ಜಿ20 ಶೃಂಗಸಭೆ: ಜಾಗತಿಕ ತಾಪಮಾನ ಏರಿಕೆಯಿಂದ ಭಾರತದ ಮೇಲೂ ಕೆಟ್ಟ ಪರಿಣಾಮ

ಜಾಗತಿಕ ತಾಪಮಾನ ಹೆಚ್ಚಳದಿಂದ ದಕ್ಷಿಣ ವಲಯದಲ್ಲಿ ಉಂಟಾಗಲಿರುವ ಹವಮಾನ ವೈಪರಿತ್ಯದ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ಭಾರಿ ಸಮಸ್ಯೆ ಎದುರಿಸಬೇಕಾಗಲಿದೆ ಎಂಬ ಅಂಶವನ್ನು ಅಬ್ಸರ್ವ್‌ ರಿಸರ್ಚ್‌ ಫೌಂಡೇಶನ್‌ ಹಾಗೂ ದಸ್ರಾ ಸಂಸ್ಥೆಯು ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜಿ20 ಶೃಂಗಸಭೆ
ಜಿ20 ಶೃಂಗಸಭೆ

ಮೈಸೂರು: ಜಾಗತಿಕ ತಾಪಮಾನ ಹೆಚ್ಚಳದಿಂದ ದಕ್ಷಿಣ ವಲಯದಲ್ಲಿ ಉಂಟಾಗಲಿರುವ ಹವಮಾನ ವೈಪರಿತ್ಯದ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ಭಾರಿ ಸಮಸ್ಯೆ ಎದುರಿಸಬೇಕಾಗಲಿದೆ ಎಂಬ ಅಂಶವನ್ನು ಅಬ್ಸರ್ವ್‌ ರಿಸರ್ಚ್‌ ಫೌಂಡೇಶನ್‌ ಹಾಗೂ ದಸ್ರಾ ಸಂಸ್ಥೆಯು ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜಿ20 ಶೃಂಗಸಭೆಯ ಭಾಗವಾಗಿ ಬಿಡುಗಡೆ ಮಾಡಿದ ವರದಿಯಾದ 'ಇಂಟರ್‌ಸೆಕ್ಷನಾಲಿಟಿ ಆಫ್‌ ಕ್ಲೈಮೇಟ್‌ ಚೇಂಜ್‌ ಮತ್ತು ಎಸ್‌ಡಿಜಿಎಸ್‌ ಇನ್‌ ದಿ ಗ್ಲೋಬಲ್‌ ಸೌಂತಿಂಗ್‌-20 ಥಿಂಕ್ 20ನಲ್ಲಿ ಈ ವಿಷಯವನ್ನು ಉಲ್ಲೇಖಿಸಲಾಗಿದೆ. 

ಈ ಕುರಿತು ಮಾತನಾಡಿದ ದಸ್ರಾ ಇಂಡಿಯಾ ಸಂಸ್ಥೆಯ ಮ್ಯಾನೇಜಿಂಗ್‌ ಪಾಟ್ನರ್‌ ನೀರಾ ನುಂಡಿ, ಜಾಗತಿಕ ತಾಪಮಾನವನ್ನು ಕೆಲವರಿಂದ ಮಾತ್ರ ಸರಿ ಪಡಿಸಲು ಸಾಧ್ಯವಿಲ್ಲ. ವಾಣಿಜ್ಯೀಕರಣ, ಜಾಗತೀಕರಣದಿಂದ ಭೂಭಾಗಗಳ ತಾಪಮಾನ ವಿಪರೀತ ಏರಿಕೆಯಾಗುತ್ತಿದೆ. ಇದರಿಂದ ಹವಾಮಾನದ ಮೇಲೂ ಈಗಾಗಲೇ ಪರಿಣಾಮ ಬೀರತೊಡಗಿದೆ. ಇದು ಹೀಗೆ ಮುಂದುವರೆಯುತ್ತಾ ಸಾಗಿದರೆ, ಮುಂದಿನ ದಿನಗಳಲ್ಲಿಇಡೀ ಮನುಕುಲವೇ ಕಷ್ಟಪಡುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಇನ್ನು ವರದಿಯ ಪ್ರಕಾರ, ಹವಾಮಾನ ಬದಲಾವಣೆಯ ಪರಿಣಾಮದಿಂದಾಗಿ 181 ದೇಶಗಳ ಪೈಕಿ ಅಪಾಯದಲ್ಲಿರುವ ದೇಶಗಳ ಪೈಕಿ ಭಾರತವು ೫ನೇ ಸ್ಥಾನದಲ್ಲಿರುವ ಆತಂಕಕಾರಿ ವಿಷಯವನ್ನು ವ್ಯಕ್ತಪಡಿಸಲಾಗಿದೆ. ಭಾರತದ ಅಗ್ರ 5 ನಗರಗಳು ತಾಪಮಾನ ಏರಿಕೆಗೆ ಶೇ.10ರಷ್ಟು ಕೊಡುಗೆ ನೀಡುತ್ತಿವೆ. ಮುಂದಿನ ದಿನಗಳಲ್ಲಿ ಈ ಇಂತಹ ನಗರಗಳು ಹೆಚ್ಚಲಿವೆ. ಹೀಗಾಗಿ ಸರ್ಕಾರವು ಈ ಬಗ್ಗೆ ಹೆಚ್ಚು ಜಾಗೃತಿ ವಹಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು.

ಜಾಗತಿಕ ವ್ಯವಸ್ಥೆಯ ಸಾಮಾಜಿಕ, ಆರೋಗ್ಯ ಮತ್ತು ಪರಿಸರದಲ್ಲಿ ಬೆಳವಣಿಗೆ ಕಾಣಲು ಜಾಗತಿಕ ಮಟ್ಟದಲ್ಲಿ ಸಮೂಹ ಸಹಕಾರ ನೀಡುವುದು. ಖಾಸಗಿ, ಸಾವರ್ಜನಿಕ, ನಾಗರಿಕ, ಲೋಕೋಪಕಾರಿ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಪರಿಸರ ಸಂರಕ್ಷಣೆ, ಸರ್ಕಾರದಿಂದ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಕುರಿತಂತೆ ತಮ್ಮ ತಮ್ಮ ನಗರಗಳಲ್ಲಿ ಕಟ್ಟುನಿಟ್ಟಿನ ಕ್ರಮವಹಿಸುವುದು ಸೇರಿದಂತೆ ಹಲವು ರೀತಿಯ ಸಲಹೆಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com