ಅದಾನಿ ಗ್ರೂಪ್‌ನ ಗೌತಮ್ ಅದಾನಿ ಈಗ ವಿಶ್ವದ 3ನೇ ಶ್ರೀಮಂತ ವ್ಯಕ್ತಿ!

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಈಗ ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಗೌತಮ್ ಅದಾನಿ
ಗೌತಮ್ ಅದಾನಿ

ನವದೆಹಲಿ: ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಈಗ ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

137.4 ಬಿಲಿಯನ್ ಡಾಲರ್‌ (10.97 ಲಕ್ಷ ಕೋಟಿ ರೂ.) ಸಂಪತ್ತನ್ನು ಹೊಂದಿರುವ 60 ವರ್ಷದ ಅದಾನಿ ಅವರು, ಲೂಯಿಸ್ ವಿಟಾನ್ ಕಂಪನಿಯ ಅಧ್ಯಕ್ಷ ಅರ್ನಾಲ್ಟ್ ಅವರ ಸಂಪತ್ತನ್ನು ಮೀರಿಸಿರುವ ಅದಾನಿ ಇದೀಗ, ಅಮೆರಿಕದ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮತ್ತು ಅಮೆಜಾನ್‌‌ನ ಜೆಫ್ ಬೆಜೋಸ್ ಅವರ ನಂತರದ ಸ್ಥಾನದಲ್ಲಿದ್ದಾರೆ.

ಇತ್ತೀಚಿನ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಒಟ್ಟು 91.9 ಶತಕೋಟಿ ಡಾಲರ್‌ ಮೌಲ್ಯದೊಂದಿಗೆ 11ನೇ ಸ್ಥಾನದಲ್ಲಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಮೊದಲ ಮೂರರಲ್ಲಿ ಸ್ಥಾನ ಪಡೆದ ಏಷ್ಯಾ ಉದ್ಯಮಿ ಎಂಬ ಹೆಗ್ಗಳಿಕೆಗೂ ಅದಾನಿ ಪಾತ್ರರಾಗಿದ್ದಾರೆ.

ಎಲಾನ್ ಮಸ್ಕ್ ಮತ್ತು ಜೆಫ್ ಬೆಜೋಸ್ ಅವರ ನಿವ್ವಳ ಮೌಲ್ಯವು ಸದ್ಯ ಕ್ರಮವಾಗಿ 251 ಶತಕೋಟಿ ಡಾಲರ್ ಮತ್ತು 153 ಬಿಲಿಯನ್ ಡಾಲರ್ ಆಗಿದೆ.

ಪಟ್ಟಿ ಮಾಡಲಾದ ಅದಾನಿ ಸಮೂಹ ಇತರೆ ಕಂಪನಿಗಳೆಂದರೆ ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ, ಅದಾನಿ ಪವರ್, ಅದಾನಿ ಟೋಟಲ್ ಗ್ಯಾಸ್ ಮತ್ತು ಅದಾನಿ ಟ್ರಾನ್ಸ್‌ಮಿಷನ್.

ಪ್ರಮುಖ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್ ಕಳೆದ 5 ವರ್ಷಗಳಲ್ಲಿ, ವಿಮಾನ ನಿಲ್ದಾಣಗಳು, ಸಿಮೆಂಟ್, ತಾಮ್ರ ಸಂಸ್ಕರಣೆ, ಡೇಟಾ ಸೆಂಟರ್‌ಗಳು, ಗ್ರೀನ್ ಹೈಡ್ರೋಜನ್, ಪೆಟ್ರೋಕೆಮಿಕಲ್ ರಿಫೈನಿಂಗ್, ರಸ್ತೆಗಳು ಮತ್ತು ಸೌರ ಕೋಶಗಳ ಉತ್ಪಾದನೆಯನ್ನು ಒಳಗೊಂಡಿರುವ ಹೊಸ ಕ್ಷೇತ್ರಗಳಿಗೂ ವಿಸ್ತರಣೆಯಾಗಿದೆ.

ಮುಂದುವರಿದು ಟೆಲಿಕಾಂ ಕ್ಷೇತ್ರಕ್ಕೂ ಕಾಲಿಡಲು ಯೋಚಿಸುತ್ತಿರುವ ಅದಾನಿ ಸಮೂಹ, ಇತ್ತೀಚೆಗೆ 5ಜಿ ಹರಾಜಿನಲ್ಲಿ ತರಂಗಾಂತರಗಳನ್ನು ಖರೀದಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟಾಟಾ ಗ್ರೂಪ್ ನಂತರ ಅದಾನಿ ಗ್ರೂಪ್ ಭಾರತದಲ್ಲಿ ಮೂರನೇ ಅತಿದೊಡ್ಡ ಸಂಘಟಿತ ಸಂಸ್ಥೆಯಾಗಿದೆ.

ಇತ್ತೀಚೆಗೆ, ಅದಾನಿ ಗ್ರೂಪ್ ಒಡಿಶಾದಲ್ಲಿ 4.1 mtpa ಇಂಟಿಗ್ರೇಟೆಡ್ ಅಲ್ಯೂಮಿನಾ ಸಂಸ್ಕರಣಾಗಾರ ಮತ್ತು 30 mtpa ಕಬ್ಬಿಣದ ಅದಿರು ಶುದ್ಧೀಕರಣ ಘಟಕವನ್ನು ಸ್ಥಾಪಿಸುವ ಯೋಜನೆಯನ್ನು ಪ್ರಕಟಿಸಿತು. ಇದಕ್ಕಾಗಿ 580 ಶತಕೋಟಿಗೂ ಹೆಚ್ಚು ವೆಚ್ಚವಾಗಬಹುದು.

ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಲಿಟಿ ಅಡಿಯಲ್ಲಿ, ಅದಾನಿ ಗ್ರೂಪ್ ವಿಶೇಷವಾಗಿ ಗ್ರಾಮೀಣ ಭಾರತದ ಮೇಲೆ ಕೇಂದ್ರೀಕರಿಸಿರುವ ಆರೋಗ್ಯ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ದತ್ತಿ ಚಟುವಟಿಕೆಗಳಿಗೆ 60,000 ಕೋಟಿ ರೂಪಾಯಿಗಳನ್ನು ನೀಡಲು ನಿರ್ಧರಿಸಿದೆ ಎಂದು ಅವರು ಜುಲೈ ಅಂತ್ಯದಲ್ಲಿ ನಡೆದ ಸಮೂಹದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರಿಗೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com