ಪ್ರವಾದಿ ಬಗ್ಗೆ ವ್ಯಂಗ್ಯ ರೇಖಾಚಿತ್ರ ರಚಿಸಿದ್ದ ಸ್ವೀಡನ್‌ ಕಲಾವಿದ ಅಪಘಾತದಲ್ಲಿ ಸಾವು

ಪ್ರವಾದಿ ಬಗ್ಗೆ ವ್ಯಂಗ್ಯ ರೇಖಾಚಿತ್ರ ರಚಿಸಿದ್ದ ಸ್ವೀಡನ್‌ ಕಲಾವಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸ್ವಿಡೀಶ್‌ ವ್ಯಂಗ್ಯಚಿತ್ರಕಾರ ಲಾರ್ಸ್ ವಿಲ್ಕ್ಸ್
ಸ್ವಿಡೀಶ್‌ ವ್ಯಂಗ್ಯಚಿತ್ರಕಾರ ಲಾರ್ಸ್ ವಿಲ್ಕ್ಸ್

ಸ್ಟಾಕ್‌ ಹೋಂ: ಪ್ರವಾದಿ ಬಗ್ಗೆ ವ್ಯಂಗ್ಯ ರೇಖಾಚಿತ್ರ ರಚಿಸಿದ್ದ ಸ್ವೀಡನ್‌ ಕಲಾವಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪ್ರವಾದಿ ಮಹಮದ್‌ ಅವರ ವ್ಯಂಗ್ಯ ರೇಖಾ ಚಿತ್ರ ರಚಿಸುವ ಮೂಲಕ ವಿವಾದಕ್ಕೀಡಾಗಿದ್ದ ಸ್ವಿಡೀಶ್‌ ವ್ಯಂಗ್ಯಚಿತ್ರಕಾರ ಲಾರ್ಸ್ ವಿಲ್ಕ್ಸ್, ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಸ್ವೀಡನ್‌ ಮಾಧ್ಯಮಗಳನ್ನು ಆಧರಿಸಿ ವಾಷಿಂಗ್ಟನ್ ಟೈಮ್ಸ್ ವರದಿ ಮಾಡಿದೆ.

75 ವರ್ಷದ ವಿಲ್ಕ್ಸ್ ಪೊಲೀಸ್ ರಕ್ಷಣೆಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ದಕ್ಷಿಣ ಸ್ವೀಡನ್‌ನ ಮಾರ್ಕರಿಡ್ ಪಟ್ಟಣದ ಬಳಿ ಭಾನುವಾರ ಅಪಘಾತ ಸಂಭವಿಸಿದೆ. ಲಾರ್ಸ್ ವಿಲ್ಕ್ಸ್ ಮೃತ ಪಟ್ಟಿರುವುದನ್ನು ಅವರ ಸಂಗಾತಿ ದೃಢಪಡಿಸಿದ್ದಾರೆ ಎಂದು ಸ್ಥಳೀಯ ದೈನಿಕ ಹೇಳಿದೆ.

ದಕ್ಷಿಣ ಸ್ವೀಡನ್‌ನ ಮಾರ್ಕರಿಡ್ ಪಟ್ಟಣದ ಬಳಿ ಇ 4 ಹೆದ್ದಾರಿಯಲ್ಲಿ ಕಾರು ಪ್ರಯಾಣಿಸುತ್ತಿದ್ದಾಗ ಮಧ್ಯಾಹ್ನ ಅಪಘಾತ ಸಂಭವಿಸಿದೆ. ವಿಲ್ಕ್ಸ್ ಮತ್ತು ಆತನ ಪೊಲೀಸ್ ರಕ್ಷಣೆ ಸಂಚರಿಸುತ್ತಿದ್ದ ನಾಗರಿಕ ಪೊಲೀಸ್ ಕಾರನ್ನು ಡಿಕ್ಕಿ ಹೊಡೆಯುವ ಮೊದಲು ಟ್ರಕ್ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದ್ದು ಬಳಿಕ ಕಾರಿಗೆ ಢಿಕ್ಕಿ ಹೊಡೆದಿದೆ.

ವಿಲ್ಕ್ಸ್ 2007 ರಲ್ಲಿ ಇಸ್ಲಾಮಿಕ್ ಪ್ರವಾದಿಯನ್ನು ನಾಯಿಯ ದೇಹದಿಂದ ಚಿತ್ರಿಸಿದ್ದಕ್ಕಾಗಿ ಪ್ರಾಣ ಬೆದರಿಕೆಗಳನ್ನು ಪಡೆದ ನಂತರ ಪೊಲೀಸ್ ರಕ್ಷಣೆಯಲ್ಲಿ ವಾಸಿಸುತ್ತಿದ್ದರು.  ಆ ಸಮಯದಲ್ಲಿ ಆತನೊಂದಿಗೆ ಪ್ರಯಾಣಿಸುತ್ತಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ಕೂಡ ಸಾವನ್ನಪ್ಪಿದ್ದಾರೆ. ಅಪಘಾತದ ಬಗ್ಗೆ ಸ್ವೀಡಿಷ್ ಪೊಲೀಸರು ವರದಿ ಮಾಡಿದ್ದು, ಆದರೆ, ಯಾವುದೇ ಹೆಸರನ್ನು ಬಿಡುಗಡೆಮಾಡಿಲ್ಲ.  

ಮೇಲ್ನೋಟಕ್ಕೆ ಅಪಘಾತ... ಕೊಲೆ ಬಗ್ಗೆ ಪ್ರಾಥಮಿಕ ಮಾಹಿತಿ ಇಲ್ಲ
ವಿಲ್ಕ್ಸ್ ಮೇಲಿನ ದಾಳಿಯನ್ನು ಭದ್ರತಾ ಅಧಿಕಾರಿಗಳು ತಳ್ಳಿಹಾಕಿದ್ದು, ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಅಪಘಾತದ ಕಾರಣವು "ಪ್ರತಿ ರಸ್ತೆ ಸಂಚಾರ ಅಪಘಾತದಂತೆ" ಇದನ್ನೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು. ಪ್ರಸ್ತುತ ಟ್ರಕ್ ಚಾಲಕನನ್ನು ಅಧಿಕಾರಿಗಳು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಈ ಹಿಂದೆ ಪ್ರವಾದಿ ಬಗ್ಗೆ ಚಿತ್ರ ರಚಿಸಿದಾಗ ಅಲ್-ಖೈದಾ ವಿಲ್ಕ್ಸ್ ನ ತಲೆಗೆ ಬಹುಮಾನ ಘೋಷಣೆ ಮಾಡಿತ್ತು. 2010 ರಲ್ಲಿ, ಇಬ್ಬರು ವ್ಯಕ್ತಿಗಳು ದಕ್ಷಿಣ ಸ್ವೀಡನ್‌ನಲ್ಲಿ ವಿಲ್ಕ್ಸ್ ಅವರ ಮನೆಯನ್ನು ಸುಡಲು ಪ್ರಯತ್ನಿಸಿದ್ದರು. 2020 ರಲ್ಲಿ, ಅಮೆರಿಕದ ಪೆನ್ಸಿಲ್ವೇನಿಯಾದ ಮಹಿಳೆಯೊಬ್ಬರು ಆತನನ್ನು ಕೊಲ್ಲುವ ಸಂಚಿನಲ್ಲಿ ಬಂಧನಕ್ಕೀಡಾಗಿ ತಪ್ಪೊಪ್ಪಿಕೊಂಡರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com