ಅಡಾಲ್ಫ್ ಹಿಟ್ಲರ್
ಅಡಾಲ್ಫ್ ಹಿಟ್ಲರ್

ಜರ್ಮನಿ: ಹಿಟ್ಲರನ ನಾಜಿ ಕಮಾಂಡರ್ ಪಿಎ ಆಗಿದ್ದ 96 ವರ್ಷದ ಮಹಿಳೆ ವಿಚಾರಣೆ: ಆರೋಪ ದಾಖಲಾದಾಗ ಆಕೆಗೆ 21 

ಆಕೆ ಕಾರ್ಯ ನಿರ್ವಹಿಸುತ್ತಿದ್ದ ಕೈದಿ ಶಿಬಿರದಲ್ಲಿ 1943-45ರ ಅವಧಿಯಲ್ಲಿ 11,000 ಮಂದಿಯನ್ನು ಕೊಲ್ಲಲಾಗಿತ್ತು. ಈ ಮಾರಣಹೋಮ ಆರೋಪಿಗಳ ಪಟ್ಟಿಯಲ್ಲಿ ಪಿಎ ಮಹಿಳೆಯ ಹೆಸರೂ ಇದೆ.

ಬರ್ಲಿನ್: ಎರಡನೇ ವಿಶ್ವ ಮಹಾಯುದ್ಧದಲ್ಲಿ ಹಿಟ್ಲರನ ನಾಜಿ ಶಿಬಿರಗಳೆನ್ನುವ ನರಕದ ಬಗೆಗೆ ಬಹುತೇಕರಿಗೆ ತಿಳಿದೇ ಇರುತ್ತದೆ. ಈ ಕಾನ್ಸಂಟ್ರೇಷನ್ ಕ್ಯಾಂಪುಗಳಲ್ಲಿ ಯುದ್ಧ ಕೈದಿಗಳು, ರಾಜಕೀಯ ಕೈದಿಗಳು ಮತ್ತು ನಾಗರಿಕರನ್ನು ತುಂಬಲಾಗುತ್ತಿತ್ತು. ಯಹೂದಿಗಳ ಮಾರಣಹೋಮವನ್ನು ಗ್ಯಾಸ್ ಚೇಂಬರುಗಳಲ್ಲಿ ಕೈಗೊಳ್ಳಲಾಗುತ್ತಿದ್ದಿದ್ದು ಕೂಡಾ ಇದೇ ಶಿಬಿರಗಳಲ್ಲಿ.

ಈ ಕುಖ್ಯಾತ ಶಿಬಿರವೊಂದರ ಕಮಾಂಡರ್ ಒಬ್ಬನ ಕಾರ್ಯದರ್ಶಿ ಆಗಿದ್ದ ಜರ್ಮನ್ ಮಹಿಳೆಯನ್ನು ಯುದ್ಧಾಪರಾಧ ಹಿನ್ನೆಲೆಯಲ್ಲಿ ಗುರುವಾರ ವಿಚಾರಣೆಗೆ ಗುರಿಪಡಿಸಲಾಗಿದೆ. ಆಕೆ ಕಾರ್ಯ ನಿರ್ವಹಿಸುತ್ತಿದ್ದ ಕೈದಿ ಶಿಬಿರದಲ್ಲಿ 1943-45ರ ಅವಧಿಯಲ್ಲಿ 11,000 ಮಂದಿಯನ್ನು ಕೊಲ್ಲಲಾಗಿತ್ತು. ಈ ಮಾರಣಹೋಮ ಆರೋಪಿಗಳ ಪಟ್ಟಿಯಲ್ಲಿ ಪಿಎ ಮಹಿಳೆಯ ಹೆಸರೂ ಇದೆ.

ಆಕೆಯ ಹೆಸರು ಇಮ್ ಗಾರ್ಡ್ ಫುಶ್ನರ್ ಎಂದು ಜರ್ಮನಿ ಮಾಧ್ಯಮಗಳು ಬಹ್ರಂಗಪಡಿಸಿವೆ. ಆಕೆಯ ಮೇಲೆ ಯುದ್ಧಾಪರಾಧ ಪ್ರಕರಣ ದಾಖಲಾದಾಗ ಆಕೆಗೆ 21 ವರ್ಷ ವಯಸ್ಸು. ಈಗ ಆಕೆಗೆ 96ರ ಹರೆಯ. ಆದರೆ ವಯಸ್ಸಾಗಿದೆಯೆಂದು ಆಕೆ ವಿನಾಯಿತಿಯನ್ನು ನೀಡದೆ ವಿಚಾರಣೆ ಮುಂದುವರಿಸಲಾಗುತ್ತಿದೆ.  

ಕೈದಿ ಶಿಬಿರಗಳಲ್ಲಿ ನಡೆಯುತ್ತಿದ್ದ ಅಪರಾಧಗಳು ತಮ್ಮ ಗಮನಕ್ಕೆ ಯಾವತ್ತೂ ಬಂದಿಲ್ಲ ಎಂದು ಆರೋಪಿ ಮಹಿಳೆ ಸ್ಪಷ್ಟನೆ ನೀಡಿದ್ದಾರೆ. ತಾವು ಕಚೇರಿ ಕೆಲಸ ಮಾತ್ರ ಮಾಡುತ್ತಿದ್ದುದಾಗಿಯೂ, ಅದರ ಹೊರತಾಗಿ ಬೇರಿನ್ನಾವ ವಿಚಾರಗಳು ತಮಗೆ ಆ ಸಮಯ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com