ಏಪ್ರಿಲ್-ನವೆಂಬರ್ ವರೆಗೆ ಭಾರತೀಯ ಸಂಸ್ಥೆಗಳಿಂದ 5.06 ಲಕ್ಷ ಕೋಟಿ ರೂ. ಸಂಗ್ರಹ; ಸಾಲದ್ದೇ ಸಿಂಹಪಾಲು!
ಭಾರತೀಯ ಕಂಪನಿಗಳು ಏಪ್ರಿಲ್-ನವೆಂಬರ್ ಅವಧಿಯಲ್ಲಿ ಈಕ್ವಿಟಿ ಹಾಗೂ ಸಾಲದ ಮಾರ್ಗಗಳಿಂದ 5.06 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.
Published: 01st February 2023 01:27 AM | Last Updated: 01st February 2023 06:44 PM | A+A A-

(ಸಾಂಕೇತಿಕ ಚಿತ್ರ)
ನವದೆಹಲಿ: ಭಾರತೀಯ ಕಂಪನಿಗಳು ಏಪ್ರಿಲ್-ನವೆಂಬರ್ ಅವಧಿಯಲ್ಲಿ ಈಕ್ವಿಟಿ ಹಾಗೂ ಸಾಲದ ಮಾರ್ಗಗಳಿಂದ 5.06 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದು, ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.8.5 ರಷ್ಟು ಕುಸಿತ ಎಂದು ಮಂಗಳವಾರ ಮಂಡನೆಯಾದ 2022-23 ನೇ ಸಾಲಿನ ಆರ್ಥಿಕ ಸಮೀಕ್ಷೆ ಮೂಲಕ ತಿಳಿದುಬಂದಿದೆ.
ಪ್ರಸಕ್ತ ವರ್ಷದಲ್ಲಿ ಹಣದ ಕ್ರೋಢೀಕರಣದಲ್ಲಿ ಸಾಲದ್ದೇ ಸಿಂಹಪಾಲು ಇದೆ, 2023 ನೇ ಆರ್ಥಿಕ ವರ್ಷ (ನವೆಂಬರ್ 2022 ವರೆಗೆ) ಸಂಗ್ರಹವಾಗಿರುವ 5.06 ಲಕ್ಷ ಕೋಟಿ ರೂಪಾಯಿಗಳ ಪೈಕಿ 3.92 ಲಕ್ಷ ಕೋಟಿ ರೂಪಾಯಿಗಳನ್ನು ಸಾಲದ ಮಾರುಕಟ್ಟೆಯಿಂದ ಪಡೆಯಲಾಗಿದೆ. ಹಾಗೂ 1.14 ಲಕ್ಷ ಕೋಟಿ ರೂಪಾಯಿಗಳು ಈಕ್ವಿಟಿ ಮಾರ್ಗದ ಮೂಲಕ ಬಂದಿದೆ ಎಂದು ಸಮೀಕ್ಷೆಯಲ್ಲಿರುವ ಅಂಕಿ-ಅಂಶಗಳು ಹೇಳಿವೆ.
ಈಕ್ವಿಟಿಯಲ್ಲಿ 89,166 ಕೋಟಿ ರೂಪಾಯಿಗಳನ್ನು ಐಪಿಒಗಳ ಮೂಲಕ ಏಪ್ರಿಲ್-ನವೆಂಬರ್-2021 ರ ಅವಧಿಯಲ್ಲಿ ಸಂಗ್ರಹಿಸಲಾಗಿದೆ.
ಇದನ್ನೂ ಓದಿ: 2022-23 ರಲ್ಲಿ ಆರೋಗ್ಯ ಕ್ಷೇತ್ರದ ಮೇಲೆ ಭಾರತದ ಜಿಡಿಪಿಯ ಶೇ.2.1 ರಷ್ಟು ಖರ್ಚು
ಸಮೀಕ್ಷೆಯ ಪ್ರಕಾರ, ಸ್ಥೂಲ ಆರ್ಥಿಕ ಮತ್ತು ಹಣಕಾಸು ಮಾರುಕಟ್ಟೆಯ ಬೆಳವಣಿಗೆಗಳು ಕೆಲವು ಪ್ರಭಾವವನ್ನು ಬೀರಿದ್ದರ ಪರಿಣಾಮ ಭಾರತದ ಬಂಡವಾಳ ಮಾರುಕಟ್ಟೆ ಜಾಗತಿಕ 2023 ರಲ್ಲಿ ಉತ್ತಮವಾದ ವರ್ಷವನ್ನು ಕಂಡಿತ್ತು.
ಜಾಗತಿಕ ಸ್ಥೂಲ ಆರ್ಥಿಕತೆಯ ಅಸ್ಥಿರತೆ, ಹಿಂದೆಂದೂ ಕಾಣದಂತಹ ಹಣದುಬ್ಬರ, ಬಿಗಿ ವಿತ್ತೀಯ ನೀತಿಯ, ಅಸ್ಥಿರ ಮಾರುಕಟ್ಟೆಗಳು ಹೂಡಿಕೆದಾರರ ಮೇಲಿನ ಭಾವನೆಗಳ ಮೇಲೆ ಪರಿಣಾಮ ಬೀರಿತ್ತು. ಇದರಿಂದಾಗಿ 2022-23 ನೇ ಆರ್ಥಿಕ ವರ್ಷದಲ್ಲಿ ಜಾಗತಿಕ ಆರ್ಥಿಕ ಮಾರುಕಟ್ಟೆಗಳು ಕೆಳಮಟ್ಟದ ಕಾರ್ಯಕ್ಷಮತೆ ಹೊಂದಿತ್ತು ಎಂದು ಸಮೀಕ್ಷೆ ಹೇಳಿದೆ.