ಸ್ವಯಂಚಾಲಿತ ಮಾಹಿತಿ ವಿನಿಮಯದಡಿ ಭಾರತಕ್ಕೆ ಸ್ವಿಸ್ ಬ್ಯಾಂಕ್ ನ 3 ನೇ ಸೆಟ್ ವಿವರ ಲಭ್ಯ
ಸ್ವಯಂಚಾಲಿತ ಮಾಹಿತಿ ವಿನಿಮಯದಡಿ ಭಾರತಕ್ಕೆ ಸ್ವಿಸ್ ಬ್ಯಾಂಕ್ ಖಾತೆಗಳ ಮೂರಸ್ವಯಂಚಾಲಿತ ಮಾಹಿತಿ ವಿನಿಮಯದಡಿ ಭಾರತಕ್ಕೆ ಸ್ವಿಸ್ ಬ್ಯಾಂಕ್ ಖಾತೆಗಳ ಮೂರನೇ ಸೆಟ್ ವಿವರಗಳು ಲಭ್ಯವಾಗಿದೆ.ನೇ ಸೆಟ್ ವಿವರಗಳು ಲಭ್ಯವಾಗಿದೆ.
Published: 11th October 2021 05:47 PM | Last Updated: 11th October 2021 05:47 PM | A+A A-

ಸ್ವಿಸ್ ಬ್ಯಾಂಕ್ (ಸಾಂಕೇತಿಕ ಚಿತ್ರ)
ನವದೆಹಲಿ: ಸ್ವಯಂಚಾಲಿತ ಮಾಹಿತಿ ವಿನಿಮಯದಡಿ ಭಾರತಕ್ಕೆ ಸ್ವಿಸ್ ಬ್ಯಾಂಕ್ ಖಾತೆಗಳ ಮೂರನೇ ಸೆಟ್ ವಿವರಗಳು ಲಭ್ಯವಾಗಿದೆ.
ಈ ಬಾರಿ ಯುರೋಪಿಯನ್ ರಾಷ್ಟ್ರ 33 ಲಕ್ಷ ಆರ್ಥಿಕ ಖಾತೆಗಳನ್ನು 96 ರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ. ಸ್ವಿಟ್ಜರ್ಲ್ಯಾಂಡ್ ನ ಎಫ್ ಟಿಎ ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ್ದು ಈ ವರ್ಷ ಮಾಹಿತಿಯ ವಿನಿಮಯದ ಅಡಿಯಲ್ಲಿ ಈ ಬಾರಿ ಇನ್ನೂ 10 ಹೆಚ್ಚು ದೇಶಗಳು- ಆಂಟಿಗುವಾ ಮತ್ತು ಬಾರ್ಬುಡಾ, ಅಜೆರ್ಬೈಜಾನ್, ಡೊಮಿನಿಕಾ, ಘಾನಾ, ಲೆಬನಾನ್, ಮಕಾವು, ಪಾಕಿಸ್ತಾನ, ಕತಾರ್, ಸಮೋವಾ ಮತ್ತು ವನವಾಟುಗಳೊಂದಿಗೆ ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ಹೇಳಿದೆ.
70 ದೇಶಗಳೊಂದಿಗೆ ಮಾಹಿತಿ ಪರಸ್ಪರ ಹಂಚಿಕೊಳ್ಳಲಾಗಿದ್ದು ಸ್ವಿಟ್ಜರ್ಲ್ಯಾಂಡ್ 26 ರಾಷ್ಟ್ರಗಳೊಂದಿಗೆ ಮಾಹಿತಿಯನ್ನು ಪಡೆದಿದ್ದಷ್ಟೇ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಎಫ್ ಟಿಎ 96 ದೇಶಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಅಧಿಕಾರಿಗಳ ಪ್ರಕಾರ ಭಾರತ ಮೂರನೇ ವರ್ಷ ಸ್ವಿಸ್ ಖಾತೆಗಳ ವಿವರಗಳನ್ನು ಪಡೆದಿದ್ದು, ಸ್ವಿಸ್ ಆರ್ಥಿಕ ಸಂಸ್ಥೆಗಳಲ್ಲಿ ಖಾತೆಯನ್ನು ಹೊಂದಿರುವ ವೈಯಕ್ತಿಕ ಹಾಗೂ ಕಂಪನಿಗಳ ವಿವರ ಇದಾಗಿದೆ.
ಈ ಮಾಹಿತಿಯನ್ನು ಕಳೆದ ತಿಂಗಳು ಹಂಚಿಕೊಳ್ಳಲಾಗಿದ್ದು, 2022 ರ ಸೆಪ್ಟೆಂಬರ್ ತಿಂಗಳಲ್ಲಿ ಮತ್ತೊಂದು ಸುತ್ತಿನ ವಿವರಗಳನ್ನು ಹಂಚಿಕೊಳ್ಳಲಾಗುತ್ತದೆ. 2019 ರಲ್ಲಿ ಭಾರತ ಎಇಒಐ ಅಡಿಯಲ್ಲಿ ಸ್ವಿಸ್ ನಿಂದ ಮೊದಲ ಕಂತಿನ ವಿವರಗಳನ್ನು ಪಡೆದಿತ್ತು.