2021-22ರ ಅತೀ ದೊಡ್ಡ ಉದ್ಯೋಗ ಕಡಿತ: 11 ಸಾವಿರ ನೌಕರರ ತೆಗೆದು ಹಾಕಿದ ಫೇಸ್ ಬುಕ್ ಮಾತೃಸಂಸ್ಥೆ ಮೆಟಾ!

ಫೇಸ್ ಬುಕ್ ಮಾತೃಸಂಸ್ಥೆ ಮೆಟಾ ಹಾಲಿ ವರ್ಷದ ಅತೀ ದೊಡ್ಡ ಪ್ರಮಾಣದ ಉದ್ಯೋಹ ಕಡಿತಕ್ಕೆ ಮುಂದಾಗಿದ್ದು, ಜಗತ್ತಿನಾದ್ಯಂತ ತನ್ನ ಸುಮಾರು 11 ಸಾವಿರ ಉದ್ಯೋಗಿಗಳನ್ನು ಸೇವೆಯಿಂದ ತೆಗೆದುಹಾಕಿದೆ ಎನ್ನಲಾಗಿದೆ.
ಮೆಟಾ ಮತ್ತು ಫೇಸ್ ಬುಕ್
ಮೆಟಾ ಮತ್ತು ಫೇಸ್ ಬುಕ್

ವಾಷಿಂಗ್ಟನ್: ಫೇಸ್ ಬುಕ್ ಮಾತೃಸಂಸ್ಥೆ ಮೆಟಾ ಹಾಲಿ ವರ್ಷದ ಅತೀ ದೊಡ್ಡ ಪ್ರಮಾಣದ ಉದ್ಯೋಹ ಕಡಿತಕ್ಕೆ ಮುಂದಾಗಿದ್ದು, ಜಗತ್ತಿನಾದ್ಯಂತ ತನ್ನ ಸುಮಾರು 11 ಸಾವಿರ ಉದ್ಯೋಗಿಗಳನ್ನು ಸೇವೆಯಿಂದ ತೆಗೆದುಹಾಕಿದೆ ಎನ್ನಲಾಗಿದೆ.

ಜಗತ್ತಿನಾದ್ಯಂತ ದೊಡ್ಡ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಕಡಿತ ಗಂಭೀರ ಮಟ್ಟದಲ್ಲಿ ನಡೆಯುತ್ತಿದ್ದು, ಟ್ವಿಟ್ಟರ್, ಅಮೆಜಾನ್, ಆ್ಯಪಲ್ ಕಂಪನಿಗಳ ಬಳಿಕ ಈಗ ಫೇಸ್ ಬುಕ್ ಮಾತೃಸಂಸ್ಥೆ ಮೆಟಾ ಕೂಡ ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಸೇವೆಯಿಂದ ವಜಾ ಮಾಡಿದೆ. ಇಂದಿನಿಂದ ಮೆಟಾ ಸಂಸ್ಛೆಯಡಿಯಲ್ಲಿರುವ ಫೇಸ್ ಬುಕ್, ಇನ್ ಸ್ಟಾಗ್ರಾಮ್, ವಾಟ್ಸಪ್ ಕಂಪನಿಗಳ ಸುಮಾರು 11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ಸಂಸ್ಥೆ ಹೇಳಿದೆ.

ಈ ಹಿಂದೆಯೇ ಈ ಬಗ್ಗೆ ಖುದ್ದು ಸಂಸ್ಥೆಯ ಮುಖ್ಯಸ್ಥ ವಾರ್ಕ್ ಜುಕರ್ ಬರ್ಗ್ ಮಾಹಿತಿ ನೀಡಿದ್ದು, 'ಮೆಟಾ ಪ್ಲಾಟ್ ಫಾರ್ಮ್ಸ್ ಇಂಕ್ ಬುಧವಾರದಂದು ಉದ್ಯೋಗಿಗಳನ್ನು ವಜಾ ಮಾಡಲು ಪ್ರಾರಂಭಿಸುತ್ತದೆ. ಕಂಪನಿಯ ಕುಸಿತಕ್ಕೆ ತಾವು ಜವಾಬ್ದಾರರಾಗಿದ್ದು, ಕಂಪನಿಯ ತಪ್ಪು ಹೆಜ್ಜೆಗಳ ಜವಾಬ್ದಾರಿಯನ್ನು ವಹಿಸಿಕೊಂಡು ಈ ಬೆಳವಣಿಗೆಯ ಬಗ್ಗೆ ಅವರು ಅತಿಯಾದ ಆಶಾವಾದವೇ ಅತಿಯಾದ ಸಿಬ್ಬಂದಿ ನೇಮಕಕ್ಕೆ ಕಾರಣವಾಯಿತು ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಜಾಗತಿಕವಾಗಿ ಸುಮಾರು 87,000 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಮೆಟಾವು 11 ಸಾವಿರ ಉದ್ಯೋಗಿಗಳು ಅಂದರೆ ತಮ್ಮ ಒಟ್ಟಾರೆ ಉದ್ಯೋಗಿಗಳ ಪೈಕಿ ಶೇ.13ಕ್ಕಿಂತ ಹೆಚ್ಚಿನ ಪ್ರಮಾಣದ ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದು ಟೆಕ್ ಉದ್ಯಮ ಹಿಮ್ಮೆಟ್ಟುವಿಕೆ ಕಂಡ ಒಂದು ವರ್ಷದಲ್ಲಿ ಪ್ರಮುಖ ತಂತ್ರಜ್ಞಾನ ಸಂಸ್ಥೆಯಲ್ಲಿ ಇಲ್ಲಿಯವರೆಗಿನ ಅತಿದೊಡ್ಡ ಕಡಿತವಾಗಿದೆ. ಅಂತೆಯೇ ಕಂಪನಿಯ 18 ವರ್ಷಗಳ ಇತಿಹಾಸದಲ್ಲಿ ಸಂಭವಿಸಿದ ಮೊದಲ ದೊಡ್ಡ ಉದ್ಯೋಗ ಕಡಿತವಾಗಿದೆ.  2021-22ರ ವಿತ್ತೀಯ ವರ್ಷದ ಅತೀ ದೊಡ್ಡ ಉದ್ಯೋಗ ಕಡಿತವಾಗಿದೆ ಎಂದೂ ಹೇಳಲಾಗಿದೆ.

ವಜಾಗೊಂಡವರಿಗೆ 4 ತಿಂಗಳ ವೇತನ
ಇನ್ನು ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಲೋರಿ ಗೋಲರ್ ಈ ಬಗ್ಗೆ ಮಾತನಾಡಿ, ಉದ್ಯೋಗ ಕಳೆದುಕೊಳ್ಳುವ ಉದ್ಯೋಗಿಗಳಿಗೆ ಕನಿಷ್ಠ 4 ತಿಂಗಳ ವೇತನವನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com