ದೇಶದ ಮೊದಲ ಆ್ಯಪಲ್ ಸ್ಟೋರ್ ಗೆ ಸಿಇಒ ಟಿಮ್ ಕುಕ್ ಚಾಲನೆ!

ಐಕಾನಿಕ್ ಗ್ರಾಹಕ ತಂತ್ರಜ್ಞಾನ ಕಂಪನಿ ಆಪಲ್‌ನ ದೇಶದ ಮೊದಲ ಚಿಲ್ಲರೆ ಅಂಗಡಿ ಮಂಗಳವಾರ ಕಾರ್ಯಾರಂಭ ಮಾಡಿದೆ.
ಆ್ಯಪಲ್ ಮಳಿಗೆ ಚಾಲನೆ ನೀಡಿದ ಟಿಮ್ ಕುಕ್
ಆ್ಯಪಲ್ ಮಳಿಗೆ ಚಾಲನೆ ನೀಡಿದ ಟಿಮ್ ಕುಕ್

ಮುಂಬೈ: ಐಕಾನಿಕ್ ಗ್ರಾಹಕ ತಂತ್ರಜ್ಞಾನ ಕಂಪನಿ ಆಪಲ್‌ನ ದೇಶದ ಮೊದಲ ಚಿಲ್ಲರೆ ಅಂಗಡಿ ಮಂಗಳವಾರ ಕಾರ್ಯಾರಂಭ ಮಾಡಿದೆ.

ಆ್ಯಪಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಟಿಮ್ ಕುಕ್ ಗ್ರಾಹಕರಿಗೆ ತಮ್ಮ ಭಾರತದ ಮೊದಲ ಚಿಲ್ಲರೆ ಮಳಿಗೆಯ ಬಾಗಿಲು ತೆರೆಯುವ ಮೂಲಕ ಮಳಿಗೆಗೆ ಚಾಲನೆ ನೀಡಿದರು. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ನಲ್ಲಿರುವ ಮಾಲ್‌ನಲ್ಲಿ ಅಮೆರಿಕ ಮೂಲದ ಕ್ಯುಪರ್ಟಿನೊ ಕಂಪನಿಯು ತನ್ನ ಮಳಿಗೆಯನ್ನು ತೆರೆಯುವುದಾಗಿ ಘೋಷಿಸಿತ್ತು. ಅಂದಿನಿಂದ ಈ ಹೊಸ ಮಳಿಗೆ ಎಂದು ಆರಂಭವಾಗುತ್ತದೆಯೊ ಎಂದು ಮುಂಬೈ ಗ್ರಾಹಕರು ತುದಿಗಾಲಲ್ಲಿ ನಿಂತಿದ್ದರು. 

ಹರ್ಷೋದ್ಗಾರದ ನಡುವೆ, ಬಾಗಿಲು ತೆರೆಯಲು ಮತ್ತು ಅತಿಥಿಗಳನ್ನು ವೈಯಕ್ತಿಕವಾಗಿ ಸ್ವಾಗತಿಸಲು ಕುಕ್ ಅಂಗಡಿಯ ಒಳಗಿನಿಂದ ಹೊರಬಂದರು.  ಇದೀಗ ಕೊನೆಗೂ ಮಳಿಗೆ ಲೋಕಾರ್ಪಣೆಯಾಗಿದ್ದು. ನೂರಾರು ಗ್ರಾಹಕರು ತಮ್ಮ ನೆಚ್ಚಿನ ಆ್ಯಪಲ್ ವಸ್ತುಗಳನ್ನು ಖರೀದಿಸಲು ಮುಂದಾಗಿದ್ದಾರೆ.

ಈ ಹೊಸ ಮಳಿಗೆಯಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಗುರುವಾರ ದೆಹಲಿಯ ಸಾಕೇತ್‌ನಲ್ಲಿ ಮತ್ತೊಂದು ಮಳಿಗೆಯನ್ನು ಪ್ರಾರಂಭಿಸಲು ಆ್ಯಪಲ್ ಸಂಸ್ಥೆ ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com