‘ಬೆಂಗಳೂರಿನಿಂದ ಇಸ್ರೇಲ್ ರಾಜಧಾನಿ ಟೆಲ್ ಅವಿವ್‌ಗೆ ಶೀಘ್ರದಲ್ಲೇ ನೇರ ವಿಮಾನ’

ಬೆಂಗಳೂರಿನಿಂದ ಇಸ್ರೇಲ್ ರಾಜಧಾನಿ ಟೆಲ್ ಅವಿವ್‌ಗೆ ಶೀಘ್ರದಲ್ಲೇ ನೇರ ವಿಮಾನ ಸಂಚಾರ ಆರಂಭವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. 
ಕೆಂಪೇಗೌಡ ಅಂತಾರಾಷ್ಟ್ರೀಯ  ವಿಮಾನ ನಿಲ್ದಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು: ಬೆಂಗಳೂರಿನಿಂದ ಇಸ್ರೇಲ್ ರಾಜಧಾನಿ ಟೆಲ್ ಅವಿವ್‌ಗೆ ಶೀಘ್ರದಲ್ಲೇ ನೇರ ವಿಮಾನ ಸಂಚಾರ ಆರಂಭವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. 

ಬೆಂಗಳೂರಿನಿಂದ ಟೆಲ್ ಅವಿವ್‌ ನೇರ ವಿಮಾನ ಆರಂಭಿಸುವ ಸಾಧ್ಯತೆ ಇದೆ ಎಂದು ಬೆಂಗಳೂರಿನಲ್ಲಿರುವ ಇಸ್ರೇಲಿ ಕಾನ್ಸುಲ್ ಜನರಲ್ ಟಮ್ಮಿ ಬೆನ್ ಹೈಮ್ ಅವರು ಹೇಳಿದ್ದಾರೆ. ಪ್ರಸ್ತುತ, ಬೆಂಗಳೂರಿನ ಪ್ರಯಾಣಿಕರು ಅಬುಧಾಬಿ, ದುಬೈ ಅಥವಾ ಮಸ್ಕತ್‌ ಮೂಲಕ ಟೆಲ್ ಅವಿವ್ ಗೆ ತೆರಳಬೇಕು.

"ನೇರ ವಿಮಾನ ಉಭಯ ದೇಶಗಳನ್ನು ಪರಸ್ಪರ ಸುಲಭವಾಗಿ ಪ್ರವೇಶಿಸುವಂತೆ ಮಾಡುತ್ತದೆ ಮತ್ತು ಉತ್ತಮ ಸಹಕಾರಕ್ಕೆ ಸಹಾಯ ಮಾಡುತ್ತದೆ" ಎಂದು ಟಾಮಿ ಬೆನ್ ಹೈಮ್ ತಿಳಿಸಿದ್ದಾರೆ. ಈಗಾಗಲೇ ದೆಹಲಿಯಿಂದ ಟೆಲ್ ಅವಿವ್‌ಗೆ ನೇರ ವಿಮಾನಗಳು ಇವೆ.

ಇಸ್ರೇಲ್ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಹೈಮ್ ಅವರು, ಇದು 75 ವರ್ಷಗಳ ಬೆಳವಣಿಗೆ. ಪ್ರಜಾಪ್ರಭುತ್ವವು ಬೆಳೆದಿದೆ, ನಾವೀನ್ಯತೆ ಮತ್ತು ತಂತ್ರಜ್ಞಾನ ಮತ್ತು ಖಂಡಿತವಾಗಿಯೂ ಸವಾಲುಗಳ ಸಮಯ" ಎಂದು ಅವರು ಹೇಳಿದರು.

"ಕಾಲಾನುಕ್ರಮವಾಗಿ ಹೇಳುವುದಾದರೆ, ಕಳೆದ ವರ್ಷ 75ನೇ ವರ್ಷವನ್ನು ಆಚರಿಸಿದ ಭಾರತದಿಂದ ನಾವು ಒಂದು ಹೆಜ್ಜೆ ಹಿಂದೆ ಇದ್ದೇವೆ" ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com