7 ವರ್ಷದ ಸೆರೆವಾಸದ ನಂತರ ಲಿಬಿಯಾದ ವಿವಾದಾತ್ಮಕ ಸರ್ವಾಧಿಕಾರಿ ಮೊಹಮ್ಮದ್ ಗದ್ದಾಫಿ ಪುತ್ರ ಬಿಡುಗಡೆ

ಗದ್ದಾಫಿ ಸರ್ಕಾರದಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದ ಹಲವು ಮಂದಿ ಅಧಿಕಾರಿಗಳು ಇನ್ನೂ ಜೈಲಿನಲ್ಲಿಯೇ ಕೊಳೆಯುತ್ತಿದ್ದು ನ್ಯಾಯಾಂಗ ವಿಚಾರಣೆ ನಡೆಯುತ್ತಿದೆ.
ಅಲ್ ಸಾದಿ ಗದ್ದಾಫಿ
ಅಲ್ ಸಾದಿ ಗದ್ದಾಫಿ

ಕೈರೊ: ಲಿಬಿಯಾದ ವಿವಾದಾತ್ಮಕ ಸರ್ವಾಧಿಕಾರಿಯಾಗಿದ್ದ ದಿ. ಮೊಹಮ್ಮದ್ ಗದ್ದಾಫಿ ಪುತ್ರನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಪ್ರಕಟಿಸಿದೆ. ಗದಾಫಿ ಪುತ್ರ ಅಲ್ ಸಾದಿ ಗದ್ದಾಫಿ ಕಳೆದ 7 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದರು. 

ನ್ಯಾಯಾಲಯದ ಆದೇಶದ ಮೇರೆಗೆ ಈ ಬಿಡುಗಡೆ ನಡೆದಿರುವುದಾಗಿ ಲಿಬಿಯಾದ ಪ್ರಧಾನಿ ಅಬ್ದುಲ್ ಹಮೀದ್ ಟ್ವೀಟ್ ಮಾಡಿದ್ದಾರೆ. ಮಧ್ಯಂತರ ಸರ್ಕಾರದ ವಕ್ತಾರ ಮೊಹಮದ್ ಹಮೌದ್ ಈ ಬಗ್ಗೆ ಹೇಳಿಕೆ ನೀಡಿದ್ದು, ಅಲ್ ಸಾದಿ ಗದ್ದಾಫಿ ಟ್ರಿಪೋಲಿಯಲ್ಲಿನ ಅಲ್ ಹಡಬ ಬಂದೀಖಾನೆಯಿಂದ ಬಿಡುಗಡೆಯಾಗಿರುವುದನ್ನು ಖಚಿತ ಪಡಿಸಿದ್ದಾರೆ. 

ಗದ್ದಾಫಿ ಸರ್ಕಾರದಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದ ಹಲವು ಮಂದಿ ಅಧಿಕಾರಿಗಳು ಇನ್ನೂ ಜೈಲಿನಲ್ಲಿಯೇ ಕೊಳೆಯುತ್ತಿದ್ದು ನ್ಯಾಯಾಂಗ ವಿಚಾರಣೆ ನಡೆಯುತ್ತಿದೆ. 2011ರಲ್ಲಿ ಲಿಬಿಯಾದಲ್ಲಿ ನಾಗರಿಕ ದಂಗೆಯೆದ್ದು ದೀರ್ಘಕಾಲದಿಂದ ಅಧಿಕಾರದಲ್ಲಿದ್ದ ಗದ್ದಾಫಿ ಪದಚ್ಯುತಗೊಳ್ಳಲು ಕಾರಣವಾಗಿತ್ತು. ನಂತರ ಗದ್ದಾಫಿ ಹತ್ಯೆಯಾಗಿತ್ತು.

2011ರ ದಂಗೆ ಸಮಯದಲ್ಲಿ ಗದ್ದಾಫಿ ಪುತ್ರ ಅಲ್ ಸಾದ್ ಗದ್ದಾಫಿ ಬಂಡುಕೋರರು ಹಾಗೂ ಪ್ರತಿಭಟನಾಕಾರರ ವಿರುದ್ಧ ವಿಶೇಷ ಭದ್ರತಾಪಡೆ ಕಟ್ಟಿಕೊಂಡು ದಾಳಿಯಲ್ಲಿ ತೊಡಗಿದ್ದರು. ಗದ್ಧಾಫಿಗೆ 8 ಮಂದಿ ಮಕ್ಕಳು. ಅವರಲ್ಲಿ ಮೂವರು ಹತ್ಯೆಯಾಗಿದ್ದಾರೆ. ಇಬ್ಬರು ಇನ್ನೂ ಬಂಧನದಲ್ಲಿದ್ದಾರೆ. ಉಳಿದವರು ಅಲ್ಜೀರಿಯ ಮತ್ತು ಓಮನ್ ಆಶ್ರಯದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com