ಇನ್ನೊಂದು ತಿಂಗಳಲ್ಲಿ 5 ಜಿ ಸೇವೆ ಪ್ರಾರಂಭ: ಟೆಲಿಕಾಂ ಖಾತೆ ರಾಜ್ಯ ಸಚಿವ

ಬಹುನಿರೀಕ್ಷಿತ ಹೈ ಸ್ಪೀಡ್ 5 ಜಿ ಸೇವೆಗಳನ್ನು ಇನ್ನೊಂದು ತಿಂಗಳಲ್ಲಿ ಪ್ರಾರಂಭಿಸುವ ನಿರೀಕ್ಷೆ ಇದೆ ಎಂದು ಟೆಲಿಕಾಮ್ ಖಾತೆ ರಾಜ್ಯ ಸಚಿವ ದೇವುಸಿನ್ಹಾ ಚೌಹಾಣ್ ಹೇಳಿದ್ದಾರೆ. 
5 ಜಿ (ಸಾಂಕೇತಿಕ ಚಿತ್ರ)
5 ಜಿ (ಸಾಂಕೇತಿಕ ಚಿತ್ರ)

ನವದೆಹಲಿ: ಬಹುನಿರೀಕ್ಷಿತ ಹೈ ಸ್ಪೀಡ್ 5 ಜಿ ಸೇವೆಗಳನ್ನು ಇನ್ನೊಂದು ತಿಂಗಳಲ್ಲಿ ಪ್ರಾರಂಭಿಸುವ ನಿರೀಕ್ಷೆ ಇದೆ ಎಂದು ಟೆಲಿಕಾಮ್ ಖಾತೆ ರಾಜ್ಯ ಸಚಿವ ದೇವುಸಿನ್ಹಾ ಚೌಹಾಣ್ ಹೇಳಿದ್ದಾರೆ. 

ಅಂತಾರಾಷ್ಟ್ರೀಯ ಟೆಲಿಕಮ್ಯುನಿಕೇಷನ್ ಯೂನಿಯನ್ ನ ಏಷ್ಯಾ ಹಾಗೂ ಓಷಿಯಾನಿಯಾಗಳ ಪ್ರಾದೇಶಿಕ ಪ್ರಮಾಣೀಕರಣ ವೇದಿಕೆ (ಆರ್ ಎಸ್ಎಫ್) ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಚೌಹಾಣ್, ಭಾರತ ವರ್ಷಾಂತ್ಯಕ್ಕೆ ದೇಶೀಯವಾಗಿ ಅಭುವೃದ್ಧಿಪಡಿಸಿರುವ ಹಾಗೂ ಉತ್ಪಾದಿಸಿರುವ 5 ಜಿ ಟೆಲಿಕಾಮ್ ಉಪಕರಣಗಳನ್ನು ನಿಯೋಜಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

5 ಜಿ ಸೇವೆಗಳು ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಯ ಮೇಲೆ ಹಲವು ಪ್ರಯೋಜನಕಾರಿ ಪರಿಣಾಮಗಳನ್ನುಂಟುಮಾಡಲಿದೆ ಎಂದು ಹೇಳಿದ್ದಾರೆ. ಈ ನಡುವೆ 6 ಜಿ ಟೆಕ್ನಾಲಜಿ ಇನ್ನೋವೇಟೀವ್ ಗ್ರೂಪ್ ನ್ನು ಸ್ಥಾಪಿಸಲಾಗಿದ್ದು, ದೇಶೀಯವಾಗಿ 6 ಜಿ ಅಭಿವೃದ್ಧಿಯತ್ತ ಕೆಲಸ ಮಾಡುತ್ತಿದೆ ಎಂದು ಚೌಹಾಣ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com