ಜಿಎಸ್ ಟಿ ಮಂಡಳಿ ಸಭೆ: ಪೆಟ್ರೋಲ್, ಡೀಸೆಲ್ ಜಿಎಸ್ ಟಿ ವ್ಯಾಪ್ತಿಯಿಂದ ಹೊರಗೆ, ಫುಡ್ ಡೆಲಿವರಿ ಆಪ್ ಗಳ ಮೇಲೆ ತೆರಿಗೆ 

ಸ್ವಿಗ್ಗಿ, ಝೊಮಾಟೊ ಇತ್ಯಾದಿ ಫುಡ್ ಡೆಲಿವರಿ ಆಪ್ ಗಳಿಗೆ ದರ ವಿಧಿಸಲು ಸರಕು ಮತ್ತು ಸೇವಾ ತೆರಿಗೆ ಮಂಡಳಿ ನಿರ್ಧರಿಸಿದೆ. ಇನ್ನು ಕೆಲವು ನಿರ್ದಿಷ್ಟ ಕೋವಿಡ್-19 ಔಷಧಗಳ ಮೇಲಿನ ರಿಯಾಯಿತಿ ತೆರಿಗೆ ದರವನ್ನು ಡಿಸೆಂಬರ್ 31ರವರೆಗೆ ಮೂರು ತಿಂಗಳ ಕಾಲ ವಿಸ್ತರಿಸಿದೆ.
ಜಿಎಸ್ ಟಿ ಮಂಡಳಿ ಸಭೆ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಜಿಎಸ್ ಟಿ ಮಂಡಳಿ ಸಭೆ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಲಕ್ನೊ: ಸ್ವಿಗ್ಗಿ, ಝೊಮಾಟೊ ಇತ್ಯಾದಿ ಫುಡ್ ಡೆಲಿವರಿ ಆಪ್ ಗಳಿಗೆ ದರ ವಿಧಿಸಲು ಸರಕು ಮತ್ತು ಸೇವಾ ತೆರಿಗೆ ಮಂಡಳಿ ನಿರ್ಧರಿಸಿದೆ. ಇನ್ನು ಕೆಲವು ನಿರ್ದಿಷ್ಟ ಕೋವಿಡ್-19 ಔಷಧಗಳ ಮೇಲಿನ ರಿಯಾಯಿತಿ ತೆರಿಗೆ ದರವನ್ನು ಡಿಸೆಂಬರ್ 31ರವರೆಗೆ ಮೂರು ತಿಂಗಳ ಕಾಲ ವಿಸ್ತರಿಸಿದೆ.

ಈ ವಿಷಯವನ್ನು ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಜಿಎಸ್ ಟಿ ಮಂಡಳಿಯಲ್ಲಿ ಕೇಂದ್ರ ಹಣಕಾಸು ಸಚಿವೆ ಮತ್ತು ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿರುತ್ತಾರೆ. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲು ಮಂಡಳಿ ನಿರ್ಧರಿಸಿದೆ. ಏಕೆಂದರೆ ಪ್ರಸ್ತುತ ಅಬಕಾರಿ ಸುಂಕ ಮತ್ತು ವ್ಯಾಟ್ ಅನ್ನು ಒಂದು ರಾಷ್ಟ್ರೀಯ ದರಕ್ಕೆ ಇಳಿಸುವುದು ಆದಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂದಾಜಿಸಿದೆ.

ಕೋಟ್ಯಂತರ ರೂಪಾಯಿ ವೆಚ್ಚದ ಝೊಲ್ಗೆನ್ಸಮ ಮತ್ತು ವಿಲ್ಟೆಪ್ಸೊಗಳಂತಹ ಔಷಧಗಳ ಮೇಲೆ ಜಿಎಸ್ಟಿ ವಿನಾಯಿತಿ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಮಂಡಳಿಯ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಇಂದಿನ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು: ಕೆಲವು ಕೋವಿಡ್ ಸಂಬಂಧಿತ ಔಷಧಿಗಳ ಮೇಲಿನ ರಿಯಾಯಿತಿ ದರಗಳ ಅವಧಿಯನ್ನು ಮೂರು ತಿಂಗಳುಗಳವರೆಗೆ ಡಿಸೆಂಬರ್ 31 ರವರೆಗೆ ವಿಸ್ತರಿಸುವುದು. ಆದರೆ ವೈದ್ಯಕೀಯ ಸಾಧನಗಳಿಗೆ ರಿಯಾಯಿತಿ ಅನ್ವಯವಾಗುವುದಿಲ್ಲ. 

