ಕೆನರಾ ಬ್ಯಾಂಕ್ ನಿವ್ವಳ ಆದಾಯ ಶೇಕಡಾ 42.8 ರಷ್ಟು ಹೆಚ್ಚಳ!

ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ನ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ. 42.8ರಷ್ಟು ಹೆಚ್ಚಾಗಿ ರೂ.3,606 ಕೋಟಿಗೆ ಏರಿಕೆ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ನ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ. 42.8ರಷ್ಟು ಹೆಚ್ಚಾಗಿ ರೂ.3,606 ಕೋಟಿಗೆ ಏರಿಕೆ ಕಂಡಿದೆ.

ಕೆನರಾ ಬ್ಯಾಂಕ್ ಸೆಪ್ಟೆಂಬರ್ 30, 2023 ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕ ಮತ್ತು ಅರ್ಧ ವರ್ಷದ ತನ್ನ ಹಣಕಾಸು ವರದಿಗಳನ್ನು ಗುರುವಾರ ಬಿಡುಗಡೆ ಮಾಡಿದೆ.

ಬ್ಯಾಂಕ್'ನ ಸೆಪ್ಟೆಂಬರ್ 2023 ರ ನಿವ್ವಳ ಲಾಭವು 3,606 ಕೋಟಿ ರೂಪಾಯಿ ಆಗಿದೆ. ಈ ಹಿಂದಿನ ವರ್ಷ ಅಂದರೆ ಸೆಪ್ಟೆಂಬರ್ 2022 ರ ನಿವ್ವಳ ಲಾಭವು 2,525 ಕೋಟಿ ರೂಪಾಯಿ ಆಗಿದೆ.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಿವ್ವಳ ಬಡ್ಡಿ ವರಮಾನ ಶೇ 19.76ರಷ್ಟು ಹೆಚ್ಚಾಗಿ ರೂ.8,903 ಕೋಟಿಗೆ ತಲುಪಿದೆ. ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತವು ರೂ.3,637 ಕೋಟಿಯಿಂದ ರೂ.2,608 ಕೋಟಿಗೆ ಇಳಿಕೆ ಕಂಡಿದೆ ಬ್ಯಾಂಕ್ ವರದಿ ಮಾಡಿದೆ.

ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಜಿಎನ್‌ಪಿಎ) ಶೇ 6.37 ರಿಂದ ಶೇ 4.76ಕ್ಕೆ ಇಳಿಕೆ ಕಂಡಿದೆ. ನಿವ್ವಳ ಎನ್‌ಪಿಎ ಶೇ 2.19 ರಿಂದ ಶೇ 1.41ಕ್ಕೆ ಇಳಿಕೆ ಆಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಜಾಗತಿಕ ವ್ಯವಹಾರದಲ್ಲಿ ಶೇ.10.12ರಷ್ಟು ಬೆಳವಣಿಗೆಯೊಂದಿಗೆ 21,56,181 ಕೋಟಿ ತಲುಪಿದೆ. ಜಾಗತಿಕ ಮುಂಗಡದಲ್ಲಿ ಶೇ.12.11ರಷ್ಟು ಹೆಚ್ಚಳವಾಗಿದ್ದು, 9,23,966 ಕೋಟಿ ತಲುಪಿದೆ. ಬ್ಯಾಂಕಿನ ದೇಶೀಯ ಠೇವಣಿಯು 11,43,394 ಕೋಟಿ ರೂಪಾಯಿಗೆ ತಲುಪಿದೆ.

ಸೆಪ್ಟೆಂಬರ್‌ 2022ರಲ್ಲಿ ಇದ್ದ 2,525 ಕೋಟಿ ನಿವ್ವಳ ಲಾಭವು 2023ರ ಸೆಪ್ಟೆಂಬರ್‌ಗೆ 3,606 ಕೋಟಿಗೆ ಜಿಗಿದಿದೆ. ಕಾರ್ಯಾಚರಣೆ ಲಾಭ ಶೇ.10.30ರಷ್ಟು ಬೆಳವಣಿಗೆಯೊಂದಿಗೆ 7,616 ಕೋಟಿ ತಲುಪಿದೆ. ನಿವ್ವಳ ಬಡ್ಡಿ ಆದಾಯದಲ್ಲಿ ಶೇ.19.76ರಷ್ಟು ಬೆಳವಣಿಗೆಯೊಂದಿಗೆ 8,903 ಕೋಟಿಗೆ ಹೋಗಿದೆ.

ನಿವ್ವಳ ಬಡ್ಡಿ ಅಂತರ (ನಿಮ್‌) ಅನುಪಾತ 19 ಬಿಪಿಎಸ್‌ ರಷ್ಟು ಬೆಳವಣಿಗೆಯೊಂದಿಗೆ ಶೇ.3.02 ಆಗಿರುತ್ತದೆ. ವೆಚ್ಚ-ಆದಾಯದ ಅನುಪಾತ 53 ಬಿಪಿಎಸ್‌ರಷ್ಟು ಇಳಿಕೆಯೊಂದಿಗೆ ಶೇ.43.68 ಆಗಿರುತ್ತದೆ. ರಿಟೇಲ್‌-ಕೃಷಿ-ಎಂಎಸ್‌ಎಂಇ ಕ್ಷೇತ್ರಗಳಿಗೆ ನೀಡಲಾದ ಸಾಲಗಳಲ್ಲಿ ಶೇ.13.63ರಷ್ಟು ಬೆಳವಣಿಗೆಯೊಂದಿಗೆ 5,16,949 ಕೋಟಿ ಆಗಿರುತ್ತದೆ. ಒಟ್ಟಾರೆ ಮುಂಗಡಗಳ ಶೇ.56 ರಷ್ಟು ಆಗಿರುತ್ತದೆ. ರಿಟೇಲ್‌ ಸಾಲಗಳಲ್ಲಿ ಶೇ.10.56, ಗೃಹ ಸಾಲಗಳಲ್ಲಿ ಶೇ.12.32, ಶಿಕ್ಷಣ ಸಾಲದಲ್ಲಿ ಶೇ.14.68, ವಾಹನ ಸಾಲದಲ್ಲಿ ಶೇ.9.29ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಬ್ಯಾಂಕ್ ವಿವರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com