2ನೇ ತ್ರೈಮಾಸಿಕ ಜಿಡಿಪಿ ಕುಸಿತದ ನಡುವೆಯೂ ಭಾರತದ್ದು ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ!

ಭಾರತದ ಆರ್ಥಿಕ ಬೆಳವಣಿಗೆ ಜುಲೈ-ಸೆಪ್ಟೆಂಬರ್ ಅವಧಿಯ 2ನೇ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆ ಶೇ.6.3ಕ್ಕೆ ನಿಧಾನಗತಿಯಾಗಿದೆ. 
ಜಿಡಿಪಿ
ಜಿಡಿಪಿ

ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆ ಜುಲೈ-ಸೆಪ್ಟೆಂಬರ್ ಅವಧಿಯ 2ನೇ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆ ಶೇ.6.3ಕ್ಕೆ ನಿಧಾನಗತಿಯಾಗಿದೆ. 

ಉತ್ಪಾದನಾ ಹಾಗೂ ಗಣಿ ಕ್ಷೇತ್ರಗಳಲ್ಲಿನ ಕಳಪೆ ಕ್ಷಮತೆಯಿಂದಾಗಿ ಆರ್ಥಿಕ ಬೆಳವಣಿಗೆ ಶೇ.6.3 ಕ್ಕೆ ಇಳಿದಿದೆ ಎನ್ನುತ್ತಿವೆ ಅಧಿಕೃತ ಅಂಕಿ-ಅಂಶಗಳು. 

ಚೀನಾದಲ್ಲಿ ಆರ್ಥಿಕ ಬೆಳಣಿಗೆ ಇದೇ ಅವಧಿಯಲ್ಲಿ ಶೇ.3.9 ಕ್ಕೆ ಇಳಿಕೆಯಾಗಿದ್ದು, ಭಾರತದ ಆರ್ಥಿಕತೆ ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ.

2021-22 ರ ಜುಲೈ-ಸೆಪ್ಟೆಂಬರ್ ನಲ್ಲಿ ಭಾರತದ ಆರ್ಥಿಕತೆ ಶೇ.8.4 ರಷ್ಟು ಬೆಳವಣಿಗೆ ಸಾಧಿಸಿತ್ತು. ಈ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ.13.5 ರಷ್ಟು ವಿಸ್ತರಿಸಿತ್ತು... ಎರಡನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ಆರ್ ಬಿಐ ನ ಪ್ರಕ್ಷೇಪಕ್ಕೆ ಹತ್ತಿರವಿದ್ದು, ಆರ್ ಬಿಐ ಶೇ.6.1 ರಷ್ಟು ಅಂದಾಜಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com