ಇಂದಿನಿಂದಲೇ ಬೆಂಗಳೂರು ಸೇರಿದಂತೆ ದೇಶದ ಎಂಟು ನಗರಗಳಲ್ಲಿ ಏರ್‌ಟೆಲ್ 5ಜಿ ಸೇವೆ ಲಭ್ಯ
ಭಾರ್ತಿ ಏರ್‌ಟೆಲ್‌ನ 5ಜಿ ಸೇವೆಯು ಎಂಟು ನಗರಗಳಲ್ಲಿ ಶನಿವಾರದಿಂದ ಲಭ್ಯವಾಗಲಿದೆ ಎಂದು ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಅವರು ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ತಿಳಿಸಿದ್ದಾರೆ.
Published: 01st October 2022 03:41 PM | Last Updated: 01st October 2022 07:09 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಭಾರ್ತಿ ಏರ್‌ಟೆಲ್‌ನ 5ಜಿ ಸೇವೆಯು ಎಂಟು ನಗರಗಳಲ್ಲಿ ಶನಿವಾರದಿಂದ ಲಭ್ಯವಾಗಲಿದೆ ಎಂದು ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಅವರು ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ತಿಳಿಸಿದ್ದಾರೆ.
ಭಾರ್ತಿ ಏರ್‌ಟೆಲ್ ದೇಶದಲ್ಲಿ 5G ಸೇವೆಗಳನ್ನು ಪ್ರಾರಂಭಿಸುವ ಮೊದಲ ಕಂಪನಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅ.01 ರಂದು 5G ಸೇವೆಯನ್ನು ಪ್ರಾರಂಭಿಸಿದಾಗ ಏರ್‌ಟೆಲ್‌ನಿಂದ 8 ನಗರಗಳಾದ ದೆಹಲಿ, ಮುಂಬೈ, ವಾರಣಾಸಿ, ಬೆಂಗಳೂರು ಮತ್ತು ಇತರ ನಗರಗಳಲ್ಲಿ 5G ಸೇವೆ ಲಭ್ಯವಿರುತ್ತದೆ ಎಂದು ಮಿತ್ತಲ್ ಹೇಳಿದ್ದಾರೆ.
ಮಾರ್ಚ್ 2023ರ ವೇಳೆಗೆ ದೇಶದಾದ್ಯಂತ ಹಲವಾರು ನಗರಗಳಲ್ಲಿ ಮತ್ತು ಮಾರ್ಚ್ 2024 ರ ವೇಳೆಗೆ ಭಾರತದಾದ್ಯಂತ 5G ಸೇವೆಗಳನ್ನು ಏರ್‌ಟೆಲ್ ಹೊರತರಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ: 5ಜಿ ಸೇವೆಗೆ ಪ್ರಧಾನಿ ಮೋದಿ ಚಾಲನೆ: ದೇಶದ ಟೆಲಿಕಾಂ ತಂತ್ರಜ್ಞಾನದಲ್ಲಿ ಹೊಸ ಶಕೆ ಆರಂಭ
ಕಂಪನಿಯ ಹಿರಿಯ ಅಧಿಕಾರಿಯ ಪ್ರಕಾರ, ಚೆನ್ನೈ, ಹೈದರಾಬಾದ್ ಮತ್ತು ಸಿಲಿಗುರಿಯಲ್ಲಿಯೂ 5G ಸೇವೆಗಳನ್ನು ಪ್ರಾರಂಭಿಸಲಾಗುತ್ತಿದೆ. ಏರ್‌ಟೆಲ್ 5G ಸೇವೆಗಳು ಅಸ್ತಿತ್ವದಲ್ಲಿರುವ 4G ದರಗಳಲ್ಲಿ ಲಭ್ಯವಿರುತ್ತವೆ ಮತ್ತು 5G ಗಾಗಿ ಹೊಸ ಸುಂಕವನ್ನು ಸ್ವಲ್ಪ ಸಮಯದ ನಂತರ ಪ್ರಕಟಿಸಲಾಗುತ್ತಿದೆ.