ಬೆಂಗಳೂರಿನಿಂದ ಜರ್ಮನಿಗೆ ತೆರಳುತ್ತಿದ್ದ ಲುಫ್ತಾನ್ಸಾ ವಿಮಾನದಲ್ಲಿ ತಾಂತ್ರಿಕ ದೋಷ, ಕೆಐಎ ಗೆ ವಾಪಸ್!

ಬೆಂಗಳೂರಿನಿಂದ ಜರ್ಮನಿಗೆ ತೆರಳುತ್ತಿದ್ದ ಲುಫ್ತಾನ್ಸಾ ಪ್ರಯಾಣಿಕ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನಲೆಯಲ್ಲಿ ವಿಮಾನವನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ.
ಲುಫ್ತಾನ್ಸಾ ವಿಮಾನ (ಸಾಂದರ್ಭಿಕ ಚಿತ್ರ)
ಲುಫ್ತಾನ್ಸಾ ವಿಮಾನ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಬೆಂಗಳೂರಿನಿಂದ ಜರ್ಮನಿಗೆ ತೆರಳುತ್ತಿದ್ದ ಲುಫ್ತಾನ್ಸಾ ಪ್ರಯಾಣಿಕ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನಲೆಯಲ್ಲಿ ವಿಮಾನವನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ.

ಗುರುವಾರ ಬೆಳಗ್ಗೆ ವಿಮಾನ ಜರ್ಮನಿಯ ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದತ್ತ ಹಾರಿದ್ದ ಲುಫ್ಥಾನ್ಸ LH755 ವಿಮಾನ ನಾಲ್ಕು ಗಂಟೆಗಳ ಬಳಿಕ ತಾಂತ್ರಿಕ ದೋಷ ಎದುರಿಸಿ ಮತ್ತೆ ಬೆಂಗಳೂರಿಗೆ ವಾಪಸ್ ಆಗಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ವಿಮಾನ ಟೇಕಾಫ್ ವೇಳೆ ತಾಂತ್ರಿಕ ಅಡಚಣೆ ಯಿಂದಾಗಿ  ಸಂಭವಿಸಬಹು ದಾಗಿದ್ದ ಭಾರೀ ಅನಾಹುತ ಪೈಲೆಟ್ ಸಮಯ ಪ್ರಜ್ಞೆಯಿಂದ ತಪ್ಪಿದೆ. ದೇವನಹಳ್ಳಿಯ ಕೆಐಎಬಿ ವಿಮಾನ ನಿಲ್ದಾಣದಲ್ಲಿ ಲುಫ್ತಾನ್ಸಾ ವಿಮಾನ ಟೇಕಾಫ್ ವೇಳೆ ಮುಂದಿನ ವ್ಹೀಲ್‍ನಲ್ಲಿ ದೋಷ ಕಂಡುಬಂದಿತ್ತು. 

ಕೂಡಲೇ ಎಮರ್ಜೆನ್ಸಿ ಘೋಷಿಸಲಾಯಿತು. ಆದರೆ, ಟೇಕಾಫ್ ಆಗಿದ್ದ ವಿಮಾನವನ್ನು ಒಂದು ಗಂಟೆಗೂ ಹೆಚ್ಚು ಕಾಲ ಹಾರಾಟ ನಡೆಸಿದ ಪೈಲೆಟ್ ಇಂಧನ ಖಾಲಿಯಾದ ಬಳಿಕ ಸುರಕ್ಷಿತ ಲ್ಯಾಂಡಿಂಗ್ ಮಾಡಿದ್ದಾರೆ. ಈ ವಿಮಾನದಲ್ಲಿ 78 ಪ್ರಯಾಣಿಕರಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ. ಬೆಳಗ್ಗೆ ಹೊರಡಬೇಕಿದ್ದ  ವಿಮಾನದ ಭಾರೀ ಅನಾಹುತ ತಪ್ಪಿದೆ.

ಇನ್ನು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಲುಫ್ತಾನ್ಸ ಸಂಸ್ಥೆ, ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆಧ್ಯತೆಯಾಗಿದೆ. ಯಾವುದೇ ಕಾರಣಕ್ಕೆ ಪ್ರಯಾಣಿಕರಿಗಾಗಲಿ, ಸಂಸ್ಥೆಯ ಸಿಬ್ಬಂದಿಗಳ ಸುರಕ್ಷೆತೆಯ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ. ಅಂತೆಯೇ ಪ್ರಯಾಣಿಕರ ಪ್ರಯಾಣವನ್ನು  ಬೇರೆ ವಿಮಾನಕ್ಕೆ ಆದಷ್ಟು ಬೇಗ ಮತ್ತೆ ರಿ ಬುಕಿಂಗ್ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com