ಆಫ್ಘಾನಿಸ್ತಾನ: ಕ್ರೀಡೆಯಿಂದ ದೇಹ ಪ್ರದರ್ಶನ: ಮಹಿಳೆಯರಿಗೆ ನಿಷೇಧ ಹೇರಿದ ತಾಲಿಬಾನ್
ಅಫ್ಘಾನಿಸ್ತಾನದ ಹೆಸರನ್ನು ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನ ಎಂದು ಬದಲಾಯಿಸಿ ಮಧ್ಯಂತರ ಸರ್ಕಾರ ರಚಿಸಿರುವ ತಾಲಿಬಾನ್ ಉಗ್ರರು ಈಗ ಪೂರ್ಣ ಪ್ರಮಾಣದಲ್ಲಿ ಷರಿಯಾ ಕಾನೂನು ಜಾರಿಗೊಳಿಸಿ ಮಹಿಳೆಯರಿಗೆ ಕ್ರೀಡೆಯನ್ನು ನಿಷೇಧಿಸಿದ್ದಾರೆ ಎಂದು ತಿಳಿದುಬಂದಿದೆ.
Published: 09th September 2021 01:55 PM | Last Updated: 09th September 2021 02:00 PM | A+A A-

ಸಂಗ್ರಹ ಚಿತ್ರ
ಕಾಬೂಲ್: ಅಫ್ಘಾನಿಸ್ತಾನದ ಹೆಸರನ್ನು ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನ ಎಂದು ಬದಲಾಯಿಸಿ ಮಧ್ಯಂತರ ಸರ್ಕಾರ ರಚಿಸಿರುವ ತಾಲಿಬಾನ್ ಉಗ್ರರು ಈಗ ಪೂರ್ಣ ಪ್ರಮಾಣದಲ್ಲಿ ಷರಿಯಾ ಕಾನೂನು ಜಾರಿಗೊಳಿಸಿ ಮಹಿಳೆಯರಿಗೆ ಕ್ರೀಡೆಯನ್ನು ನಿಷೇಧಿಸಿದ್ದಾರೆ ಎಂದು ತಿಳಿದುಬಂದಿದೆ.
ಕ್ರಿಕೆಟ್ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ಮಹಿಳೆಯರು ತಮ್ಮ ಮುಖ ಮತ್ತು ದೇಹವನ್ನು ಮುಚ್ಚಿಕೊಳ್ಳದಂತಹ ಪರಿಸ್ಥಿತಿಯನ್ನು ಎದುರಿಸಬಹುದು. ಮಹಿಳೆಯರನ್ನು ಈ ರೀತಿ ನೋಡಲು ಇಸ್ಲಾಂ ಅನುಮತಿಸುವುದಿಲ್ಲ ಎಂದು ತಾಲಿಬಾನ್ ಸಾಂಸ್ಕೃತಿಕ ಆಯೋಗದ ಉಪ ಮುಖ್ಯಸ್ಥ ಅಹ್ಮದುಲ್ಲಾ ವಾಸಿಕ್ ಹೇಳಿದ್ದಾರೆ.
ಇದನ್ನೂ ಓದಿ: ಆಫ್ಘಾನಿಸ್ತಾನ ತೊರೆಯಲು ಅಮೆರಿಕ ಸೇರಿದಂತೆ ಇತರೆ ದೇಶಗಳ ನಾಗರೀಕರಿಗೆ ತಾಲಿಬಾನ್ ಅನುಮತಿ
'ಇದು ಮಾಧ್ಯಮ ಯುಗ, ಮತ್ತು ಫೋಟೋಗಳು ಮತ್ತು ವೀಡಿಯೊಗಳು ಇರುತ್ತವೆ, ಮತ್ತು ನಂತರ ಜನರು ಅದನ್ನು ವೀಕ್ಷಿಸುತ್ತಾರೆ. ಇಸ್ಲಾಂ ಮತ್ತು ಇಸ್ಲಾಮಿಕ್ ಎಮಿರೇಟ್ ಮಹಿಳೆಯರಿಗೆ ಕ್ರಿಕೆಟ್ ಆಡಲು ಅಥವಾ ಅವರು ಬಹಿರಂಗಪಡಿಸುವ ರೀತಿಯ ಕ್ರೀಡೆಗಳನ್ನು ಆಡಲು ಅನುಮತಿಸುವುದಿಲ್ಲ ಎಂದು ಹೇಳಿದರು. ಅಂತೆಯೇ ತಾವು ಕ್ರೀಡಾ ವಿರೋಧಿಗಳಲ್ಲಿ ಎಂದು ಹೇಳಿದ ಅವರು, 'ಕಳೆದ ತಿಂಗಳು ಎಸ್‌ಬಿಎಸ್‌ಗೆ ತಾಲಿಬಾನ್ ಪುರುಷರ ಕ್ರಿಕೆಟ್ ಮುಂದುವರಿಸಲು ಅವಕಾಶ ನೀಡಿದೆ ಮತ್ತು ಪುರುಷರ ರಾಷ್ಟ್ರೀಯ ತಂಡವು ನವೆಂಬರ್‌ನಲ್ಲಿ ಟೆಸ್ಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲು ಅನುಮೋದನೆ ಕೂಡ ನೀಡಿದೆ ಎಂದು ಹೇಳಿದರು.
