ತಾಂತ್ರಿಕ ದೋಷದಿಂದ UCO ಬ್ಯಾಂಕ್ ಖಾತೆದಾರರಿಗೆ 820 ಕೋಟಿ ರೂಪಾಯಿ ಜಮೆ!

ದೇಶದ ಬ್ಯಾಂಕ್ ಗಳಲ್ಲಿ ಒಂದಾದ ಯುಕೊ ಬ್ಯಾಂಕ್ ಖಾತೆದಾರರ ಖಾತೆಗೆ ಸುಮಾರು 820 ಕೋಟಿ ರೂಪಾಯಿ ತಾಂತ್ರಿಕ ದೋಷದಿಂದ ಜಮೆಯಾಗಿದೆ ಎಂದು ಬ್ಯಾಂಕ್ ತಿಳಿಸಿದ್ದು ಅದನ್ನು ಈಗ ಹಿಂಪಡೆಯಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದ ಬ್ಯಾಂಕ್ ಗಳಲ್ಲಿ ಒಂದಾದ ಯುಕೊ ಬ್ಯಾಂಕ್ ಖಾತೆದಾರರ ಖಾತೆಗೆ ಸುಮಾರು 820 ಕೋಟಿ ರೂಪಾಯಿ ತಾಂತ್ರಿಕ ದೋಷದಿಂದ ಜಮೆಯಾಗಿದೆ ಎಂದು ಬ್ಯಾಂಕ್ ತಿಳಿಸಿದ್ದು ಅದನ್ನು ಈಗ ಹಿಂಪಡೆಯಲಾಗುತ್ತಿದೆ.

ಇದುವರೆಗೆ ಕೇವಲ 649 ಕೋಟಿ ಅಂದರೆ ಶೇ.79ರಷ್ಟು ಹಣ ವಾಪಸ್ ಬಂದಿದೆ ಎಂದು ಯುಕೊ ಬ್ಯಾಂಕ್ ಹೇಳಿದೆ. ಈ ಹಣವನ್ನು ಬ್ಯಾಂಕ್‌ನ ಕೆಲವು ಖಾತೆಗಳಲ್ಲಿ ತಕ್ಷಣದ ಪಾವತಿ ವ್ಯವಸ್ಥೆ (ಐಎಂಪಿಎಸ್) ಮೂಲಕ ತಪ್ಪಾಗಿ ಜಮಾ ಮಾಡಲಾಗಿದೆ ಎಂದು ಬ್ಯಾಂಕ್ ಹೇಳಿದೆ.

ವಿವಿಧ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಬ್ಯಾಂಕ್ ಹಣ ಜಮೆಯಾಗಿರುವ ಖಾತೆಗಳನ್ನು ನಿರ್ಬಂಧಿಸಿದೆ. ಇನ್ನು ಪ್ರಸ್ತುತ 820 ಕೋಟಿಗಳಲ್ಲಿ 649 ಕೋಟಿಗಳನ್ನು ಮರುಪಡೆಯಲು ಸಾಧ್ಯವಾಯಿತು ಎಂದು ಯುಕೋ ಬ್ಯಾಂಕ್ ಇಂದು ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ. ಇದು ಮೊತ್ತದ ಸುಮಾರು 79 ಪ್ರತಿಶತವಾಗಿದೆ. ಆದರೆ, ಇದು ತಾಂತ್ರಿಕ ದೋಷವೋ ಅಥವಾ ಬ್ಯಾಂಕ್ ಹ್ಯಾಕ್ ಮಾಡುವ ಯತ್ನವೋ ಎಂಬುದನ್ನು ಹೇಳಲು ಬ್ಯಾಂಕ್ ಗೆ ಇದುವರೆಗೂ ಸಾಧ್ಯವಾಗಿಲ್ಲ.

ಉಳಿದ ಮೊತ್ತವನ್ನು ವಸೂಲಿ ಮಾಡಲು ಕ್ರಮ
UCO ಬ್ಯಾಂಕ್ ಉಳಿದ 171 ಕೋಟಿ ರೂಪಾಯಿಗಳನ್ನು ಮರುಪಡೆಯಲು ಅಗತ್ಯವಾದ ಕ್ರಮವನ್ನು ಪ್ರಾರಂಭಿಸಿದೆ, ಅಗತ್ಯ ಕ್ರಮಕ್ಕಾಗಿ ಕಾನೂನು ಜಾರಿ ಸಂಸ್ಥೆಗಳಿಗೂ ಈ ವಿಷಯದಲ್ಲಿ ತಿಳಿಸಲಾಗಿದೆ. ನವೆಂಬರ್ 10-13ರ ಅವಧಿಯಲ್ಲಿ, IMPS ನಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಖಾತೆದಾರರ ಖಾತೆಗೆ ರಸೀದಿಯಿಲ್ಲದೆ ಹಣ ಕ್ರೆಡಿಟ್ ಆಗಿರುವುದನ್ನು ಬ್ಯಾಂಕ್ ಗಮನಿಸಿದೆ.

IMPS ಅನ್ನು NPCI ನಿರ್ವಹಣೆ
IMPS ಪ್ಲಾಟ್‌ಫಾರ್ಮ್ ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನಿರ್ವಹಿಸುತ್ತದೆ. IMPS ಒಂದು ನೈಜ ಸಮಯದ ಅಂತರಬ್ಯಾಂಕ್ ಎಲೆಕ್ಟ್ರಾನಿಕ್ ಹಣ ವರ್ಗಾವಣೆ ವ್ಯವಸ್ಥೆಯಾಗಿದ್ದು ಅದು ಯಾವುದೇ ಹಸ್ತಕ್ಷೇಪವಿಲ್ಲದೆ ಹಣವನ್ನು ಕಳುಹಿಸಲು ಅನುಕೂಲವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com