ಚೀನಾ ಸ್ಮಾರ್ಟ್‌ಫೋನ್ ಮಾರಾಟ ಹೊಸ ಕನಿಷ್ಠ ಮಟ್ಟಕ್ಕೆ ಕುಸಿತ; ಡಿಮ್ಯಾಂಡ್ ಹೆಚ್ಚಿಸಿಕೊಂಡ 'ಹಾನರ್'

ಭಾರತದಲ್ಲಿ ಚೀನಾದ ಸ್ಮಾರ್ಟ್‌ಫೋನ್‌ಗಳ ಮಾರಾಟವು ಗಣನೀಯವಾಗಿ ಕುಸಿದಿದ್ದು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 14.2 ರಷ್ಟು ಮಾರಾಟ ಕುಸಿದಿದೆ ಎಂದು ಹೊಸ ವರದಿಯಲ್ಲಿ ಹೇಳಲಾಗಿದೆ.
ಚೀನಾ ಸ್ಮಾರ್ಟ್ ಫೋನ್ ಗಳು
ಚೀನಾ ಸ್ಮಾರ್ಟ್ ಫೋನ್ ಗಳು
Updated on

ನವದೆಹಲಿ: ಭಾರತದಲ್ಲಿ ಚೀನಾದ ಸ್ಮಾರ್ಟ್‌ಫೋನ್‌ಗಳ ಮಾರಾಟವು ಗಣನೀಯವಾಗಿ ಕುಸಿದಿದ್ದು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 14.2 ರಷ್ಟು ಮಾರಾಟ ಕುಸಿದಿದೆ ಎಂದು ಹೊಸ ವರದಿಯಲ್ಲಿ ಹೇಳಲಾಗಿದೆ.

2016 ರ ನಾಲ್ಕನೇ ತ್ರೈಮಾಸಿಕದಲ್ಲಿ ಐತಿಹಾಸಿಕ ಗರಿಷ್ಠ ಮಾರಾಟ ಮಟ್ಟಕ್ಕೆ ತಲುಪಿದ್ದ ಚೀನಾದ ಸ್ಮಾರ್ಟ್‌ಫೋನ್‌ಗಳ ಮಾರಾಟ ಪ್ರಮಾಣವು ಇದೀಗ ಅರ್ಧಕ್ಕಿಂತ ಕಡಿಮೆ ಅಂದರೆ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 14.2 ರಷ್ಟು ಮಾರಾಟ ಕುಸಿದಿದೆ.

ಕೌಂಟರ್‌ಪಾಯಿಂಟ್ ರಿಸರ್ಚ್ ಪ್ರಕಾರ, ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಶೇ.19.8 ರಷ್ಟು ಪಾಲನ್ನು ಹೊಂದಿರುವ Vivo Q2 ನಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ, ನಂತರ Honor (18.3%) ಮತ್ತು OPPO (17.9%) ಸಂಸ್ಥೆಯ ಸ್ಮಾರ್ಟ್ ಫೋನ್ ಗಳಿವೆ. ಇದು ಕೋವಿಡ್ ಸಾಂಕ್ರಾಮಿಕದ Q1 2020 ರಲ್ಲಿ ಕಂಡುಬಂದ ಮಟ್ಟಕ್ಕಿಂತ 12.6 ಶೇಕಡಾ ಕಡಿಮೆಯಾಗಿದೆ ಎಂದು ಹೇಳಲಾಗಿದೆ. 

