ್ಯಕ್ಷ ಪುತಿನ್, ಜೋರ್ಡಾನ್ ರಾಜ ಸೇರಿದಂತೆ ಭಾರತ ಪಾಕಿಸ್ತಾನದ ರಾಜಕಾರಣಿಗಳು, ಸೆಲಬ್ರಿಟಿಗಳ ದಾಖಲೆಯೂ ಇದರಲ್ಲಿದೆ ಎನ್ನಲಾಗುತ್ತಿದೆ. 117 ದೇಶಗಳ 600 ಪತ್ರಕರ್ತದ ಸಹಯೋಗದಲ್ಲಿ ನಡೆದ ಈ ಕಾರ್ಯಚರಣೆಗೆ ಪ್ಯಾಂಡೋರಾ ಪೇಪರ್ಸ್ ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ: ಬಡತನ-ಸಿರಿತನಕ್ಕೆ ಕಾರಣವೇನು?
ಬಿಬಿಸಿ, ಗಾರ್ಡಿಯನ್ ಸೇರಿದಂತೆ ಭಾರತದ ಮಾಧ್ಯಮ ಸಂಸ್ಥೆಗಳೂ ಈ ತನಿಖೆಯಲ್ಲಿ ಪಾಲ್ಗೊಂಡಿವೆ. ಭಾರತದ ಕ್ರಿಕೆಟ್ ಸೂಪರ್ ಸ್ಟಾರ್ ಸಚಿನ್ ತೆಂಡೂಲ್ಕರ್, ಪಾಪ್ ಸ್ಟಾರ್ ಶಕೀರಾ ಕೇಳಿಬಂದಿರುವುದು ಅಚ್ಚರಿ ಮೂಡಿಸಿದೆ.
ಸಚಿನ್ ತೆಂಡೂಲ್ಕರ್ ಅಟಾರ್ನಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಸಚಿನ್ ಅವರು ವಿದೇಶದಲ್ಲಿ ನಡೆಸಿರುವ ಹೂಡಿಕೆಗಳು ಕಾನೂನುಬದ್ಧವಾಗಿರುವುದಾಗಿ ತಿಳಿಸಿದ್ದಾರೆ. ಭಾರತದ 6 ಮತ್ತು ಪಾಕಿಸ್ತಾನದ 7 ಮಂದಿ ಪ್ರಭಾವಿ ರಾಜಕಾರಣಿಗಳ ವಿದೇಶಿ ಹೂಡಿಕೆ ಮಾಹಿತಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಜಗತ್ತಿನ ಅತಿ ದೊಡ್ಡ ಶ್ರೀಮಂತ ಇಲಾನ್ ಮುಸ್ಕ್ ಯಶಸ್ಸಿನ ಸಪ್ತ ಸೂತ್ರಗಳು!
ಯುಕ್ರೇನ್, ಕೆನ್ಯಾ, ಈಕ್ವೆಡಾರ್ ಅಧ್ಯಕ್ಷ, ಜೆಕ್ ಪ್ರಧಾನಿ ಸೇರಿದಂತೆ ರಷ್ಯಾದ 130 ಮಂದಿ ಶತಕೋಟ್ಯಧಿಪತಿಗಳು, ಅಮೆರಿಕದ ಶತಕೋಟ್ಯಧಿಪತಿಗಳ ವ್ಯವಹಾರಗಳನ್ನು ಈ ದಾಖಲೆಗಳಲ್ಲಿ ಬಹಿರಂಗಪಡಿಸಲಾಗಿದೆ.
2016ರಲ್ಲಿ ಇದೇ ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಮಂಡಳಿ ಪನಾಮ ಪೇಪರ್ಸ್ ಎನ್ನುವ ಪ್ರಾಜೆಕ್ಟ್ ಅಡಿ ರಹಸ್ಯ ದಾಖಲೆಗಳನ್ನು ಬಿಡುಗಡೆಗೊಳಿಸಿತ್ತು. ಅಮಿತಾಭ್ ಬಚ್ಚನ್ ಸೇರಿದಂತೆ ವಿಶ್ವದ ಹಲವು ನಾಯಕರ ಹೂಡಿಕೆ ದಾಖಲೆಗಳನ್ನು ಆ ಸಮಯದಲ್ಲಿ ಬಹಿರಂಗಗೊಳಿಸಲಾಗಿತ್ತು.
ಇದನ್ನೂ ಓದಿ: ಭಾರತೀಯ ಆ್ಯಪ್ ಗೆ ಚೀನಾ ಹೂಡಿಕೆ, ಡಾಟಾ ಸೋರಿಕೆಯ ಪ್ರಶ್ನೆಗಳ 'ಕೂ'ಗು: ಸಂಸ್ಥಾಪಕರ ಉತ್ತರ ಹೀಗಿದೆ...