ಭಾರತದ ಸೇವಾ ವಲಯ (ಸಂಗ್ರಹ ಚಿತ್ರ)
ವಾಣಿಜ್ಯ
ಭಾರತದ ಸೇವಾ ವಲಯದ ಚಟುವಟಿಕೆ 6 ತಿಂಗಳಲ್ಲೇ ಅತ್ಯಧಿಕ ಕುಸಿತ!
ಭಾರತದ ಸೇವಾ ವಲಯದ ಚಟುವಟಿಕೆಗಳು 6 ತಿಂಗಳಲ್ಲೇ ಅತ್ಯಧಿಕ ಕುಸಿತ ಕಂಡಿದೆ.
ನವದೆಹಲಿ: ಭಾರತದ ಸೇವಾ ವಲಯದ ಚಟುವಟಿಕೆಗಳು 6 ತಿಂಗಳಲ್ಲೇ ಅತ್ಯಧಿಕ ಕುಸಿತ ಕಂಡಿದೆ. ಇದು ಸೆಪ್ಟೆಂಬರ್ ತಿಂಗಳ ಕುಸಿತವಾಗಿದ್ದು, ಮಾರ್ಚ್ ನಿಂದ ಸಣ್ಣ ಉದ್ಯಮಗಳ ಆದಾಯ ಅತ್ಯಂತ ಕಡಿಮೆ ದರದಲ್ಲಿ ಏರಿಕೆ ಕಂಡಿದೆ ಎಂದು ಮಾಸಿಕ ಸಮೀಕ್ಷೆ ಮೂಲಕ ತಿಳಿದುಬಂದಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಪಿಎಂಐ ಉದ್ಯಮ ಚಟುವಟಿಕೆ ಸೂಚ್ಯಂಕ ಶೇ.54.3 ಕ್ಕೆ ಕುಸಿದಿದ್ದು, ಆಗಸ್ಟ್ ತಿಂಗಳಲ್ಲಿ ಇದು ಶೇ.57.2 ರಷ್ಟಿತ್ತು. ಮಾರ್ಚ್ ನಿಂದ ಇದೇ ಮೊದಲ ಬಾರಿಗೆ ಸೂಚ್ಯಂಕ ಇಷ್ಟು ಕಡಿಮೆ ಪ್ರಮಾಣಕ್ಕೆ ಕುಸಿತ ಕಂಡಿದೆ.
ಸತತ 14 ನೇ ತಿಂಗಳಲ್ಲಿ ಸೇವಾ ವಲಯ ಉತ್ಪತ್ತಿಯಲ್ಲಿ ವಿಸ್ತರಣೆ ದಾಖಲಿಸಿದೆ. ಇತ್ತೀಚಿನ ತಿಂಗಳುಗಳಲ್ಲಿ ಭಾರತದ ಸೇವಾ ವಲಯ ಹಲವು ಸಮಸ್ಯೆಗಳನ್ನು ಎದುರಿಸಿ ನಿಂತಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಬೆಳವಣಿಗೆಯ ವೇಗದಲ್ಲಿ ನಷ್ಟ ತೋರಿಸುತ್ತಿದ್ದರೂ ಬಲವಾದ ಕ್ಷಮತೆಯನ್ನು ಹೊಂದಿದೆ ಎಂದು ಎಸ್&ಪಿ ಗ್ಲೋಬಲ್ ಮಾರ್ಕೆಟ್ ಇಂಟಲಿಜೆನ್ಸ್ ನ ಆರ್ಥಿಕತೆಯ ವಿಭಾಗದ ಪೊಲಿಯಾನಾ ಡಿ ಲಿಮಾ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