ಭಾರತ ಗಡಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಪತ್ತೆ: ಪಾಕ್ ಡ್ರೋನ್ ನಿಂದ ಸಾಗಣೆ
ಗಡಿ ಗ್ರಾಮವಾದ ಫಲೈನ್ ಮಂಡಲ್ ನ ಜನರು ರಾತ್ರಿ ಆಕಾಶದಲ್ಲಿ ಸದ್ದು ಕೇಳಿಬರುತ್ತಿರುವುದನ್ನು ಗಮನಿಸಿದ್ದರು. ನಂತರ ಭದ್ರತಾಪಡೆಗಳಿಗೆ ಈ ಬಗ್ಗೆ ಸುದ್ದಿ ಮುಟ್ಟಿಸಿದ್ದರು.
Published: 03rd October 2021 12:30 PM | Last Updated: 03rd October 2021 12:30 PM | A+A A-

ಸಾಂದರ್ಭಿಕ ಚಿತ್ರ
ಶ್ರೀನಗರ: ಭಾರತದೊಳಕ್ಕೆ ಶಸ್ತ್ರಾಸ್ತ್ರ ಸಾಗಿಸುವ ಪಾಕ್ ಸಂಚನ್ನು ಭಾರತೀಯ ಯೋಧರು ವಿಫಲಗೊಳಿಸಿದ್ದಾರೆ. ಭಾರತ ಗಡಿಯೊಳಗೆ ಅಕ್ರಮ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಭದ್ರತಾಪಡೆಗಳು ಅವುಗಳನ್ನು ವಶಪಡಿಸಿಕೊಂಡಿವೆ.
ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನವು ಡ್ರೋನ್ ಬಳಸಿ ಭಾರತದೊಳಕ್ಕೆ ಸಾಗಿಸಿರುವ ಶಂಕೆಯನ್ನು ಯೋಧರು ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಡ್ರೋನ್ ಮೂಲಕ ಕಾಶ್ಮೀರದ ಉಗ್ರರಿಗೆ ಶಸ್ತ್ರಾಸ್ತ್ರ ನೆರವು ನೀಡುವ ಕೃತ್ಯದಲ್ಲಿ ಪಾಕ್ ಭಾಗಿಯಾಗಿರುವುದು ಪತ್ತೆಯಾಗಿತ್ತು.
ಇದನ್ನೂ ಓದಿ: ಪಾಕ್ ಸಂಸ್ಥಾಪಕ ಮೊಹಮದ್ ಆಲಿ ಜಿನ್ನಾ ವಿಗ್ರಹ ಸ್ಫೋಟಿಸಿ ಧ್ವಂಸ: ಬಲೂಚ್ ಬಂಡುಕೋರರ ಕೃತ್ಯ
ಗಡಿ ಗ್ರಾಮವಾದ ಫಲೈನ್ ಮಂಡಲ್ ನ ಜನರು ರಾತ್ರಿ ಆಕಾಶದಲ್ಲಿ ಸದ್ದು ಕೇಳಿಬರುತ್ತಿರುವುದನ್ನು ಗಮನಿಸಿದ್ದರು. ನಂತರ ಭದ್ರತಾಪಡೆಗಳಿಗೆ ಈ ಬಗ್ಗೆ ಸುದ್ದಿ ಮುಟ್ಟಿಸಿದ್ದರು. ಪರಿಶೀಲನೆ ಕೈಗೊಂಡ ಸೈನಿಕರಿಗೆ ಅಕ್ರಮ ಶಸ್ತ್ರಾಸ್ತ್ರಗಳು ಸಿಕ್ಕಿದ್ದವು.
ಇದನ್ನೂ ಓದಿ: