ನ್ಯೂಜಿಲೆಂಡ್‌ ಬೆನ್ನಲ್ಲೇ ಇಂಗ್ಲೆಂಡ್‌ ಕ್ರಿಕೆಟ್ ತಂಡದಿಂದಲೂ ಪಾಕಿಸ್ತಾನ ಪ್ರವಾಸ ರದ್ದು

ಭದ್ರತಾ ಕಾರಣ ನೀಡಿ ಈ ಹಿಂದೆ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ಪ್ರವಾಸ ರದ್ದುಗೊಳಿಸಿದ ಬೆನ್ನಲ್ಲೇ, ಇದೀಗ ಇಂಗ್ಲೆಂಡ್‌ ಕೂಡ ಪಾಕ್‌ ಪ್ರವಾಸ ರದ್ದುಗೊಳಿಸಿ ಮತ್ತೊಂದು ಶಾಕ್ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್‌: ಭದ್ರತಾ ಕಾರಣ ನೀಡಿ ಈ ಹಿಂದೆ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ಪ್ರವಾಸ ರದ್ದುಗೊಳಿಸಿದ ಬೆನ್ನಲ್ಲೇ, ಇದೀಗ ಇಂಗ್ಲೆಂಡ್‌ ಕೂಡ ಪಾಕ್‌ ಪ್ರವಾಸ ರದ್ದುಗೊಳಿಸಿ ಮತ್ತೊಂದು ಶಾಕ್ ನೀಡಿದೆ.

ಇಂಗ್ಲೆಂಡ್‌ ಪುರಷರು ಮತ್ತು ವನಿತೆಯರ ತಂಡಗಳೆರಡರ ಮುಂಬರುವ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ತನ್ನ ನಿರ್ಧಾರ ಪ್ರಕಟಿಸಿದೆ. 

‘ಪಾಕಿಸ್ತಾನಕ್ಕೆ ಪ್ರಯಾಣಿಸುವುದರ ಬಗ್ಗೆ ಆತಂಕ ವ್ಯಕ್ತವಾಗಿರುವುದು ನಮಗೆ ತಿಳಿದಿದೆ.  ಕೋವಿಡ್ ಪರಿಸರದಲ್ಲೂ ಈಗಾಗಲೇ ದೀರ್ಘಾವಧಿಯ ಕಾರ್ಯಾಚರಣೆಯನ್ನು ನಿಭಾಯಿಸಿದ ತಂಡಕ್ಕೆ  ಮುಂದಿನ ಪ್ರವಾಸವು ಮತ್ತಷ್ಟು ಒತ್ತಡವನ್ನು ನೀಡುತ್ತದೆ ಎಂದು  ನಾವು ನಂಬಿದ್ದೇವೆ,’ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಹೇಳಿಕೆಯಲ್ಲಿ ತಿಳಿಸಿದೆ. 

ಈ ಹಿಂದಿನ ವೇಳಾಪಟ್ಟಿಯಂತೆ ಅಕ್ಟೋಬರ್ 13 ಮತ್ತು 14 ರಂದು ಪುರುಷರ ತಂಡವು ಎರಡು ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಡಬೇಕಿತ್ತು. ಮಹಿಳೆಯರ ತಂಡ ಅಕ್ಟೋಬರ್ 17, 19 ಮತ್ತು 21 ರಂದು ಮೂರು ಏಕದಿನ ಪಂದ್ಯಗಳನ್ನು ಆಡಬೇಕಿತ್ತು. ಎಲ್ಲಾ ಪಂದ್ಯಗಳು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಿಗದಿಯಾಗಿದ್ದವು.  ಆದರೆ ಈ ಎಲ್ಲ ಪಂದ್ಯಗಳೂ ಭದ್ರತಾ ಕಾರಣದಿಂದಾಗಿ ರದ್ದಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com