Source : The New Indian Express
ಕರಾಚಿ: ಪಾಕಿಸ್ತಾನ ಸಂಸ್ಥಾಪಕ ಮೊಹಮದ್ ಆಲಿ ಜಿನ್ನಾರ ಪುತ್ಥಳಿಯನ್ನು ಬಲೂಚ್ ಬಂಡುಕೋರರು ಬಾಂಬ್ ಸ್ಫೋಟಿಸಿ ಧ್ವಂಸಗೊಳಿಸಿರುವ ಘಟನೆ ಬಲೂಚಿಸ್ತಾನದ ಗ್ವಾದರ್ ಎಂಬಲ್ಲಿ ನಡೆದಿದೆ.
ಇದನ್ನೂ ಓದಿ: ಬೆಂಕಿ ಆರಿಸುವ ಸೋಗಿನಲ್ಲಿ ಪಾಕಿಸ್ತಾನ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ: ವಿಶ್ವಸಂಸ್ಥೆಯಲ್ಲಿ ಭಾರತ ಕಟುಟೀಕೆ
ಸ್ಫೋಟದ ತೀವ್ರತೆಗೆ ವಿಗ್ರಹದ ಒಂದಂಶವೂ ಉಳಿದಿಲ್ಲ ಎಂದು ಸ್ಥಳೀಯ ನಗರಾಡಳಿತ ತಿಳಿಸಿದೆ. ಸ್ಫೋಟ ನಡೆದ ಕೆಲ ಹೊತ್ತಿನಲ್ಲೇ ಬಲೂಚ್ ರಿಪಬ್ಲಿಕನ್ ಆರ್ಮಿ ಸಂಘಟನೆಯ ಬಂಡುಕೋರರು ಸ್ಫೋಟದ ಹೊಣೆ ಹೊತ್ತುಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪಾಕ್ ನ ಐಎಸ್‌ಐಗೆ ಬೇಹುಗಾರಿಕೆ ಮಾಡುತ್ತಿದ್ದ ರಾಜಸ್ತಾನ ಮೂಲದ ವ್ಯಕ್ತಿ ಬಂಧನ!
ಬಂಡುಕೋರರು ಪ್ರವಾಸಿಗರ ಸೋಗಿನಲ್ಲಿ ಬಂದಿದ್ದರು ಎಂದು ಪೊಲಿಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ಜಿನ್ನಾ ವಿಗ್ರಹ ನಾಶ ಪಾಕ್ ವಿಚಾರಧಾರೆಯ ಮೇಲಿನ ದಾಳಿ ಎಂದು ಬಲೂಚಿಸ್ತಾನದ ಮಾಜಿ ಗೃಹಸಚಿವ ಸರ್ಫ್ ರಾಜ್ ಘಟನೆಯನ್ನು ಖಂಡಿಸಿದ್ದಾರೆ.
2013ರಲ್ಲಿ ಜಿನ್ನಾ ಅವರು ಕಡೆಗಾಲದಲ್ಲಿ ತಂಗಿದ್ದರು ಎನ್ನಲಾದ 121 ವರ್ಷ ಹಳೆಯ ಕಟ್ಟಡಡವನ್ನು ಬಲೂಚ್ ಬಂಡುಕೋರರು ಬೆಂಕಿ ಮತ್ತು ಗುಂಡಿನದಾಳಿಯಿಂದ ಹಾನಿಯುಂಟುಮಾಡಿದ್ದರು.
ಇದನ್ನೂ ಓದಿ: ಆಫ್ಘನ್ ನಲ್ಲಿ ಅಮೆರಿಕ ಬೆಂಬಲಿಸಿ ತಪ್ಪು ಮಾಡಿದೆವು, ತಾಲಿಬಾನಿಗಳೊಂದಿಗೆ ಚರ್ಚಿಸುತ್ತಿದ್ದೇನೆ: ಪಾಕ್ ಪ್ರಧಾನಿ ಇಮ್ರಾನ್ ಖಾನ್