The New Indian Express
ಕಾಬೂಲ್: ತಾಲಿಬಾನ್ ವಿರುದ್ಧ ತೊಡೆ ತಟ್ಟಿದ್ದ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್(ಎನ್ ಆರ್ ಎಫ್) ಪಡೆಯ ಬೆಂಬಲಿಗನ ಮಗುವನ್ನು ತಾಲಿಬಾನ್ ಹತ್ಯೆ ಮಾಡಿರುವ ಭೀಕರ ಘಟನೆಯನ್ನು ಪಂಜ್ ಶಿರ್ ಪತ್ರಿಕೆ 'ಪಂಜ್ ಶಿರ್ ಅಬ್ಸರ್ವರ್' ವರದಿ ಮಾಡಿದೆ.
ಇದನ್ನೂ ಓದಿ: ಭಯೋತ್ಪಾದಕರಿಗೆ ಪಾಕಿಸ್ತಾನ ಆಶ್ರಯ, ಬೆಂಬಲ; ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು: ಪ್ರಧಾನಿ ಮೋದಿ ಜೊತೆ ಕಮಲಾ ಹ್ಯಾರಿಸ್ ಉಲ್ಲೇಖ
ಇದರೊಂದಿಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಿಂಸಾಚಾರ ನಿಲ್ಲುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ಪರಿಣತರು ಆತಂಕ ವ್ಯಕ್ತಪಡಿಸಿದ್ದಾರೆ.
ಪಂಜ್ ಶಿರ್ ನ ಟಖರ್ ಎಂಬಲ್ಲಿ ಎನ್ ಆರ್ ಎಫ್ ಬೆಂಬಲಿಗ ಎನ್ನುವ ಕಾರಣಕ್ಕೆ ಆತನ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ತಾಲಿಬಾನ್ ಸೈನಿಕರುಾತನ ಮಗುವನ್ನು ಹತ್ಯೆ ಮಾಡಿದ್ದಾರೆ ಎಂಡು ತಿಳಿದುಬಂಡಿದೆ.
ಇದನ್ನೂ ಓದಿ: ಆಫ್ಘಾನಿಸ್ತಾನದಲ್ಲಿ ಐಪಿಎಲ್ ಟೂರ್ನಿ ಪ್ರಸಾರಕ್ಕೆ ತಾಲಿಬಾನ್ ನಿಷೇಧ!
ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ತಾಲಿಬಾನ್ ತಾನು ಮುಂಚಿನಂತೆ ಕ್ರೂರಿಯಲ್ಲ, ಜಗತ್ತು ತಿಳಿದಿರುವಂತೆ ತಾವು ನಿರ್ದಯಿಗಳಲ್ಲ ಎಂದು ತೋರ್ಪಡಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿತ್ತು. ಅದರ ನಡುವೆಯೂ ಅಲ್ಲಲ್ಲಿ ಹಿಂಸಾಚಾರ ಘಟನೆಗಳು ವರದಿಯಾಗಿದ್ದವು.
ಇದೀಗ ತಾಲಿಬಾನಿಗಳ ಕೈಯ್ಯಲ್ಲಿ ಮಗುವಿನ ರಕ್ತ ಮೆತ್ತಿರುವುದು ಜಗತ್ತಿನ ದೃಷ್ಟಿಯಲ್ಲಿ ತಾಲಿಬಾನಿಗಳು ಎಷ್ಟಿದ್ದರೂ ತಾಲಿಬಾನಿಗಳೇ ಎನ್ನುವ ತೀರ್ಮಾನಕ್ಕೆ ಬರುವಂತೆ ಮಾಡಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನ: ತಾಲಿಬಾನ್ ವಿರುದ್ಧ ತೊಡೆ ತಟ್ಟಿದ್ದ ಎನ್ ಆರ್ ಎಫ್ ಸೈನಿಕರಿಂದ ಪಂಜ್ ಶಿರ್ ಕೈಜಾರಿದ್ದು ಹೇಗೆ?