ವಸತಿ ರಿಯಲ್ ಎಸ್ಟೇಟ್ ವಲಯದಲ್ಲಿ ಹೆಚ್ಚಿನ ಬೇಡಿಕೆ: ಟಾಪ್ 7 ನಗರಗಳಲ್ಲಿ ಬೆಂಗಳೂರಿಗೆ 3ನೇ ಸ್ಥಾನ

ಆಸ್ತಿ ಸಲಹಾ ಸಂಸ್ಥೆ ಅನರಾಕ್(property consulting firm Anarock) ಬಿಡುಗಡೆ ಮಾಡಿರುವ ಮೂರನೇ ತ್ರೈಮಾಸಿಕ ಅಂಕಿಅಂಶಗಳ ಪ್ರಕಾರ, ಹೊಸ ವಸತಿ ಆಸ್ತಿಗಳ ಪ್ರಾರಂಭಿಸುವಿಕೆಯಲ್ಲಿ ಬೆಂಗಳೂರು ನಗರ ಮೂರನೇ ಅತ್ಯಂತ ಮಹತ್ವದ ತ್ರೈಮಾಸಿಕದಲ್ಲಿ (Q-O-Q) ಏರಿಕೆ ದಾಖಲಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಆಸ್ತಿ ಸಲಹಾ ಸಂಸ್ಥೆ ಅನರಾಕ್(property consulting firm Anarock) ಬಿಡುಗಡೆ ಮಾಡಿರುವ ಮೂರನೇ ತ್ರೈಮಾಸಿಕ ಅಂಕಿಅಂಶಗಳ ಪ್ರಕಾರ, ಹೊಸ ವಸತಿ ಆಸ್ತಿಗಳ ಪ್ರಾರಂಭಿಸುವಿಕೆಯಲ್ಲಿ ಬೆಂಗಳೂರು ನಗರ ಮೂರನೇ ಅತ್ಯಂತ ಮಹತ್ವದ ತ್ರೈಮಾಸಿಕದಲ್ಲಿ (Q-O-Q) ಏರಿಕೆ ದಾಖಲಿಸಿದೆ. 

ಹಣಕಾಸು ವರ್ಷದ ಪ್ರಸಕ್ತ ತ್ರೈಮಾಸಿಕ ವರದಿಯ ಪ್ರಕಾರ, ಬೆಂಗಳೂರು ಅಗ್ರ ಏಳು ಭಾರತೀಯ ನಗರಗಳಲ್ಲಿ ವಸತಿ ಮಾರಾಟದ ವಿಷಯದಲ್ಲಿ ಮೂರನೇ ಸ್ಥಾನದಲ್ಲಿದೆ. ಚೆನ್ನೈ ಮತ್ತು ಕೋಲ್ಕತ್ತಾದ ಮೊದಲೆರಡು ಸ್ಥಾನಗಳಲ್ಲಿವೆ.

ಮೂರನೇ ತ್ರೈಮಾಸಿಕದಲ್ಲಿ, 14,800 ಯೂನಿಟ್ ಗಳನ್ನು ಪ್ರಾರಂಭಿಸಲಾಯಿತು. ಲಭ್ಯವಿರುವ ಇನ್ವೆಂಟರಿ 49,300 ಯೂನಿಟ್ ಗಳಷ್ಟಿತ್ತು. ಸರಾಸರಿ ಉಲ್ಲೇಖಿತ ಮೂಲ ಮಾರಾಟ ಬೆಲೆ ಪ್ರತಿ ಚದರ ಅಡಿಗೆ 6,275 ರೂಪಾಯಿ ಮತ್ತು 16,400 ಯುನಿಟ್‌ಗಳು ಮಾರಾಟವಾಗಿವೆ. ಪ್ರಾರಂಭಿಸಲಾದ 14,800 ಯೂನಿಟ್‌ಗಳಲ್ಲಿ, ಶೇಕಡಾ 64ರಷ್ಟು 80 ಲಕ್ಷ ರೂಪಾಯಿಗಳಿಂದ 1.5 ಕೋಟಿ ವಿಭಾಗದಲ್ಲಿವೆ. 40 ಲಕ್ಷಕ್ಕಿಂತ ಕಡಿಮೆ ಬೆಲೆಯ ಪ್ರಾಪರ್ಟಿಗಳು ಕೇವಲ ಶೇ.1ರಷ್ಟಿವೆ. 

ಬೆಂಗಳೂರಿನ ವಸತಿ ರಿಯಲ್ ಎಸ್ಟೇಟ್ ದೃಢವಾಗಿ ಉಳಿಯುವ ನಿರೀಕ್ಷೆಯಿದೆ, ಇದು ಭಾರತದ ಐಟಿ ಮತ್ತು ತಂತ್ರಜ್ಞಾನದ ಕೇಂದ್ರವಾಗಿ ಅದರ ಸ್ಥಾನಮಾನದಿಂದ ನಡೆಸಲ್ಪಡುತ್ತದೆ, ವೈವಿಧ್ಯಮಯ ವೃತ್ತಿಪರ ಉದ್ಯೋಗಿಗಳನ್ನು ಬೆಂಗಳೂರು ನಗರ ಆಕರ್ಷಿಸುತ್ತದೆ. ಹಾಗಾಗಿ ಇಲ್ಲಿ ವಸತಿಗಾಗಿ ಸ್ಥಿರವಾದ ಬೇಡಿಕೆ ಇರುತ್ತದೆ ಎಂದು ಅನರಾಕ್ ವರದಿ ಹೇಳುತ್ತದೆ. 

ಇಲ್ಲಿ ನಡೆಯುತ್ತಿರುವ ಅಭಿವೃದ್ಧಿ ಮತ್ತು ಕಾರ್ಯತಂತ್ರದ ಮೂಲಸೌಕರ್ಯ ಯೋಜನೆಗಳಿಂದ ನಗರದಾದ್ಯಂತ ಸಂಪರ್ಕ ಮತ್ತು ಪ್ರವೇಶವನ್ನು ಗಣನೀಯವಾಗಿ ಹೆಚ್ಚಿಸಲು ಸಿದ್ಧವಾಗಿದೆ. ಈ ಉಪಕ್ರಮಗಳು ದೈನಂದಿನ ಜೀವನವನ್ನು ಸುಗಮಗೊಳಿಸಲು ಮತ್ತು ನಿವಾಸಿಗಳಿಗೆ ಒಟ್ಟಾರೆ ಜೀವನ ಅನುಭವವನ್ನು ಹೆಚ್ಚಿಸಲು ನಿರೀಕ್ಷಿಸಲಾಗಿದೆ. 

ಮುಂದಿನ ತ್ರೈಮಾಸಿಕಗಳಲ್ಲಿ ಭವಿಷ್ಯದ ಹೂಡಿಕೆ ಮತ್ತು ಅಭಿವೃದ್ಧಿಗೆ ಆಕರ್ಷಕ ಮಾರುಕಟ್ಟೆಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುವ ಮೂಲಕ, ವಸತಿ ರಿಯಲ್ ಎಸ್ಟೇಟ್ ವಲಯದಲ್ಲಿ ಬೆಂಗಳೂರು ಬಲವಾದ ಬೇಡಿಕೆಯನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com