ಈ ಕುರಿತು ಮಾಹಿತ ನೀಡಿರುವ ಹಿರಿಯ ವಿಶ್ಲೇಷಕ ಇವಾನ್ ಲ್ಯಾಮ್ ಅವರು, "ಈ ಅವಧಿಯಲ್ಲಿ, ಹಣಕಾಸು ಮತ್ತು ಉತ್ಪಾದನಾ ಕೇಂದ್ರವಾದ ಪ್ಯಾನ್-ಶಾಂಘೈ ಸೇರಿದಂತೆ ಚೀನಾದಾದ್ಯಂತ ಪ್ರಮುಖ ನಗರಗಳು ಪೂರ್ಣ ಅಥವಾ ಭಾಗಶಃ ಲಾಕ್‌ಡೌನ್‌ಗಳ ಮೂಲಕ ಸಾಗಿದವು. ಮೊದಲ ತ್ರೈಮಾಸಿಕದಲ್ಲಿ ಶೇಕಡಾ 4 ರಷ್ಟು ಬೆಳವಣಿಗೆಯಿಂದ ಸಂಕೋಚನ ಪ್ರದೇಶಕ್ಕೆ ಬಿದ್ದ ಸೇವಾ ವಲಯವು ಕಠಿಣವಾದ ಹೊಡೆತವಾಗಿದೆ. ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 0.4 ಕ್ಕೆ ಕುಸಿದಿದೆ. ಅಂತೆಯೇ ದುರ್ಬಲ ಗ್ರಾಹಕರ ಮನೋಭಾವವು ಚೀನಾದಲ್ಲಿ ಹೆಚ್ಚಿನ ಸ್ಮಾರ್ಟ್‌ಫೋನ್ ಸರಣಿ ಆರಂಭ ಮತ್ತು ದರ ಸಮರದೊಂದಿಗೆ ಸೇರಿಕೊಂಡು ಸ್ಮಾರ್ಟ್‌ಫೋನ್ ಮಾರಾಟದ Q2 ಕಾರ್ಯಕ್ಷಮತೆ ಕುಸಿದಿದೆ ಮತ್ತು ಕಳಪೆಯಾಗಿದೆ ಎಂದು ಹೇಳಿದ್ದಾರೆ.

ಇನ್ನು ಹಾಲಿ ತ್ರೈಮಾಸಿಕದಲ್ಲಿ, ಭಾರತೀಯ ಮಾರುಕಟ್ಟೆಯಲ್ಲಿ ವಿವೋ ಸಂಸ್ಥೆ ತನ್ನ ನಾಯಕತ್ವವನ್ನು ಉಳಿಸಿಕೊಂಡಿದ್ದು, ಶೇ.19.8 ರಷ್ಟು ಮಾರಾಟ ಪಾಲನ್ನು ಹೊಂದಿದೆ. ಇದೇ ವಿಚಾರವಾಗಿ ಮಾತನಾಡಿರುವ ಸಂಶೋಧನಾ ವಿಶ್ಲೇಷಕ ಮೆಂಗ್‌ಮೆಂಗ್ ಜಾಂಗ್ ಅವರು, "ವಿವೋ ಕಂಪನಿಯ ಮಧ್ಯಮ ಹಂತದಿಂದ ಉನ್ನತ ಮಟ್ಟದ S12 ಸರಣಿಯು vivo $250- $399 ವಿಭಾಗದಲ್ಲಿ ಉತ್ತಮ ಪಾಲನ್ನು ಪಡೆದುಕೊಳ್ಳಲು ಸಹಾಯ ಮಾಡಿತು. ಉಪ-ಬ್ರಾಂಡ್ iQOO ಸಹ ಧನಾತ್ಮಕ ಮಾರುಕಟ್ಟೆ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಉಳಿದಂತೆ ಹಾನರ್ ತನ್ನ ಆಫ್‌ಲೈನ್ ಉಪಸ್ಥಿತಿಯನ್ನು ವಿಸ್ತರಿಸುವ ಮೂಲಕ ತನ್ನ ಉತ್ತಮ ಪುನರಾಗಮನವನ್ನು ಮುಂದುವರೆಸಿದ್ದು, "ಹಾನರ್ ತ್ರೈಮಾಸಿಕದಲ್ಲಿ Huawei ಸೇರಿದಂತೆ ಎಲ್ಲಾ ಪ್ರಮುಖ ಚೈನೀಸ್ ಬ್ರ್ಯಾಂಡ್‌ಗಳಿಂದ ಪಾಲನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. OPPO ಮತ್ತು Vivo ಸಂಸ್ಥೆಗಳು ಇದೀಗ Honor ಅನ್ನು ಗಂಭೀರವಾಗಿ ಪರಿಗಣಿಸುವ ಸಮಯ ಬಂದಿದೆ ಎಂದು ಜಾಂಗ್ ಹೇಳಿದ್ದಾರೆ.

ಆಪಲ್ ಇನ್ನೂ ತುಲನಾತ್ಮಕವಾಗಿ ಉತ್ತಮ ಕಾರ್ಯಕ್ಷಮತೆಯನ್ನು ಕಾಣುತ್ತಿದ್ದು, Q2 ನಲ್ಲಿ ಐಫೋನ್ 13 ಸರಣಿಯ ಮಾರಾಟ ಪ್ರಮಾಣ ಹೆಚ್ಚಿದೆ.  
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com