ಮುಂದಿನ ವಾರದಿಂದ ಮೂರು ಬಣ್ಣಗಳೊಂದಿಗೆ ಟ್ವಿಟರ್ ಖಾತೆಗಳ ಪರಿಶೀಲನೆ: ಸಿಇಒ ಎಲೋನ್ ಮಸ್ಕ್
ಕೊನೆಗೂ ಟ್ವಿಟರ್ ಖಾತೆ ಪರಿಶೀಲನೆ ಕಾರ್ಯ ಮುಂದಿನ ವಾರದಿಂದ ಪ್ರಾರಂಭವಾಗಲಿದೆ. ಸಿಇಒ ಎಲೋನ್ ಮಸ್ಕ್, ಮೈಕ್ರೋಬ್ಲಾಗಿಂಗ್ ಸೈಟ್ ನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ.
Published: 25th November 2022 08:26 PM | Last Updated: 19th December 2022 11:17 AM | A+A A-

ಎಲೋನ್ ಮಸ್ಕ್
ನ್ಯೂಯಾರ್ಕ್: ಕೊನೆಗೂ ಟ್ವಿಟರ್ ಖಾತೆ ಪರಿಶೀಲನೆ ಕಾರ್ಯ ಮುಂದಿನ ವಾರದಿಂದ ಪ್ರಾರಂಭವಾಗಲಿದೆ. ಸಿಇಒ ಎಲೋನ್ ಮಸ್ಕ್, ಮೈಕ್ರೋಬ್ಲಾಗಿಂಗ್ ಸೈಟ್ ನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ.
ವಿಳಂಬಕ್ಕೆ ಕ್ಷಮಿಸಿ, ಮುಂದಿನ ವಾರ ಶುಕ್ರವಾರದಂದು ನಾವು ತಾತ್ಕಾಲಿಕವಾಗಿ ಪರಿಶೀಲನಾ ಕಾರ್ಯ ಪ್ರಾರಂಭಿಸುತ್ತಿದ್ದೇವೆ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಕಂಪನಿಗಳಿಗೆ ಚಿನ್ನದ ಬಣ್ಣ, ಸರ್ಕಾರಕ್ಕೆ ಬೂದು ಬಣ್ಣ ಮತ್ತು ವ್ಯಕ್ತಿಗಳಿಗೆ (ಸೆಲೆಬ್ರಿಟಿ ಅಥವಾ ಇಲ್ಲದಿರಲಿ) ನೀಲಿ ಬಣ್ಣ ಇರಲಿದೆ ಮತ್ತು ಚೆಕ್ ಮಾಡುವ ಮುನ್ನ ಎಲ್ಲಾ ಪರಿಶೀಲಿಸಿದ ಖಾತೆಗಳನ್ನು ಕೈಯಾರೆ ದೃಢೀಕರಿಸಲಾಗುವುದು ಎಂದು ಸ್ಪೆಸ್ ಎಕ್ಸ್ ಮಾಲೀಕರು ಹೇಳಿದ್ದಾರೆ.
ಇದನ್ನೂ ಓದಿ: ಮೆಟಾ, ಟ್ವಿಟರ್, ಅಮೇಜಾನ್ ನ ಮಾಜಿ ಉದ್ಯೋಗಿಗಳಿಗೆ ನೌಕರಿ ನೀಡಲು ಟಾಟಾ ಸಂಸ್ಥೆ ಮುಂದು!
ವಿವಿಧ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ವಿಭಿನ್ನ ಬಣ್ಣಗಳ ಬಳಕೆ ಬಗ್ಗೆ ಅವರು ಈ ಹಿಂದೆ ಟ್ವೀಟ್ ಮಾಡಿದ್ದರು ಆದರೆ ಇತ್ತೀಚೆಗೆ ವಿವರಗಳನ್ನು ಹೊರಹಾಕಿದ್ದಾರೆ. ಪರಿಶೀಲಿಸಿದ ವೈಯಕ್ತಿಕ ಖಾತೆಗಳು ನೀಲಿ ಬಣ್ಣವನ್ನು ಹೊಂದಿರುತ್ತವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.