ಕೆಲವು ವೈದ್ಯಕೀಯ ಸಲಕರಣೆಗಳ ಮೇಲೆ ರಿಯಾಯಿತಿ ಈ ತಿಂಗಳ 30ಕ್ಕೆ ಕೊನೆಗೊಳ್ಳುತ್ತದೆ.ಸ್ವಿಗ್ಗಿ, ಝೊಮಾಟೊದಂತಹ ಆನ್ ಲೈನ್ ಫುಡ್ ಡೆಲಿವರಿ ಆಪ್ ಗಳ ಮೇಲೆ ಶೇಕಡಾ 5ರಷ್ಟು ಜಿಎಸ್ ಟಿ ವಿಧಿಸಲು ನಿರ್ಧಾರ.

ಅಲ್ಲದೆ, ಕೌನ್ಸಿಲ್ ಜಿಎಸ್‌ಟಿ ದರವನ್ನು ಶೇಕಡಾ 12 ರಿಂದ ಶೇಕಡಾ 5ಕ್ಕೆ ಮತ್ತು ಕ್ಯಾನ್ಸರ್ ಸಂಬಂಧಿತ ಕಂಬಳಿಗಳು ಮತ್ತು ಬಲವರ್ಧಿತ ಅಕ್ಕಿ ಕಾಳುಗಳ ಮೇಲೆ ಶೇಕಡಾ 18 ರಿಂದ ಶೇಕಡಾ 5ಕ್ಕೆ ಜಿಎಸ್ ಟಿ ದರ ಇಳಿಸಲು ನಿರ್ಧರಿಸಲಾಗಿದೆ.

ಡೀಸೆಲ್ ಮಿಶ್ರಣ ಜೈವಿಕ ಡೀಸೆಲ್ ಮೇಲಿನ ಜಿಎಸ್‌ಟಿ ದರವನ್ನು ಶೇಕಡಾ 12 ರಿಂದ ಶೇಕಡಾ 5ಕ್ಕೆ ಇಳಿಸಲಾಗಿದೆ, ಆದರೆ ಸರಕು ಸಾಗಣೆಗೆ ರಾಷ್ಟ್ರೀಯ ಅನುಮತಿ ಶುಲ್ಕವನ್ನು ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ.

ಗುತ್ತಿಗೆ ಪಡೆದ ವಿಮಾನಗಳ ಆಮದುಗೂ ಐ-ಜಿಎಸ್‌ಟಿ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಎಲ್ಲಾ ರೀತಿಯ ಪೆನ್ನುಗಳ ಮೇಲೆ ಶೇ 18 ರಷ್ಟು ಜಿಎಸ್‌ಟಿ ವಿಧಿಸಲು ಸಮಿತಿಯು ನಿರ್ಧರಿಸಿದೆ. ನಿರ್ದಿಷ್ಟಪಡಿಸಿದ ನವೀಕರಿಸಬಹುದಾದ ವಲಯ ಸಾಧನಗಳಿಗೆ ಶೇಕಡಾ 12 ತೆರಿಗೆ ವಿಧಿಸಲಾಗುತ್ತದೆ. ಜನವರಿ 1ರಿಂದ ಪಾದರಕ್ಷೆ ಮತ್ತು ಜವಳಿಗಳಿಗೆ ಹೊಸ ದರಗಳನ್ನು ವಿಧಿಸಲು ಜಿಎಸ್‌ಟಿ ಕೌನ್ಸಿಲ್ ಶಿಫಾರಸು ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com