ಅಫ್ಘಾನಿಸ್ತಾನ ಡ್ರೋನ್ ದಾಳಿಯಲ್ಲಿ ಅಮೆರಿಕ ಕೊಂದಿದ್ದು ಉಗ್ರನನ್ನಲ್ಲ, ತನಗೆ ಸಹಾಯ ಮಾಡಿದ ಪುಣ್ಯಾತ್ಮ ಆಫ್ಘನ್ ನಾಗರಿಕನನ್ನು

ಕಳೆದ ತಿಂಗಳು ಅಮೆರಿಕ ಸೇನೆ ಕಾರೊಂದನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಿತ್ತು. ಅಮೆರಿಕ ಸೈನಿಕರ ಮೇಲೆ ಆತ್ಮಾಹುತಿ ದಾಳಿ ನಡೆಸಲು ತೆರಳುತ್ತಿದ್ದ ವ್ಯಕ್ತಿಯನ್ನು ತಾನು ಕೊಂದಿರುವುದಾಗಿ ತಿಳಿಸಿತ್ತು. ಅದೀಗ ಸುಳ್ಳು ಎಂದು ತಿಳಿದುಬಂದಿದೆ. 
ದಾಳಿಯಲ್ಲಿ ಛಿದ್ರವಾದ ಕಾರು
ದಾಳಿಯಲ್ಲಿ ಛಿದ್ರವಾದ ಕಾರು

ಕಾಬೂಲ್: ಕಳೆದ ತಿಂಗಳು ಕಾಬೂಲ್ ನಲ್ಲಿ ಅಮೆರಿಕ ನಡೆಸಿದ್ದ ಡ್ರೋನ್ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿ ಉಗ್ರ ಎಂದು ಅಮೆರಿಕ ರಕ್ಷಣಾ ಇಲಾಖೆ ತಿಳಿಸಿತ್ತು. ಆದರೆ ಇದೀಗ ಆ ದಾಳಿಯಲ್ಲಿ ಸತ್ತಿದ್ದು ಉಗ್ರ ಅಲ್ಲ, ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆಗೆ ತುಂಬಾ ಸಹಾಯ ಮಾಡಿದ್ದ ವ್ಯಕ್ತಿ ಎಂಬ ಮಾಹಿತಿ ಹೊರಬಂದಿದೆ. 

ಡ್ರೋನ್ ದಾಳಿಯಲ್ಲಿ ಝೆಮೆರಾಯ್ ಅಹಮದಿ ಎಂಬ ಆಫ್ಘನ್ ನಾಗರಿಕ ಮೃತಪಟ್ಟಿದ್ದ. ಇದೀಗ ಆತನ ಜೊತೆ ಕೆಲಸ ನಿರ್ವಹಿಸಿದ ಅಮೆರಿಕನ್ನರು ಅಮೆರಿಕ ಸೇನೆಯ ಕೃತ್ಯಕ್ಕೆ ಕಿಡಿಕಾರಿದ್ದಾರೆ. 

ಝೆಮೆರಾಯ್ ಅಫ್ಘಾನಿಸ್ತಾನ ನೆಲದಲ್ಲಿ ಅಮೆರಿಕ ಸೇನೆಯ ಜೊತೆ ಕೆಲಸ ನಿರ್ವಹಿಸಿದ್ದ. ಆತ ತುಂಬಾ ಒಳ್ಳೆಯ ಕೆಲಸಗಾರ ಎಮ್ದು ಆತನ ಜೊತೆ ಕಾರ್ಯ ನಿರ್ವಹಿಸಿದ್ದ ಅಮೆರಿಕನ್ನರು ಆತನನ್ನು ನೆನಪಿಸಿಕೊಂಡಿದ್ದಾರೆ. ಆತ ಹಲವು ಬಾರಿ ತನ್ನ ಪ್ರಾಣದ ಹಂಗು ತೊರೆದು ಕರ್ತವ್ಯ ನಿಷ್ಟೆ ಮೆರೆದಿದ್ದ ಎಂದು ಆತನ ಸಹೋದ್ಯೋಗಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com