2022-23 ರಲ್ಲಿ ಪಿಎಸ್ ಬಿ ಗಳ ನಿವ್ವಳ ಲಾಭ 3 ಪಟ್ಟು ಏರಿಕೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಭಾರತದ ಆರ್ಥಿಕತೆ ಬ್ಯಾಂಕ್ ಹಾಗೂ ಕಾರ್ಪೊರೇಟ್ ಗಳ ಟ್ವಿನ್ ಬ್ಯಾಲೆನ್ಸ್ ಶೀಟ್ ಸಮಸ್ಯೆಗಳಿಂದ ಟ್ವಿನ್ ಬ್ಯಾಲೆನ್ಸ್ ಶೀಟ್ ಅನುಕೂಲಕ್ಕೆ ಬದಲಾಗಿದೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

ನವದೆಹಲಿ: ಭಾರತದ ಆರ್ಥಿಕತೆ ಬ್ಯಾಂಕ್ ಹಾಗೂ ಕಾರ್ಪೊರೇಟ್ ಗಳ ಟ್ವಿನ್ ಬ್ಯಾಲೆನ್ಸ್ ಶೀಟ್ ಸಮಸ್ಯೆಗಳಿಂದ ಟ್ವಿನ್ ಬ್ಯಾಲೆನ್ಸ್ ಶೀಟ್ ಅನುಕೂಲಕ್ಕೆ ಬದಲಾಗಿದೆ, ಇದಕ್ಕೆ ಮೋದಿ ಸರ್ಕಾರದ ಸಂಘಟಿತ ಪ್ರಯತ್ನ ಕಾರಣ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

2022-23 ರಲ್ಲಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಗಳ ಲಾಭ 1.04 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. 2014 ರಿಂದ ಈ ವರೆಗೆ ಲಾಭ ಮೂರು ಪಟ್ಟು ಹೆಚ್ಚಾಗಿದೆ ಎಂದು ದೆಹಲಿಯಲ್ಲಿ ಪಂಜಾಬ್& ಸಿಂಧ್ ಬ್ಯಾಂಕ್ ನ ಕಾರ್ಪೊರೇಟ್ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಸಚಿವರು ಹೇಳಿದ್ದಾರೆ. 

ಟ್ವಿನ್ ಬ್ಯಾಲೆನ್ಸ್ ಶೀಟ್ ಸಮಸ್ಯೆ ಬ್ಯಾಂಕ್ ಹಾಗೂ ಕಾರ್ಪೊರೇಟ್ ಗಳ ಆರ್ಥಿಕ ಆರೋಗ್ಯ ಏಕಕಾಲಕ್ಕೆ ಕ್ಷೀಣಿಸುವುದನ್ನು ಸೂಚಿಸುತ್ತದೆ.

ಟ್ವಿನ್ ಬ್ಯಾಲೆನ್ಸ್ ಶೀಟ್ ಎಂಬ ಶಬ್ದವನ್ನು ದೀರ್ಘಾವಧಿಯ ನಂತರ ಕೇಳುತ್ತಿದ್ದು, ಟ್ವಿನ್ ಬ್ಯಾಲೆನ್ಸ್ ಶೀಟ್ ಅನುಕೂಲದಿಂದ ಭಾರತದ ಆರ್ಥಿಕತೆಗೂ ಪ್ರಯೋಜನವಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com