ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್-ಅಪ್‌ಗಳಿಗೆ ಸಹಕಾರ: ಇಸ್ರೋ-ಮೈಕ್ರೋಸಾಫ್ಟ್ ಒಪ್ಪಂದಕ್ಕೆ ಸಹಿ

ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೆ ಉತ್ತೇಜನ ನೀಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಮೈಕ್ರೋಸಾಫ್ಟ್ ಗುರುವಾರ ಒಪ್ಪಂದಕ್ಕೆ (MoU) ಸಹಿ ಹಾಕಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೆ ಉತ್ತೇಜನ ನೀಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಮೈಕ್ರೋಸಾಫ್ಟ್ ಗುರುವಾರ ಒಪ್ಪಂದಕ್ಕೆ (MoU) ಸಹಿ ಹಾಕಿವೆ.

ಎಂಒಯು ದೇಶದಾದ್ಯಂತ ಬಾಹ್ಯಾಕಾಶ ಟೆಕ್ ಸ್ಟಾರ್ಟ್-ಅಪ್‌ಗಳನ್ನು ತಂತ್ರಜ್ಞಾನ ಪರಿಕರಗಳು ಮತ್ತು ಪ್ಲಾಟ್‌ಫಾರ್ಮ್‌ಗಳೊಂದಿಗೆ(Platforms) ಸಶಕ್ತಗೊಳಿಸಲು ಪ್ರಯತ್ನಿಸುತ್ತದೆ.ಮಾರುಕಟ್ಟೆಯ ಪ್ರೋತ್ಸಾಹದೊಂದಿಗೆ ಉದ್ಯಮಶೀಲವಾಗಿ ಬೆಳೆಯಲು ಈ ಒಪ್ಪಂದದಿಂದ ಸಹಾಯವಾಗುತ್ತದೆ. 

ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಡೆಲ್ಲಾ ಅವರು ಮೈಕ್ರೋಸಾಫ್ಟ್ ಫ್ಯೂಚರ್ ರೆಡಿ ಟೆಕ್ನಾಲಜಿ ಶೃಂಗಸಭೆಯಲ್ಲಿ ಭಾಗವಹಿಸಲು ನಿನ್ನೆ ಬೆಂಗಳೂರಿಗೆ ಬಂದಿದ್ದ ಸಮಯದಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. 

ಈ ಸಹಯೋಗವು ಭಾರತದ ಅತ್ಯಂತ ಭರವಸೆಯ ಬಾಹ್ಯಾಕಾಶ ತಂತ್ರಜ್ಞಾನದ ಆವಿಷ್ಕಾರಕರು ಮತ್ತು ಉದ್ಯಮಿಗಳ ಮಾರುಕಟ್ಟೆ ಸಾಮರ್ಥ್ಯವನ್ನು ಬಳಸಿಕೊಳ್ಳುವ ಇಸ್ರೋದ ದೃಷ್ಟಿಯನ್ನು ಬಲಪಡಿಸಲು ಪ್ರಯತ್ನಿಸುತ್ತದೆ ಎಂದು ಮೈಕ್ರೋಸಾಫ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಇಸ್ರೋ ಗುರುತಿಸಿರುವ ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್-ಅಪ್‌ಗಳನ್ನು 'ಮೈಕ್ರೋಸಾಫ್ಟ್ ಫಾರ್ ಸ್ಟಾರ್ಟ್-ಅಪ್ಸ್ ಫೌಂಡರ್ಸ್ ಹಬ್ ಪ್ಲಾಟ್‌ಫಾರ್ಮ್'ಗೆ ಸೇರಿಸಲಾಗುತ್ತದೆ, ಯುನಿಕಾರ್ನ್‌ಗೆ ಪ್ರತಿಯೊಂದು ಹಂತದಲ್ಲೂ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸುತ್ತದೆ.

ಭಾರತದಲ್ಲಿನ ಬಾಹ್ಯಾಕಾಶ-ತಂತ್ರಜ್ಞಾನದ ಸ್ಟಾರ್ಟ್-ಅಪ್ ಸಂಸ್ಥಾಪಕರು ತಮ್ಮ ವ್ಯವಹಾರವನ್ನು ನಡೆಸಲು ಅಗತ್ಯವಿರುವ ಟೆಕ್ ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ಪಡೆಯಲು ಅನುಕೂಲವಾಗುತ್ತದೆ. GitHub ಎಂಟರ್‌ಪ್ರೈಸ್, ವಿಷುಯಲ್ ಸ್ಟುಡಿಯೋ ಎಂಟರ್‌ಪ್ರೈಸ್ ಮತ್ತು ಮೈಕ್ರೋಸಾಫ್ಟ್ 365 ಮತ್ತು ಪವರ್ ಬಿಐ ಮತ್ತು ಡೈನಾಮಿಕ್ಸ್ 365 ನೊಂದಿಗೆ ಸ್ಮಾರ್ಟ್ ಅನಾಲಿಟಿಕ್ಸ್‌ಗೆ ಪ್ರವೇಶವನ್ನು ಒಳಗೊಂಡಂತೆ ಅತ್ಯುತ್ತಮ-ದರ್ಜೆಯ ಡೆವಲಪರ್ ಮತ್ತು ಉತ್ಪಾದಕತೆಯ ಪರಿಕರಗಳನ್ನು ಹೊಂದುತ್ತವೆ. 

ಮೈಕ್ರೋಸಾಫ್ಟ್ ಜೊತೆಗಿನ ಬಾಹ್ಯಾಕಾಶ ಸಂಸ್ಥೆಯ ಸಹಯೋಗವು AI, ಯಂತ್ರ ಕಲಿಕೆ ಮತ್ತು ಆಳವಾದ ಕಲಿಕೆಯಂತಹ ಅತ್ಯಾಧುನಿಕ ವಿಧಾನಗಳನ್ನು ಬಳಸಿಕೊಂಡು ವಿವಿಧ ಅಪ್ಲಿಕೇಶನ್‌ಗಳಿಗಾಗಿ ಅಪಾರ ಪ್ರಮಾಣದ ಉಪಗ್ರಹ ಡೇಟಾವನ್ನು ವಿಶ್ಲೇಷಿಸಲು ಮತ್ತು ಪ್ರಕ್ರಿಯೆಗೊಳಿಸಲು ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್-ಅಪ್‌ಗಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com