ಮೊದಲ ಬಾರಿಗೆ 4 ಟ್ರಿಲಿಯನ್ ಡಾಲರ್ ದಾಟಿದ ಭಾರತದ ಜಿಡಿಪಿ!

ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಇಂದು ಬಹಳ ಒಳ್ಳೆಯ ಸುದ್ದಿ ಬಂದಿದೆ. ಇಂದು ದೇಶದ ಆರ್ಥಿಕತೆಯು ಮೊದಲ ಬಾರಿಗೆ ನಾಲ್ಕು ಟ್ರಿಲಿಯನ್ ಡಾಲರ್‌ಗಳನ್ನು ದಾಟಿದೆ. 
ಭಾರತ ಮತ್ತು ಆರ್ಥಿಕತೆ
ಭಾರತ ಮತ್ತು ಆರ್ಥಿಕತೆ

ನವದೆಹಲಿ: ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಇಂದು ಬಹಳ ಒಳ್ಳೆಯ ಸುದ್ದಿ ಬಂದಿದೆ. ಇಂದು ದೇಶದ ಆರ್ಥಿಕತೆಯು ಮೊದಲ ಬಾರಿಗೆ ನಾಲ್ಕು ಟ್ರಿಲಿಯನ್ ಡಾಲರ್‌ಗಳನ್ನು ದಾಟಿದೆ. 

ಇದರೊಂದಿಗೆ ಭಾರತದ ಆರ್ಥಿಕತೆಯು ಈಗ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗುವ ಸಮೀಪದಲ್ಲಿದೆ. ದೇಶವನ್ನು ನಾಲ್ಕನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ದೇಶವು ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಬೇಕಾದರೆ, ಜಿಡಿಪಿ ಐದು ಟ್ರಿಲಿಯನ್ ತಲುಪಬೇಕು. 2027ರ ವೇಳೆಗೆ ದೇಶವು ಐದು ಟ್ರಿಲಿಯನ್ ಆರ್ಥಿಕತೆಯನ್ನು ಹೊಂದಬೇಕು ಎಂಬುದು ಸರ್ಕಾರದ ಗುರಿಯಾಗಿದೆ.

2027ರ ವೇಳೆಗೆ ಜಪಾನ್ ಮತ್ತು ಜರ್ಮನಿಯನ್ನು ಬಿಟ್ಟು ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿರುವ ದೇಶವಾಗಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಹೇಳಿದ್ದರು. ಅಲ್ಲದೆ, ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಇದಕ್ಕೂ ಮೊದಲು ಅಂತರಾಷ್ಟ್ರೀಯ ಹಣಕಾಸು ನಿಧಿಯು ಅಂತಹ ಅಂದಾಜುಗಳನ್ನು ನೀಡಿದೆ. ಭಾರತದ ಈ ಸಾಧನೆಯು ದೇಶವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವಲ್ಲಿ ಒಂದು ಮೆಟ್ಟಿಲು ಎಂದು ಸಾಬೀತುಪಡಿಸುತ್ತದೆ ಎಂದು ತಿಳಿದುಬಂದಿದೆ.

ಕಳೆದ ರಾತ್ರಿ ಮೈಲಿಗಲ್ಲು ಸಾಧಿಸಿದೆ
ಲೈವ್ ಜಿಡಿಪಿ ಅಂಕಿಅಂಶಗಳ ಪ್ರಕಾರ, ಭಾರತವು ಶನಿವಾರದಂದು ಮೈಲಿಗಲ್ಲನ್ನು ಸಾಧಿಸಿದೆ. ರಾತ್ರಿ 10.30ಕ್ಕೆ ದೇಶದ ಆರ್ಥಿಕತೆಯು ಮೊದಲ ಬಾರಿಗೆ 4 ಟ್ರಿಲಿಯನ್ ಡಾಲರ್‌ಗಳನ್ನು ದಾಟಿದೆ ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ನಾಲ್ಕನೇ ಸ್ಥಾನದಲ್ಲಿರುವ ಜರ್ಮನಿ ಮತ್ತು ಭಾರತ ನಡುವಿನ ಅಂತರ ಗಣನೀಯವಾಗಿ ತಗ್ಗಿದೆ. ಅಮೆರಿಕವು ಇದೀಗ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿದೆ.

ಇದರ ಪ್ರಸ್ತುತ ಗಾತ್ರ 26.7 ಟ್ರಿಲಿಯನ್ ಡಾಲರ್. ಚೀನಾದ ಆರ್ಥಿಕತೆ ಎರಡನೇ ಸ್ಥಾನದಲ್ಲಿದೆ. ಇದರ ಗಾತ್ರ 19.24 ಟ್ರಿಲಿಯನ್ ಡಾಲರ್. ವಿಶ್ವದ ಮೂರನೇ ಸ್ಥಾನದಲ್ಲಿ ಜಪಾನ್ ಮತ್ತು ನಾಲ್ಕನೇ ಸ್ಥಾನದಲ್ಲಿ ಜರ್ಮನಿ ಇದೆ. ಜಪಾನ್ ಆರ್ಥಿಕತೆಯು 4.39 ಟ್ರಿಲಿಯನ್ ಡಾಲರ್ ಮೌಲ್ಯದ್ದಾಗಿದೆ. ಆದರೆ, ಜರ್ಮನಿಯ ಆರ್ಥಿಕತೆಯು 4.28 ಟ್ರಿಲಿಯನ್ ಡಾಲರ್ ಮೌಲ್ಯದ್ದಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಭಾರತ ಸರ್ಕಾರವು ತನ್ನ ಮಾರ್ಗಸೂಚಿಯ ಪ್ರಕಾರ, ಭಾರತವು 2027ರ ವೇಳೆಗೆ ಜಪಾನ್ ಮತ್ತು ಜರ್ಮನಿ ಎರಡನ್ನೂ ಹಿಂದಿಕ್ಕಲಿದೆ ಎಂದು ಹೇಳಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com