Byjus: 22 ಬಿಲಿಯನ್ ಡಾಲರ್ ಇದ್ದ ಮೌಲ್ಯ ಈಗ 3 ಬಿಲಿಯನ್ ಗೆ ಕುಸಿತ

ಸಾಲ, ತೆರಿಗೆ ವಿವಾದ, ನಷ್ಟ ಇತ್ಯಾದಿಗಳಿಂದ ಸಾಕಷ್ಟು ವಿವಾದಗಳಿಗೆ ತುತ್ತಾಗಿರುವ ಖ್ಯಾತ ಖಾಸಗಿ ಶೈಕ್ಷಣಿಕ ಸ್ಟಾರ್ಟಪ್ ಬೈಜೂಸ್ ದುರಂತದ ಸರಮಾಲೆ ಮುಂದುವರೆದಿದ್ದು, ಬೈಜುಸ್​ನ ಮೌಲ್ಯ (Valuation of Byju’s) ಈಗ ನೆಲಕಚ್ಚಿದೆ.
ಬೈಜುಸ್ ಮೌಲ್ಯ ಕುಸಿತ
ಬೈಜುಸ್ ಮೌಲ್ಯ ಕುಸಿತ

ಮುಂಬೈ: ಸಾಲ, ತೆರಿಗೆ ವಿವಾದ, ನಷ್ಟ ಇತ್ಯಾದಿಗಳಿಂದ ಸಾಕಷ್ಟು ವಿವಾದಗಳಿಗೆ ತುತ್ತಾಗಿರುವ ಖ್ಯಾತ ಖಾಸಗಿ ಶೈಕ್ಷಣಿಕ ಸ್ಟಾರ್ಟಪ್ ಬೈಜೂಸ್ ದುರಂತದ ಸರಮಾಲೆ ಮುಂದುವರೆದಿದ್ದು, ಬೈಜುಸ್​ನ ಮೌಲ್ಯ (Valuation of Byju’s) ಈಗ ನೆಲಕಚ್ಚಿದೆ.

ಹೌದು.. ಒಂದು ಕಾಲದಲ್ಲಿ ಭಾರತದ ಸ್ಟಾರ್ಟಪ್ ಸೂಪರ್​ಸ್ಟಾರ್ ಎನಿಸಿದ್ದ ಬೈಜುಸ್ ಈಗ ದಯನೀಯ ಸ್ಥಿತಿಗೆ ಕುಸಿದಿದ್ದು, 22 ಬಿಲಿಯನ್ ಡಾಲರ್ ಇದ್ದ ಬೈಜುಸ್ ಮೌಲ್ಯ ಈಗ 3 ಬಿಲಿಯನ್ ಗಿಂತ ಕಡಿಮೆ ಮೊತ್ತಕ್ಕೆ ಕುಸಿದಿದೆ. ಬೈಜುಸ್‌ನಲ್ಲಿ ಸುಮಾರು 9.6% ಪಾಲನ್ನು ಹೊಂದಿರುವ ನೆದರ್‌ಲ್ಯಾಂಡ್ಸ್ ಮೂಲದ ತಂತ್ರಜ್ಞಾನ ಹೂಡಿಕೆದಾರ ಪ್ರೊಸಸ್ (Prosus), ಸ್ಟಾರ್ಟ್‌ಅಪ್‌ನ ಮೌಲ್ಯಮಾಪನವನ್ನು $3 ಬಿಲಿಯನ್‌ಗಿಂತ ಕಡಿಮೆಗೆ ಗುರುತಿಸಿದೆ. ಕಳೆದ ವರ್ಷವಷ್ಟೇ ಬೈಜುಸ್​ನ ಮೌಲ್ಯ 22 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿತ್ತು. ಈಗ ಒಂದೇ ವರ್ಷದಲ್ಲಿ ಶೇ. 86ರಷ್ಟು ಮೌಲ್ಯ ಕಳೆದುಕೊಂಡಿದೆ.

ಪ್ರೋಸುಸ್, ಬ್ಲ್ಯಾಕ್​ರಾಕ್ ಮೊದಲಾದ ಬೈಜುಸ್ ಷೇರುದಾರರು ಕಳೆದ ಒಂದು ವರ್ಷದಿಂದಲೂ ಕೂಡ ಮೌಲ್ಯ ಕಡಿತಗೊಳಿಸುತ್ತಲೇ ಬಂದಿವೆ. 22 ಬಿಲಿಯನ್ ಡಾಲರ್ ಇದ್ದ ಬೈಜುಸ್​ನ ಮೌಲ್ಯ ಮಾರ್ಚ್ ತಿಂಗಳಲ್ಲಿ 11 ಬಿಲಿಯನ್ ಡಾಲರ್, ಮೇ ತಿಂಗಳಲ್ಲಿ 8 ಬಿಲಿಯನ್ ಡಾಲರ್, ಜೂನ್ ತಿಂಗಳಲ್ಲಿ 5 ಬಿಲಿಯನ್ ಡಾಲರ್​ಗೆ ಕಡಿತಗೊಳಿಸಲಾಗಿದೆ. ಇದೀಗ 3 ಬಿಲಿಯನ್ ಡಾಲರ್​ಗಿಂತ ಕಡಿಮೆ ಮೌಲ್ಯಕ್ಕೆ ಬೈಜುಸ್ ಕುಸಿದಿದೆ.

ಬೈಜುಸ್ ಸಂಸ್ಥೆ ಬಹಳ ವಿಳಂಬವಾಗಿ ಬಿಡುಗಡೆ ಮಾಡಿದ 2021-22ರ ಹಣಕಾಸು ವರ್ಷದ ತನ್ನ ಆದಾಯದ ವರದಿಯಲ್ಲಿ, ಅದು ಸಾಕಷ್ಟು ಆದಾಯವೃದ್ಧಿ ಕಂಡಿದೆಯಾದರೂ ಲಾಭ ಕಾಣದೇ 2,250 ಕೋಟಿ ರೂ ನಷ್ಟ ಅನುಭವಿಸಿರುವುದು ತಿಳಿದುಬಂದಿದೆ. ಹಣಕಾಸು ವರದಿ ವಿಳಂಬಗೊಂಡ ಪರಿಣಾಮ ಬೈಜುಸ್ ಸಾಕಷ್ಟು ಪರಿಣಾಮಗಳನ್ನು ಎದುರಿಸಬೇಕಾಯಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com