'ವೇದಾಂತ'ದಿಂದ ನಿರ್ಗಮನ ನಂತರ ಭಾರತದಲ್ಲಿ ಪ್ರತ್ಯೇಕ ಚಿಪ್ ಉತ್ಪಾದನಾ ಘಟಕ ಸ್ಥಾಪನೆಗೆ ಫಾಕ್ಸ್ ಕಾನ್ ಮುಂದು

ತೈವಾನ್‌ ಮೂಲದ ಎಲೆಕ್ಟ್ರಾನಿಕ್ಸ್ ತಯಾರಿಕಾ ದೈತ್ಯ ಸಂಸ್ಥೆ ಫಾಕ್ಸ್‌ಕಾನ್ ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲಿದೆ ಎಂದು ಕಂಪನಿ ತಿಳಿಸಿದೆ. ಯೋಜನೆ ಆರಂಭಕ್ಕೆ ಸೂಕ್ತ ಸ್ಥಳ ಹುಡುಕುವ ಪ್ರಕ್ರಿಯೆಯಲ್ಲಿದೆ ಎಂದು ಅದು ಹೇಳಿದೆ.
ಫಾಕ್ಸ್ ಕಾನ್ ಕೇಂದ್ರ ಕಚೇರಿ
ಫಾಕ್ಸ್ ಕಾನ್ ಕೇಂದ್ರ ಕಚೇರಿ
Updated on

ನವದೆಹಲಿ: ತೈವಾನ್‌ ಮೂಲದ ಎಲೆಕ್ಟ್ರಾನಿಕ್ಸ್ ತಯಾರಿಕಾ ದೈತ್ಯ ಸಂಸ್ಥೆ ಫಾಕ್ಸ್‌ಕಾನ್ ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲಿದೆ ಎಂದು ಕಂಪನಿ ತಿಳಿಸಿದೆ. ಯೋಜನೆ ಆರಂಭಕ್ಕೆ ಸೂಕ್ತ ಸ್ಥಳ ಹುಡುಕುವ ಪ್ರಕ್ರಿಯೆಯಲ್ಲಿದೆ ಎಂದು ಅದು ಹೇಳಿದೆ.

ಫಾಕ್ಸ್‌ಕಾನ್ ಸೆಮಿಕಂಡಕ್ಟರ್‌ಗಳು ಮತ್ತು ಡಿಸ್ಪ್ಲೇ ಫ್ಯಾಬ್ ಇಕೋಸಿಸ್ಟಮ್‌ಗಾಗಿ ಮಾರ್ಪಡಿಸಿದ ಪ್ರೋಗ್ರಾಂಗೆ ಸಂಬಂಧಿಸಿದ ಅಪ್ಲಿಕೇಶನ್ ನ್ನು ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅತ್ಯುತ್ತಮ ಪಾಲುದಾರರಿಗೆ ಭೂಮಿಯನ್ನು ಪರಿಶೀಲಿಸುತ್ತಿದ್ದೇವೆ" ಎಂದು ಫಾಕ್ಸ್‌ಕಾನ್ ಹೇಳಿಕೆಯಲ್ಲಿ ತಿಳಿಸಿದೆ.

ಕಂಪೆನಿಯು ಸೆಮಿಕಂಡಕ್ಟರ್ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದ ವೇದಾಂತದಿಂದ ನಿರ್ಗಮಿಸುವುದಾಗಿ ಫಾಕ್ಸ್ ಕಾನ್ ಘೋಷಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಗಣಿ ಉದ್ಯಮಿ ಅನಿಲ್ ಅಗರ್ವಾಲ್ ಅವರ ವೇದಾಂತ ಲಿಮಿಟೆಡ್‌ನೊಂದಿಗಿನ 19.5 ಶತಕೋಟಿ ಡಾಲರ್ ಜಂಟಿ ಉದ್ಯಮದಿಂದ ಹಿಂದೆ ಸರಿದಿದ್ದೇವೆ ಎಂದು ಫಾಕ್ಸ್ ಕಾನ್ ಹೇಳಿಕೊಂಡಿತ್ತು.

ಮೊಬೈಲ್ ಫೋನ್‌ಗಳಲ್ಲಿ ರೆಫ್ರಿಜರೇಟರ್‌ಗಳು ಮತ್ತು ಕಾರುಗಳಿಗೆ ಬಳಸುವ ಚಿಪ್‌ಗಳನ್ನು ತಯಾರಿಸಲು ತಂತ್ರಜ್ಞಾನ ಪಾಲುದಾರರನ್ನು ಹೊಂದಲು ವೇದಾಂತ ಕಂಪೆನಿ ತೀವ್ರ ಕಸರತ್ತು ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com