ಮಾರುಕಟ್ಟೆ ಮೌಲ್ಯಮಾಪನ: 8 ಕಂಪನಿಗಳು ಕಳೆದುಕೊಂಡ ಮೌಲ್ಯ 1.17 ಲಕ್ಷ ಕೋಟಿ!

ಕಳೆದ ಒಂದು ವಾರದ ಈಕ್ವಿಟಿ ಟ್ರೆಂಡ್ ನಲ್ಲಿನ ಮಾರುಕಟ್ಟೆ ಮೌಲ್ಯಮಾಪನದಲ್ಲಿ 10 ಮೌಲ್ಯಯುತ ಸಂಸ್ಥೆಗಳ ಪೈಕಿ 8 ಸಂಸ್ಥೆಗಳು ಒಟ್ಟು 1,17,493.78 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿವೆ. 
ಸಂಸ್ಥೆಗಳ ಮೌಲ್ಯ ಕುಸಿತ (ಸಾಂಕೆತಿಕ ಚಿತ್ರ)
ಸಂಸ್ಥೆಗಳ ಮೌಲ್ಯ ಕುಸಿತ (ಸಾಂಕೆತಿಕ ಚಿತ್ರ)

ಮುಂಬೈ: ಕಳೆದ ಒಂದು ವಾರದ ಈಕ್ವಿಟಿ ಟ್ರೆಂಡ್ ನಲ್ಲಿನ ಮಾರುಕಟ್ಟೆ ಮೌಲ್ಯಮಾಪನದಲ್ಲಿ 10 ಮೌಲ್ಯಯುತ ಸಂಸ್ಥೆಗಳ ಪೈಕಿ 8 ಸಂಸ್ಥೆಗಳು ಒಟ್ಟು 1,17,493.78 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿವೆ. 

ಈ ಪೈಕಿ ಇನ್ಫೋಸಿಸ್ ಅತಿ ಹೆಚ್ಚು ಕಳೆದುಕೊಂಡಿದ್ದು, ರಿಲಾಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಹೆಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮೌಲ್ಯವನ್ನು ಕಳೆದುಕೊಂಡಿರುವ ಸಂಸ್ಥೆಗಳಾಗಿವೆ. ಆದರೆ ಐಟಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಗಳು ಮೌಲ್ಯವನ್ನು ಹೆಚ್ಚಿಸಿಕೊಂಡಿವೆ. 

ಕಳೆದ ವಾರ 30-ಷೇರು ಬಿಎಸ್ ಇ ಸೆನ್ಸೆಕ್ಸ್ ಶೇ.1.28 ರಷ್ಟು  ಕುಸಿತ ಕಂಡಿತ್ತು. ಇನ್ಫೋಸಿಸ್ ನ ಮಾರುಕಟ್ಟೆ ಮೌಲ್ಯ 66,854.05 ಕೋಟಿಯಿಂದ 5,09,215 ಕೋಟಿಗಳಿಗೆ ಕುಸಿತ ಕಂಡಿದೆ. ಇನ್ಫೋಸಿಸ್ ಲಿಮಿಟೆಡ್, ಏಪ್ರಿಲ್ 13 ರಂದು ನಾಲ್ಕನೇ ತ್ರೈಮಾಸಿಕ ನಿವ್ವಳ ಲಾಭದಲ್ಲಿ ನಿರೀಕ್ಷೆಗಿಂತ ಕಡಿಮೆ ಬೆಳವಣಿಗೆಯನ್ನು ವರದಿ ಮಾಡಿತ್ತು. ಮತ್ತು US ಬ್ಯಾಂಕಿಂಗ್ ವಲಯದಲ್ಲಿನ ಪ್ರಕ್ಷುಬ್ಧತೆಯ ಪರಿಣಾಮ ಕ್ಲೈಂಟ್‌ಗಳು IT ಬಜೆಟ್‌ಗಳನ್ನು ಬಿಗಿಗೊಳಿಸುವುದರ ನಡುವೆ 2023-2024 ಆರ್ಥಿಕ ವರ್ಷದಲ್ಲಿ ಶೇ.4-7 ರಷ್ಟು ದುರ್ಬಲ ಆದಾಯ ಬೆಳವಣಿಗೆಯ ಮುನ್ನೋಟವನ್ನು ನೀಡಿತ್ತು.

ಇನ್ನು ಹೆಚ್ ಡಿಎಫ್ ಸಿಯ ಮೌಲ್ಯ 10,880.5 ಕೋಟಿ ರೂಪಾಯಿಗಳಿಗಿಂತಲೂ 9,33,937 ಕೋಟಿ ರೂಪಾಯಿಗಳಿಗೆ ಇಳಿಕೆ ಕಂಡಿದ್ದರೆ, ಐಸಿಐಸಿಐ ಬ್ಯಾಂಕ್ ಮೌಲ್ಯ  10,462.77 ಕೋಟಿ ರೂಪಾಯಿಗಳಿಂದ 6,17,477.46 ಕೋಟಿ ರೂಪಾಯಿಗಳಷ್ಟು ಕಡಿಮೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com