ಬುಧವಾರದಿಂದ ಮೂರು ದಿನ ಗೋ ಫಸ್ಟ್ ವಿಮಾನ ಸೇವೆ ಸ್ಥಗಿತ!

ಹಣಕಾಸು ಬಿಕ್ಕಟ್ಟಿನ ಕಾರಣ  'ಗೋ ಫಸ್ಟ್' ವಿಮಾನಯಾನ ಕಂಪನಿಯು ಬುಧವಾರದಿಂದ ಮೂರು ದಿನಗಳ ಕಾಲ ತನ್ನ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ.
ಗೋ ಫಸ್ಟ್
ಗೋ ಫಸ್ಟ್

ಮುಂಬೈ: ಹಣಕಾಸು ಬಿಕ್ಕಟ್ಟಿನ ಕಾರಣ 'ಗೋ ಫಸ್ಟ್' ವಿಮಾನಯಾನ ಕಂಪನಿಯು ಬುಧವಾರದಿಂದ ಮೂರು ದಿನಗಳ ಕಾಲ ತನ್ನ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ.

ಈ ಹಿಂದೆ ಮೇ 3 ಮತ್ತು 4 ರಂದು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗುವುದು ಎಂದು ಈ ಹಿಂದೆ ಗೋ ಫಸ್ಟ್ ಸಿಇಒ ಕೌಶಿಕ್ ಖೋನಾ ಹೇಳಿದ್ದರು. ಇದೀಗ ಮೇ 5 ರಂದು ಕೂಡಾ ವಿಮಾನಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಿದೆ. ಗೋ ಫಸ್ಟ್'  ಪ್ರತಿದಿನ ಸುಮಾರು 180-185 ವಿಮಾನಗಳ ನಿರ್ವಹಣೆ ಮಾಡುತಿತ್ತು.ವಿಮಾನ ಹಾರಾಟಗಳ ಅನಿಶ್ಚಿತತೆ  ಮಧ್ಯೆ ಗೋ ಫಸ್ಟ್ ಟಿಕೆಟ್‌ಗಳಿಗೆ ಸಂಪೂರ್ಣ ಮರು ಪಾವತಿ ಮಾಡುವುದಾಗಿ ಹೇಳಿದೆ. 

ಮೇ 3, 4 ಮತ್ತು 5 ನೇ ರಂದು ನಿಗದಿಪಡಿಸಲಾದ ಗೋ ಫಸ್ಟ್ ಫ್ಲೈಟ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲು ವಿಷಾದಿಸುತ್ತೇವೆ. ವಿಮಾನ ರದ್ದತಿಯಿಂದ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಏರ್‌ಲೈನ್ ತನ್ನ ವೆಬ್‌ಸೈಟ್‌ನಲ್ಲಿ ನೋಟಿಸ್‌ನಲ್ಲಿ ತಿಳಿಸಿದೆ.

"ವಿಮಾನ ರದ್ದತಿಯಿಂದ ನಿಮ್ಮ ಪ್ರಯಾಣದ ಯೋಜನೆಗಳನ್ನು ಅಡ್ಡಿಪಡಿಸಿರಬಹುದು ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಸಾಧ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ನಿಮ್ಮ ತಾಳ್ಮೆಗಾಗಿ ನಾವು ಧನ್ಯವಾದಗಳು ಎಂದು ಅದು ಹೇಳಿದೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com