ಐಟಿ ದಿಗ್ಗಜ ಕಂಪನಿ ಕಾಗ್ನಿಜೆಂಟ್ ನಲ್ಲಿ 3,500 ಉದ್ಯೋಗಿಗಳ ವಜಾ!

ಆರ್ಥಿಕ ಹಿಂಜರಿತವು ಅಮೆರಿಕ ಸೇರಿದಂತೆ ಐರೋಪ್ಯ ರಾಷ್ಟ್ರಗಳಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳ ಗಳಿಕೆಯ ಮೇಲೆ ಪರಿಣಾಮ ಬೀರಿದೆ. ಈ ಕಾರಣದಿಂದಾಗಿ, ಕಂಪನಿಗಳ ಗಳಿಕೆಯು ತೀವ್ರವಾಗಿ ಕುಸಿಯುತ್ತಿದೆ.
ಕಾಗ್ನಿಜೆಂಟ್
ಕಾಗ್ನಿಜೆಂಟ್
Updated on

ಆರ್ಥಿಕ ಹಿಂಜರಿತವು ಅಮೆರಿಕ ಸೇರಿದಂತೆ ಐರೋಪ್ಯ ರಾಷ್ಟ್ರಗಳಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳ ಗಳಿಕೆಯ ಮೇಲೆ ಪರಿಣಾಮ ಬೀರಿದೆ. ಈ ಕಾರಣದಿಂದಾಗಿ, ಕಂಪನಿಗಳ ಗಳಿಕೆಯು ತೀವ್ರವಾಗಿ ಕುಸಿಯುತ್ತಿದೆ.

ಅದೇ ಸಮಯದಲ್ಲಿ, ಕರೋನಾ ನಂತರ ಬೇಡಿಕೆ ಹೆಚ್ಚಾಗಿದ್ದರಿಂದ ಕೆಲ ಕಂಪನಿಗಳು ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳನ್ನು ನೇಮಿಸಿಕೊಂಡವು. ಈಗ ಗಳಿಕೆ ಕಡಿಮೆಯಾಗುತ್ತಿದ್ದು ಕಂಪನಿಗೆ ಹಿನ್ನಡೆಯುಂಟಾಗುತ್ತಿದೆ. ಹೀಗಾಗಿ ಹಲವು ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಈ ಸಾಲಿಗೆ ಮತ್ತೊಂದು ಐಟಿ ಕಂಪನಿ ಕಾಗ್ನಿಜೆಂಟ್ ಸೇರಿದ್ದು 3,500 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಈ ಹಿಂದೆ, ವಿಶ್ವದ ಅತಿದೊಡ್ಡ ಟೆಕ್ ಕಂಪನಿಗಳಲ್ಲಿ ಸುಮಾರು 1.5 ಲಕ್ಷ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಸಾಮೂಹಿಕ ವಜಾಗಳನ್ನು ಮಾಡಿದ ಕಂಪನಿಗಳು ಫೇಸ್‌ಬುಕ್, ಗೂಗಲ್, ಅಮೆಜಾನ್‌ನಂತಹ ಕಂಪನಿಗಳನ್ನು ಒಳಗೊಂಡಿವೆ.

ಕಂಪನಿಯ ಲಾಭದಲ್ಲಿ ಇಳಿಕೆ
ಕಾಗ್ನಿಜೆಂಟ್ ವರ್ಷದಿಂದ ವರ್ಷಕ್ಕೆ ಲಾಭದಲ್ಲಿ ಕನಿಷ್ಠ 3 ಶೇಕಡಾ ಹೆಚ್ಚಳದ ವರದಿ ಮಾಡಿದೆ. ಅದೇ ಸಮಯದಲ್ಲಿ, ಕಂಪನಿಯ ಆದಾಯವು $ 4.81 ಶತಕೋಟಿಗೆ ತಲುಪಿದೆ. ಆದಾಯವು ವರ್ಷದಿಂದ ವರ್ಷಕ್ಕೆ 0.3 ಶೇಕಡಾ ಕಡಿಮೆಯಾಗಿದೆ. ಇದಲ್ಲದೆ, ಕಾಗ್ನಿಜೆಂಟ್‌ನ ಮಾರ್ಜಿನ್ ಪ್ರಸ್ತುತ ಶೇಕಡಾ 14.06 ರಷ್ಟಿದೆ, ಇದು ಟೆಕ್ ಮಹೀಂದ್ರಾಗೆ ಸಮನಾಗಿದೆ. ಐಟಿ ಉದ್ಯಮದಲ್ಲಿ ಇದು ಅತ್ಯಂತ ಕಡಿಮೆ

ವೆಚ್ಚವನ್ನು ಕಡಿಮೆ ಮಾಡಲು ಕೆಲವು ಕಚೇರಿಗಳಿಗೂ ಬೀಗ
ವೆಚ್ಚವನ್ನು ಕಡಿಮೆ ಮಾಡಲು ಕಂಪನಿಯು ತನ್ನ ಕೆಲವು ಕಚೇರಿಗಳನ್ನು ಸಹ ಮುಚ್ಚುತ್ತಿದೆ. ಕಾಗ್ನಿಜೆಂಟ್ US ನಲ್ಲಿ ನೆಲೆಗೊಂಡಿದೆ. ಆದರೆ ಭಾರತವು ತನ್ನ ಕಾರ್ಯಾಚರಣೆಗಳ ಪ್ರಮುಖ ಭಾಗವನ್ನು ಹೊಂದಿದೆ. ಕಾಗ್ನಿಜೆಂಟ್ ಇತ್ತೀಚೆಗೆ ಉದ್ಯೋಗಿಗಳನ್ನು ವಜಾ ಘೋಷಿಸಿದ ಏಕೈಕ ಟೆಕ್ ಕಂಪನಿ ಅಲ್ಲ. ವಿಪ್ರೋ, ಅಮೆಜಾನ್, ಅಕ್ಸೆಂಚರ್, ಇನ್ಫೋಸಿಸ್, ಐಬಿಎಂ, ಗೂಗಲ್, ಮೆಟಾ ಮತ್ತು ಟ್ವಿಟರ್‌ನಂತಹ ಕಂಪನಿಗಳು ಕಳೆದ ಕೆಲವು ತಿಂಗಳುಗಳಲ್ಲಿ ವಜಾಗೊಳಿಸಿವೆ. ಟೆಕ್ ಕ್ಷೇತ್ರವು ಕಠಿಣ ಸಮಯವನ್ನು ಎದುರಿಸುತ್ತಿದೆ. ಉದ್ಯೋಗ ಕಳೆದುಕೊಂಡ ನಂತರ ಸಾವಿರಾರು ಜನರು ಉದ್ಯೋಗ ಅನ್ವೇಷಣೆಯಲ್ಲಿ ತೊಡಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com