ತಾಲಿಬಾನ್ ಸುಪ್ರೀಂ ಲೀಡರ್ ಮೌಲ್ವಿ ಹೈಬತುಲ್ಲಾ ಅಖುಂಡ್‍ಜಾದಾ ಹೆಸರಿನಲ್ಲಿ ಆಡಳಿತ ವಿಧಾನವನ್ನು ಪ್ರಕಟಿಸಿದ್ದು, ಯಾರು ಭವಿಷ್ಯದ ಬಗ್ಗೆ ಆತಂಕ ಪಡಬೇಕಿಲ್ಲ. ಎಲ್ಲಾ ಸಮಸ್ಯೆಗಳಿಗೂ ಸರಿಯಾದ ಪರಿಹಾರ ಹುಡುಕುತ್ತೇವೆ. ಷರಿಯತ್ ಕಾನೂನು ಅನುಸಾರವಾಗಿ ಅಫ್ಘಾನಿಗಳ ಜೀವನವನ್ನು ರೂಪಿಸುತ್ತೇವೆ. ಇದಕ್ಕೆ ಅಫ್ಘಾನ್ ಪ್ರಜೆಗಳು ತಾಲಿಬಾನ್ ಸರ್ಕಾರವನ್ನು ಬೆಂಬಲಿಸಬೇಕು. ತಜ್ಞರು ದೇಶ ಬಿಟ್ಟು ಹೋಗಬಾರದು ಎಂದು ಕೋರಿದೆ.
ಇದನ್ನೂ ಓದಿ: 'ಇಸ್ಲಾಮಿಕ್ ನಿಯಮ, ಷರಿಯಾ ಕಾನೂನು ಎತ್ತಿಹಿಡಿಯಿರಿ': ಅಫ್ಘನ್ ಸರ್ಕಾರಕ್ಕೆ ತಾಲಿಬಾನ್ ಪರಮೋಚ್ಛ ನಾಯಕ ಕರೆ!
ತಾಲಿಬಾನ್ ಆಡಳಿತದಲ್ಲಿ ಪಿಹೆಚ್‍ಡಿಗಳಿಗೆ, ಪದವಿಗಳಿಗೆ ಬೆಲೆ ಇಲ್ಲ. ಇದನ್ನು ಅಲ್ಲಿನ ಶಿಕ್ಷಣ ಮಂತ್ರಿಯೇ ಅಧಿಕೃತವಾಗಿ ಘೋಷಿಸಿದ್ದಾರೆ. ನೀವೇ ನೋಡಿ ಅಧಿಕಾರ ನಡೆಸ್ತಿರುವ ಮುಲ್ಲಾಗಳು, ತಾಲಿಬಾನಿಗಳಿಗೆ ಪಿಹೆಚ್‍ಡಿಯ ಕೋಡು ಇವೆಯಾ? ಅವರಿಗೆ ಕನಿಷ್ಠ ಹೈಸ್ಕೂಲ್ ಶಿಕ್ಷಣ ಕೂಡ ಇಲ್ಲ. ಆದ್ರೂ ಎಲ್ಲರಿಗಿಂತ ಉತ್ತಮ ಆಡಳಿತ ನೀಡ್ತಿದ್ದು, ಅವರೇ ಎಲ್ಲರಿಗಿಂತ ಶ್ರೇಷ್ಠ ಎಂದು ತಾಲಿಬಾನ್ ಸರ್ಕಾರದ ಶಿಕ್ಷಣ ಮಂತ್ರಿ ಶೇಖ್ ಮೌಲ್ವಿ ನೂರುಲ್ಲಾ ಹೇಳಿದ್ದಾರೆ.
ಮಹಿಳೆಯರಿಗೆ ಟಫ್ ರೂಲ್ಸ್
ಕ್ರಿಕೆಟ್‍ನಂತಹ ಕ್ರೀಡೆ ಸೇರಿದಂತೆ ಯಾವುದೇ ಕ್ರೀಡೆಗಳಲ್ಲಿ ಮಹಿಳೆಯರು ಭಾಗಿಯಾಗಲು ಅನುಮತಿಯಿಲ್ಲ. ಕ್ರೀಡೆಗಳಲ್ಲಿ ಇಸ್ಲಾಮಿಕ್ ಡ್ರೆಸ್ ಕೋಡ್ ಪಾಲನೆ ಆಗುವುದಿಲ್ಲ. ಕ್ರೀಡೆಗಳಲ್ಲಿ ಪಾಲ್ಗೊಂಡರೆ ದೇಹ ಪ್ರದರ್ಶನವಾಗುತ್ತದೆ. ಇದರಿಂದಾಗಿ ಮಹಿಳಾ ಕ್ರೀಡಾಪಟುಗಳಿಗೆ ಮುಖ, ಶರೀರ ಮುಚ್ಚಿಕೊಳ್ಳಲು ಸಾಧ್ಯವಿಲ್ಲ.