ದಾಖಲೆ ಕನಿಷ್ಟ ಮಟ್ಟಕ್ಕೆ ರೂಪಾಯಿ ಮೌಲ್ಯ ಕುಸಿತ ಪ್ರತಿ ಡಾಲರ್ ಗೆ 78 ರೂ.

ಏರುತ್ತಿರುವ ಹಣದುಬ್ಬರದ ವಿರುದ್ಧ ಹೋರಾಡುವ ಉದ್ದೇಶದಿಂದ ಈ ವಾರ ನಿರೀಕ್ಷಿತ ಅಮೆರಿಕ ಬಡ್ಡಿದರ ಏರಿಕೆಗೆ ಮುಂಚಿತವಾಗಿಯೇ ಭಾರತೀಯ ರೂಪಾಯಿ ಮೌಲ್ಯ ಸೋಮವಾರ ದಾಖಲೆಯ ಮಟ್ಟಕ್ಕೆ ಕುಸಿದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಏರುತ್ತಿರುವ ಹಣದುಬ್ಬರದ ವಿರುದ್ಧ ಹೋರಾಡುವ ಉದ್ದೇಶದಿಂದ ಈ ವಾರ ನಿರೀಕ್ಷಿತ ಅಮೆರಿಕ ಬಡ್ಡಿದರ ಏರಿಕೆಗೆ ಮುಂಚಿತವಾಗಿಯೇ ಭಾರತೀಯ ರೂಪಾಯಿ ಮೌಲ್ಯ ಸೋಮವಾರ ದಾಖಲೆಯ ಮಟ್ಟಕ್ಕೆ ಕುಸಿದಿದೆ.

ದೇಶದ ಆರ್ಥಿಕತೆ ಚೇತರಿಕೆ ಹಾದಿಯಲ್ಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ರೂಪಾಯಿ ಮೌಲ್ಯ (Rupee Value) ಕುಸಿಯುತ್ತಿರುವುದು ಹೊಸ ಆತಂಕ ತಂದೊಡ್ಡಿದೆ. ಅಮೆರಿಕದ ಡಾಲರ್ (American Dollor) ಎದುರು ರೂಪಾಯಿ ಮೌಲ್ಯವು ಸೋಮವಾರ (ಜೂನ್ 13) ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ವಿವಿಧ ದೇಶಗಳಲ್ಲಿ ಷೇರುಪೇಟೆ  (Share Market) ಕುಸಿಯುತ್ತಿರುವುದು ಮತ್ತು ಬಾಂಡ್​ಗಳ ಯೀಲ್ಡ್ (Bond Yield) ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ. ಆದರೆ ಅಮೆರಿಕದ ಡಾಲರ್​ನತ್ತ ಹೂಡಿಕೆದಾರರ ಆಸಕ್ತಿ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ರೂಪಾಯಿ ಸೇರಿದಂತೆ ಹಲವು ದೇಶಗಳ ಕರೆನ್ಸಿಗಳ ಮೌಲ್ಯ ಕುಸಿತ ಕಾಣುತ್ತಿದೆ.

ಭಾರತವೂ ಸೇರಿದಂತೆ ಏಷ್ಯಾದ ಷೇರುಪೇಟೆಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹಣ ಹಿಂದಕ್ಕೆ ತೆಗೆಯುವುದನ್ನು ಮುಂದುವರಿಸಿದ್ದು, ಇದೂ ಸಹ ಷೇರುಪೇಟೆಯ ಬಗ್ಗೆ ಹೂಡಿಕೆದಾರರಲ್ಲಿ ಗೊಂದಲ ಮೂಡಿಸಿದೆ. ಬಹುತೇಕರು ಕಾದುನೋಡುವ ತಂತ್ರಕ್ಕೆ ಶರಣಾಗಿದ್ದು, ಇಂಟರ್​ಬ್ಯಾಂಕ್ ಫಾರಿನ್ ಎಕ್ಸ್​ಚೇಂಜ್​ನಲ್ಲಿ ಭಾರತದ ರೂಪಾಯಿಯು ಅಮೆರಿಕದ ಡಾಲರ್ ಎದುರು  78.20 ರೂ ಮೌಲ್ಯದೊಂದಿಗೆ ವಹಿವಾಟು ಆರಂಭಿಸಿತು. ನಂತರ ಒಮ್ಮೆಲೆ 78.29 ರೂಗೆ ಕುಸಿಯಿತು. ಇದು ಹಿಂದಿನ ವಹಿವಾಟಿನ ಮೌಲ್ಯಕ್ಕೆ ಹೋಲಿಸಿದರೆ 36 ಪೈಸೆ ಕಡಿಮೆ ಮತ್ತು ಸಾರ್ವಕಾನಿಕ ಕನಿಷ್ಠ ಮೊತ್ತ ಎನಿಸಿದೆ. ಕಳೆದ ಶುಕ್ರವಾರ ಭಾರದ ರೂಪಾಯಿ ಅಮೆರಿಕದ ಡಾಲರ್ ಎದುರು 19 ಪೈಸೆಗಳಷ್ಟು ಮೌಲ್ಯ ಕಳೆದುಕೊಂಡು,  77.93ರ ಮೌಲ್ಯದಲ್ಲಿ ವಹಿವಾಟು ನಡೆಸಿತ್ತು.

ವಿಶ್ವದ ಪೆಟ್ರೋಲಿಯಂ ಉತ್ಪನ್ನಗಳ ಬೆಂಚ್​ಮಾರ್ಕ್​ ಎನಿಸಿದ ಬ್ರೆಂಟ್ ಕ್ರೂಡ್​ ಫ್ಯೂಚರ್ಸ್​ ಸಹ ಪ್ರತಿ ಬ್ಯಾರೆಲ್​ಗೆ ಶೇ 1.46ರಷ್ಟು ಕಡಿಮೆಯಾಗಿದೆ. ಒಂದು ಬ್ಯಾರೆಲ್​ ಕಚ್ಚಾತೈಲಕ್ಕೆ 120.23 ಡಾಲರ್ ಮುಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com