ಗೂಗಲ್ ಗೆ ಸ್ಪರ್ಧಾತ್ಮಕ ಆಯೋಗದಿಂದ 1,337 ಕೋಟಿ ರೂ. ದಂಡ

ಸ್ಪರ್ಧಾತ್ಮಕ ಆಯೋಗ ಗೂಗಲ್ ಸಂಸ್ಥೆಗೆ 1,337 ಕೋಟಿ ರೂಪಾಯಿ ದಂಡ ವಿಧಿಸಿದೆ. ಆಂಡ್ರಾಯ್ಡ್ ಮೊಬೈಲ್ ಡಿವೈಸ್ ಸಂಬಂಧಿತ ಬಹು ಮಾರುಕಟ್ಟೆಗಳಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಈ ದಂಡವನ್ನು ವಿಧಿಸಿದೆ.
ಗೂಗಲ್ ಸಾಂದರ್ಭಿಕ ಚಿತ್ರ
ಗೂಗಲ್ ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತೀಯ ಸ್ಪರ್ಧಾತ್ಮಕ ಆಯೋಗ ಗೂಗಲ್ ಸಂಸ್ಥೆಗೆ 1,337 ಕೋಟಿ ರೂಪಾಯಿ ದಂಡ ವಿಧಿಸಿದೆ. ಆಂಡ್ರಾಯ್ಡ್ ಮೊಬೈಲ್ ಡಿವೈಸ್ ಸಂಬಂಧಿತ ಬಹು ಮಾರುಕಟ್ಟೆಗಳಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಈ ದಂಡವನ್ನು ವಿಧಿಸಿದೆ.

ಅಲ್ಲದೆ, ಅನ್ಯಾಯದ ವ್ಯವಹಾರವನ್ನು ನಿಲ್ಲಿಸುವಂತೆ ಇಂಟರ್ನೆಟ್ ದೈತ್ಯ ಸಂಸ್ಥೆಗೆ ನ್ಯಾಯೋಚಿತ ವ್ಯಾಪಾರ ನಿಯಂತ್ರಕವು ನಿರ್ದೇಶಿಸಿದೆ. ನಿರ್ದಿಷ್ಟ ಸಮಯದೊಳಗೆ ತನ್ನ ನಡತೆಯನ್ನು ಸರಿಪಡಿಸಿಕೊಳ್ಳುವಂತೆ ಭಾರತೀಯ ಸ್ಪರ್ಧಾತ್ಮಕ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ. 

2019 ಏಪ್ರಿಲ್ ನಲ್ಲಿ ದೇಶದಲ್ಲಿ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್‌ಫೋನ್‌ ಗ್ರಾಹಕರ ದೂರುಗಳ ನಂತರ ನಿಯಂತ್ರಕರು ಈ ವಿಷಯದಲ್ಲಿ ವಿವರವಾದ ತನಿಖೆಗೆ ಆದೇಶಿಸಿತ್ತು. 

ಮೊಬೈಲ್ ಆ್ಯಪ್ ವಿತರಣೆ ಒಪ್ಪಂದ  (ಎಂಎಡಿಎ) ಮತ್ತುವಿಘಟನೆ  ವಿರೋಧಿ ಒಪ್ಪಂದ ( ಎಎಫ್ ಎ) ಸಂಬಂಧಿಸಿದಂತೆ  ಅಕ್ರಮ ವ್ಯವಹಾರದ ಆರೋಪ ಕೇಳಿಬಂದಿದೆ. ಮಾರುಕಟ್ಟೆಯಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ  ಗೂಗಲ್ ಸಂಸ್ಥೆಗೆ 1,337 ಕೋಟಿ ರೂ. ದಂಡ ವಿಧಿಸಿರುವುದಾಗಿ ಭಾರತೀಯ ಸ್ಪರ್ಧಾತ್ಮಕ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com