ಹೊಸ ಕೊರೋನಾ ವೈರಸ್ ತಳಿ ಪತ್ತೆ ಎಫೆಕ್ಟ್: ಸೆನ್ಸೆಕ್ಸ್ 1400 ಅಂಕ ಕುಸಿತ

ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ದುರ್ಬಲ ವಹಿವಾಟು ಮತ್ತು ಕೋವಿಡ್-19 ಡೆಲ್ಟಾ ವೈರಸ್ ಗಿಂತ ಹೆಚ್ಚು ಅಪಾಯಕಾರಿ ತಳಿ ಬೋಟ್ಸ್ ವಾನಾ ಪತ್ತೆಯಾದ ಪರಿಣಾಮ ಮುಂಬೈ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಉಂಟಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ದುರ್ಬಲ ವಹಿವಾಟು ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್-19 ಡೆಲ್ಟಾ ವೈರಸ್ ಗಿಂತ ಹೆಚ್ಚು ಅಪಾಯಕಾರಿ ತಳಿ ಬೋಟ್ಸ್ ವಾನಾ ಪತ್ತೆಯಾದ ಪರಿಣಾಮ ಮುಂಬೈ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಉಂಟಾಗಿದೆ.

ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಬಿಎಸ್‌ಇ ಸೆನ್ಸೆಕ್ಸ್ 1,400 ಅಂಕಗಳಿಗಿಂತಲೂ ಅಧಿಕ ಕುಸಿತ ಕಂಡಿದ್ದರೆ, ಎನ್ ಎಸ್ ಇ ನಿಫ್ಟಿ 50 ಸೂಚ್ಯಂಕ 400 ಅಂಕಗಳ ನಷ್ಟದೊಂದಿಗೆ 17,130ರ ಮಟ್ಟಕ್ಕೆ ಕುಸಿದಿದೆ.

ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ, ಎಚ್‌ಡಿಎಫ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಇನ್ಫೋಸಿಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೆನ್ಸೆಕ್ಸ್‌ನಲ್ಲಿ ಹಿನ್ನಡೆ ಅನುಭವಿಸಿರುವ ಪ್ರಮುಖ ಸಂಸ್ಥೆಗಳಾಗಿವೆ.

ಕೋವಿಡ್ 19 ಲಸಿಕೆಗೂ ಪ್ರತಿರೋಧ ಒಡ್ಡುವ ಸಾಧ್ಯತೆ ಇದೆ ಎನ್ನಲಾಗಿರುವ ಹೊಸ ಕೊರೊನಾ ವೈರಸ್ ತಳಿ ಪತ್ತೆಯಾದ ಬಳಿಕ ಹೂಡಿಕೆದಾರರು ಯೆನ್ ಮತ್ತು ಡಾಲರ್ ಬಾಂಡ್‌ಗಳ ಸುರಕ್ಷತೆಯ ಕಡೆಗೆ ಗಮನ ಹರಿಸಿದ್ದಾರೆ. ಇದರಿಂದ ಕಳೆದ ಎರಡು ತಿಂಗಳ ಅವಧಿಯಲ್ಲಿಯೇ ಏಷ್ಯಾದ ಷೇರುಗಳು ಶುಕ್ರವಾರ ಗಣನೀಯ ಕುಸಿತ ಕಂಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com