2022 ರ ಮೊದಲ ತ್ರೈಮಾಸಿಕದಿಂದ ಜೆಟ್ ಏರ್ವೇಸ್ ದೇಶೀಯ ಸೇವೆಗಳು ಪುನಾರಂಭ

ಜೆಟ್ ಏರ್ವೇಸ್ 2022 ರ ಮೊದಲ ತ್ರೈಮಾಸಿಕದಿಂದ ದೇಶೀಯ ವಿಮಾನಯಾನ ಸೌಲಭ್ಯಗಳನ್ನು ಪುನಾರಂಭ ಮಾಡಲಿದೆ.
ಜೆಟ್ ಏರ್ವೇಸ್
ಜೆಟ್ ಏರ್ವೇಸ್

ನವದೆಹಲಿ: ಜೆಟ್ ಏರ್ವೇಸ್ 2022 ರ ಮೊದಲ ತ್ರೈಮಾಸಿಕದಿಂದ ದೇಶೀಯ ವಿಮಾನಯಾನ ಸೌಲಭ್ಯಗಳನ್ನು ಪುನಾರಂಭ ಮಾಡಲಿದೆ.

ಸಂಸ್ಥೆಯ ಅಂತಾರಾಷ್ಟ್ರೀಯ ವಿಮಾನಗಳ ಸೇವೆ 2022 ರ ಕೊನೆಯ ತ್ರೈಮಾಸಿಕದಿಂದ ಪ್ರಾರಂಭವಾಗಲಿದೆ ಎಂದು ಏರ್ಲೈನ್ಸ್ ನ ಬಿಡ್ಡರ್ ವಿಜೇತ ಜಲನ್ ಕಲ್ರಾಕ್ ಒಕ್ಕೂಟ ಮಾಹಿತಿ ನೀಡಿದೆ.

ಮೊದಲ ಜೆಟ್ ಏರ್ವೇಸ್ ದೆಹಲಿ-ಮುಂಬೈ ಮಾರ್ಗವಾಗಿ ಸಂಚರಿಸಲಿದೆ. ಏರ್ ಲೈನ್ಸ್ ನ ಕೇಂದ್ರ ಕಚೇರಿ ಮುಂಬೈ ಬದಲಿಗೆ ದೆಹಲಿಗೆ ವರ್ಗಾವಣೆಯಾಗಲಿದೆ ಎಂದೂ ಸಂಸ್ಥೆ ತಿಳಿಸಿದೆ.

ಜೆಟ್ ಏರ್ವೇಸ್ ಇನ್ಸಾಲ್ವೆನ್ಸಿ ಪ್ರಕ್ರಿಯೆಗೆ ಒಳಪಟ್ಟ ಕಾರಣ ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ (ಎನ್ ಸಿಎಲ್ ಟಿ) ಈ ವರ್ಷದ ಜೂನ್ ನಲ್ಲಿ ಜನಲ್ ಕಾಲ್ರಾಕ್ ಒಕ್ಕೂಟದ ಪರಿಹಾರ ಯೋಜನೆಯನ್ನು ಅನುಮೋದಿಸಿತ್ತು. ಮೂರು ವರ್ಷಗಳಲ್ಲಿ 50ಕ್ಕೂ ಹೆಚ್ಚಿನ ಏರ್ ಕ್ರಾಫ್ಟ್ ಗಳನ್ನು ಪ್ರಾರಂಭಿಸುವುದಕ್ಕೆ ಹಾಗೂ 5 ವರ್ಷಗಳಲ್ಲಿ 100 ಕ್ಕೂ ಹೆಚ್ಚು ವಿಮಾನಗಳನ್ನು ಪ್ರಾರಂಭಿಸುವುದಕ್ಕೆ ಜೆಟ್ ಏರ್ವೇಸ್ 2.0 ಯೋಜನೆ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com