The New Indian Express
ಇಸ್ಲಾಮಾಬಾದ್: ಪಾಕಿಸ್ತಾನಿ ತಾಲಿಬಾನ್ ಎಂದೇ ಕುಖ್ಯಾತಿ ಪಡೆದಿರುವ ನಿಷೇಧಿತ ಉಗ್ರಸಂಘಟನೆ ಟಿಟಿಪಿ(ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್) ಜೊತೆ ಪಾಕ್ ಸರ್ಕಾರ ಮಾತುಕತೆಯಲ್ಲಿ ನಿರತವಾಗಿರುವುದನ್ನು ಪಾಕ್ ಗೃಹಸಚಿವ ಶೇಖ್ ರಶೀದ್ ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತ ಗಡಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಪತ್ತೆ: ಪಾಕ್ ಡ್ರೋನ್ ನಿಂದ ಸಾಗಣೆ
ಟಿಟಿಪಿ ಉಗ್ರಗಾಮಿ ಸಂಘಟನೆ ಪಾಕ್- ಆಫ್ಘಾನಿಸ್ತಾನ ಗಡಿಯಲ್ಲಿ ಕಾರ್ಯಾಚಿಸುತ್ತಿದೆ. ಅಫ್ಘಾನಿಸ್ತಾನ ತಾಲಿಬಾನಿಗಳ ಸಹಾಯದಿಂದ ಟಿಟಿಪಿ ಸಂಘಟನೆಯೊಂದಿಗೆ ಪಾಕ್ ಸರ್ಕಾರ ಮಾತುಕತೆ ನಡೆಸುತ್ತಿದೆ. ಇದರಿಂದಾಗಿ ಬಿಕ್ಕಟ್ಟುಗಳು ತಲೆದೋರುವುದಿಲ್ಲ, ಬಗೆಹರಿಯಲಿದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಇದನ್ನೂ ಓದಿ: ಪಾಕಿಸ್ತಾನ: ಧರ್ಮ ನಿಂದನೆ ಎಸಗಿದ್ದ ಮಹಿಳೆಗೆ ಮರಣದಂಡನೆ
ಇಮ್ರಾನ್ ಖಾನ್ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅದರಲ್ಲೂ ಟಿಟಿಪಿ ಉಗ್ರರ ದಾಳಿಯಲ್ಲಿ ಬಲಿಯಾದವರ ಕುಟುಂಬಗಳು ಇಮ್ರಾನ್ ಖಾನ್ ವಿರುದ್ಧ ಸಿಡಿದೆದ್ದಿದ್ದವು.
ಇದನ್ನೂ ಓದಿ: ಪಾಕ್ ಸಂಸ್ಥಾಪಕ ಮೊಹಮದ್ ಆಲಿ ಜಿನ್ನಾ ವಿಗ್ರಹ ಸ್ಫೋಟಿಸಿ ಧ್ವಂಸ: ಬಲೂಚ್ ಬಂಡುಕೋರರ ಕೃತ್ಯ