ತಮ್ಮ ಹೆಚ್ಚುವರಿ ವಿಮಾನಗಳ ಹಾರಾಟಕ್ಕೆ ದುಬೈನಿಂದ ಒತ್ತಡ: ಇದು ಭಾರತದ ವಿಮಾನಯಾನ ಸಂಸ್ಥೆಗಳಿಗೆ ಮಾರಕ
ಎರಡು ದೇಶಗಳ ನಡುವಿನ ಸೀಟುಗಳನ್ನು ವಾರಕ್ಕೆ ಇನ್ನೂ 50,000 ಹೆಚ್ಚಿಸುವಂತೆ ಯುಎಇ ಭಾರತ ಸರಕಾರದ ಮೇಲೆ ಒತ್ತಡ ಹೇರಿದ್ದು, ಈ ಬೆಳವಣಿಗೆಯು ಭಾರತದಲ್ಲಿನ ವಿಮಾನಯಾನ ಸಂಸ್ಥೆಗಳಿಗೆ ಮಾರಕ ಹೊಡೆತ ನೀಡುವ ಸಾಧ್ಯತೆ ಇದೆ.
Published: 25th August 2022 12:09 AM | Last Updated: 25th August 2022 12:44 AM | A+A A-

ದುಬೈ ವಿಮಾನ ನಿಲ್ದಾಣ
ನವದೆಹಲಿ: ಎರಡು ದೇಶಗಳ ನಡುವಿನ ಸೀಟುಗಳನ್ನು ವಾರಕ್ಕೆ ಇನ್ನೂ 50,000 ಹೆಚ್ಚಿಸುವಂತೆ ಯುಎಇ ಭಾರತ ಸರಕಾರದ ಮೇಲೆ ಒತ್ತಡ ಹೇರಿದ್ದು, ಈ ಬೆಳವಣಿಗೆಯು ಭಾರತದಲ್ಲಿನ ವಿಮಾನಯಾನ ಸಂಸ್ಥೆಗಳಿಗೆ ಮಾರಕ ಹೊಡೆತ ನೀಡುವ ಸಾಧ್ಯತೆ ಇದೆ.
ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರದ ಮಹಾನಿರ್ದೇಶಕ ಮೊಹಮ್ಮದ್ ಎ ಅಹ್ಲಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ಬರೆದಿರುವ ಪತ್ರದಲ್ಲಿ ದುಬೈನಿಂದ ಅಮೃತಸರ, ತಿರುಚಿರಾಪಳ್ಳಿ, ಕೊಯಮತ್ತೂರು, ಕಣ್ಣೂರು, ಗೋವಾ, ಭುವನೇಶ್ವರ್, ಗುವಾಹಟಿ ಮತ್ತು ಪುಣೆಗೆ ಹೆಚ್ಚುವರಿ ಸೀಟುಗಳಿಗೆ ಅವಕಾಶ ನೀಡುವಂತೆ ಭಾರತವನ್ನು ಕೋರಿದ್ದಾರೆ. ಹೆಚ್ಚುವರಿ ವಾಹಕಗಳಿಗೆ ಅನುಮೋದಿಸಿದರೆ, ಇವು ಯುಎಇ ವಿಮಾನ ಸಂಸ್ಥೆಗಳಿಗೆ ಹೆಚ್ಚು ಲಾಭದಾಯಕವಾಗಲಿದೆ.
ಗಲ್ಫ್ ವಿಮಾನಯಾನ ಸಂಸ್ಥೆಗಳ ಹೆಚ್ಚಿನ ಸೀಟುಗಳ ಬೇಡಿಕೆಯನ್ನು ಭಾರತೀಯ ವಿಮಾನಯಾನ ಸಂಸ್ಥೆಗಳು ತೀವ್ರವಾಗಿ ವಿರೋಧಿಸುತ್ತಿವೆ. ಯುಎಇಯ ಪ್ರಮುಖ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ಈಗಾಗಲೇ ಭಾರತ ಮತ್ತು ಯುಎಇ ನಡುವೆ ಕೆಲವು ಲಾಭದಾಯಕ ಮಾರ್ಗಗಳನ್ನು ನಿರ್ವಹಿಸುತ್ತಿದೆ. ವಿಮಾನಯಾನ ಸಂಸ್ಥೆಯು ಪ್ರಸ್ತುತ ಭಾರತದ ಒಂಬತ್ತು ನಗರಗಳಾದ ದೆಹಲಿ, ಮುಂಬೈ, ಅಹಮದಾಬಾದ್, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಚ್ಚಿ, ಕೋಲ್ಕತ್ತಾ ಮತ್ತು ತಿರುವನಂತಪುರಂಗಳಿಂದ ಕಾರ್ಯನಿರ್ವಹಿಸುತ್ತಿದೆ.
ಅಲ್ಲಿಂದ ಹೆಚ್ಚಿನ ವಿಮಾನಗಳಿಗೆ ಅವಕಾಶ ನೀಡುವಂತೆ ಯುಎಇ ಭಾರತ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಈ ಹಿಂದೆ, ಎಮಿರೇಟ್ಸ್ ಅಧ್ಯಕ್ಷ ಟಿಮ್ ಕ್ಲಾರ್ಕ್ ಭಾರತೀಯ ವಿಮಾನಯಾನ ಸಂಸ್ಥೆಗಳ ವಿರೋಧವನ್ನು ಬದಿಗಿಟ್ಟಿದ್ದರು. ಅಲ್ಲದೆ ಹೆಚ್ಚಿನ ಮಾರ್ಗಗಳನ್ನು ತೆರೆಯುವಂತೆ ಭಾರತ ಸರ್ಕಾರವನ್ನು ಕೇಳಿದ್ದರು.