ಭಾರತದಲ್ಲಿ 19 ಮಿಲಿಯನ್ ಕ್ರಿಪ್ಟೋ ಹೂಡಿಕೆದಾರರು; ಶೇ.75 ರಷ್ಟು ಮಂದಿ ಯುವಕರು!

ಭಾರತದಲ್ಲಿ 19 ಮಿಲಿಯನ್ ಮಂದಿ ಕ್ರಿಪ್ಟೋ ಹೂಡಿಕೆದಾರರಿದ್ದು, ಪ್ರಮುಖ ಮೆಟ್ರೋ ನಗರಗಳಾದ ದೆಹಲಿ, ಬೆಂಗಳೂರು, ಹಾಗೂ ಮುಂಬೈ ದೇಶದ ಒಟ್ಟಾರೆ ಹೂಡಿಕೆಯ 5 ನೇ ಒಂದು ಪಾಲನ್ನು ಹೊಂದಿವೆ.
ಕ್ರಿಪ್ಟೋ ಕರೆನ್ಸಿ
ಕ್ರಿಪ್ಟೋ ಕರೆನ್ಸಿ

ನವದೆಹಲಿ: ಭಾರತದಲ್ಲಿ 19 ಮಿಲಿಯನ್ ಮಂದಿ ಕ್ರಿಪ್ಟೋ ಹೂಡಿಕೆದಾರರಿದ್ದು, ಪ್ರಮುಖ ಮೆಟ್ರೋ ನಗರಗಳಾದ ದೆಹಲಿ, ಬೆಂಗಳೂರು, ಹಾಗೂ ಮುಂಬೈ ದೇಶದ ಒಟ್ಟಾರೆ ಹೂಡಿಕೆಯ 5 ನೇ ಒಂದು ಪಾಲನ್ನು ಹೊಂದಿವೆ.

ವಿನಿಮಯ ವೇದಿಕೆ ಕಾಯಿನ್ ಸ್ವಿಚ್ ನೀಡಿರುವ ಮಾಹಿತಿಯ ಪ್ರಕಾರ ಹೂಡಿಕೆದಾರರ ಪೈಕಿ ಶೇ.9 ರಷ್ಟು ಮಹಿಳೆಯರಿದ್ದಾರೆ. ಶೇ.75 ರಷ್ಟು ಹೂಡಿಕೆದಾರರು 18-35 ವರ್ಷಗಳವರೆಗಿನ ಯುವಕ/ಯುವತಿಯರಾಗಿದ್ದಾರೆ ಎಂಬ ಮಾಹಿತಿಯನ್ನು ಈ ವಿನಿಮಯ ವೇದಿಕೆ ಬಹಿರಂಗಪಡಿಸಿದ್ದು ಯುವಕರಲ್ಲಿ ಕ್ರಿಪ್ಟೋ ಹೂಡಿಕೆ ಆಸಕ್ತಿ ಹೆಚ್ಚಿದೆ ಎಂಬುದನ್ನು ತೋರಿಸುತ್ತಿದೆ. 

ಅತಿ ಹೆಚ್ಚು ಕ್ರಿಪ್ಟೋ ಹೂಡಿಕೆ ಹೊಂದಿರುವ ನಗರಗಳ ಪೈಕಿ ದೆಹಲಿ ಮೊದಲ ಪಟ್ಟಿಯಲ್ಲಿದೆ. 2023 ರಲ್ಲಿ, ಡೋಜ್ ಕಾಯಿನ್ ಅತ್ಯಂತ ಜನಪ್ರಿಯ ಕ್ರಿಪ್ಟೋಕಾಯಿನ್ ಆಗಿದ್ದು, ಕ್ರಿಪ್ಟೋದಲ್ಲಿ ಹೂಡಿಕೆ ಮಾಡಿದ ಒಟ್ಟು ಮೌಲ್ಯದ 11 ಪ್ರತಿಶತವನ್ನು ಬಿಟ್‌ಕಾಯಿನ್ (8.5 ಶೇಕಡಾ) ಹೊಂದಿದ್ದರೆ, 6.4 ಪ್ರತಿಶತವನ್ನು ಎಥೆರಿಯಮ್ ಹೊಂದಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com