ನವದೆಹಲಿ: ದೇಶಾದ್ಯಂತ ಹಿಂದೂ ಧರ್ಮೀಯರ ಪ್ರಮುಖ ಹಬ್ಬ ದೀಪಾವಳಿ ಆಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ. ಈಗಾಗಲೇ ದೀಪಾವಳಿಗೆ ತಯಾರಿ ಆರಂಭವಾಗಿದೆ. ಧನ್ತೇರಸ್ ರಾಷ್ಟ್ರವ್ಯಾಪಿ ವ್ಯಾಪಾರಿಗಳಿಗೆ ಪ್ರಮುಖ ದಿನವಾಗಿದೆ. ಅಂದಾಜು 50,000 ಕೋಟಿ ರೂಪಾಯಿಗಳ ವ್ಯಾಪಾರವಾಗಬಹುದು ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (CAIT) ರಾಷ್ಟ್ರೀಯ ಅಧ್ಯಕ್ಷ ಬಿ ಸಿ ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳುತ್ತಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರವೀಣ್ ಖಂಡೇಲ್ವಾಲ್ ಅವರು ವಿವಿಧ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಜನರಿಗೆ ಕರೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಈ ದೀಪಾವಳಿಯ ಕರೆಗೆ ದೇಶದ 9 ಕೋಟಿ ಉದ್ಯಮಿಗಳು ಸಂಪೂರ್ಣ ಬೆಂಬಲ ನೀಡುತ್ತಿದ್ದು #VocalForLocal ಮತ್ತು ಕೇಂದ್ರ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಮನವಿ #NaariSeKharidaari ಗೆ ನಾವು ಬೆಂಬಲ ಸೂಚಿಸುತ್ತೇವೆ ಎಂದಿದ್ದಾರೆ.
ನಾವು ಮಹಿಳೆಯರಿಗೆ ದೇಶೀಯ ಮಾರುಕಟ್ಟೆಯನ್ನು ಒದಗಿಸುತ್ತಿದ್ದೇವೆ. ವಾಣಿಜ್ಯೋದ್ಯಮಿಗಳು, ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ಅಂಗಡಿಗಳನ್ನು ನಡೆಸುತ್ತಿರುವವರವರೆಗೆ. ನೀವು ಸಹ ಮಹಿಳೆಯರ ಬಳಿಯಿಂದಲೇ ಖರೀದಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಚೀನಾ ದೇಶಕ್ಕೆ ಹೊಡೆತ: ಸ್ಥಳೀಯತೆಗೆ ಆದ್ಯತೆ ಕರೆಯಿಂದ ದೀಪಾವಳಿ ಹಬ್ಬದ ವಸ್ತುಗಳಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಚೀನಾ ಸುಮಾರು 1 ಲಕ್ಷ ಕೋಟಿ ರೂಪಾಯಿ ನಷ್ಟವಾಗುತ್ತಿದೆ. ದೇಶೀಯ ಮಾರುಕಟ್ಟೆಗಳಿಂದ ಪುಟ್ಟ ದೀಪಗಳಿಂದ ಹಿಡಿದು ಚಿನ್ನ, ಬೆಳ್ಳಿಯವರೆಗೆ ಗ್ರಾಹಕರು ಖರೀದಿಸುತ್ತಿದ್ದಾರೆ.
ಅಖಿಲ ಭಾರತ ಜ್ಯುವೆಲ್ಲರ್ಸ್ ಮತ್ತು ಗೋಲ್ಡ್ ಸ್ಮಿತ್ ಫೆಡರೇಶನ್ (AIJGF) ರಾಷ್ಟ್ರೀಯ ಅಧ್ಯಕ್ಷ ಪಂಕಜ್ ಅರೋರಾ ಅವರು ಧನ್ತೇರಸ್ ಮಾರಾಟಕ್ಕೆ ಆಭರಣ ವ್ಯಾಪಾರಿಗಳಲ್ಲಿ ಉತ್ಸಾಹವನ್ನು ವ್ಯಕ್ತಪಡಿಸುತ್ತಾರೆ. ವರ್ತಕರು ಬೇಡಿಕೆಯ ಹೆಚ್ಚಳವನ್ನು ನಿರೀಕ್ಷಿಸುತ್ತಿರುವುದರಿಂದ ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳಲ್ಲಿ ಹೊಸ ವಿನ್ಯಾಸಗಳು ಸೇರಿದಂತೆ ಸಾಕಷ್ಟು ದಾಸ್ತಾನುಗಳನ್ನು ಹೊಂದಿದೆ.
Advertisement