ಜನವರಿಯಲ್ಲಿ 1.5 ಲಕ್ಷ ಕೋಟಿ ರೂ. ಮೀರಿದ GST ಆದಾಯ

ಜನವರಿಯಲ್ಲಿ ಭಾರತದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯ ಸಂಗ್ರಹವು ಪ್ರಸಕ್ತ ಹಣಕಾಸು ವರ್ಷದಲ್ಲಿ ಮೂರನೇ ಬಾರಿಗೆ 1.50 ಲಕ್ಷ ಕೋಟಿ ರೂಪಾಯಿಗಳಷ್ಟಾಗಿದ್ದು, 1.55 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಜನವರಿಯಲ್ಲಿ ಭಾರತದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯ ಸಂಗ್ರಹವು ಪ್ರಸಕ್ತ ಹಣಕಾಸು ವರ್ಷದಲ್ಲಿ ಮೂರನೇ ಬಾರಿಗೆ 1.50 ಲಕ್ಷ ಕೋಟಿ ರೂಪಾಯಿಗಳಷ್ಟಾಗಿದ್ದು, 1.55 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಿದೆ.

ಕಳೆದ ವರ್ಷ ಜಿಎಸ್‌ಟಿ ಸಂಗ್ರಹವು 1.38 ಲಕ್ಷ ಕೋಟಿ ರೂ.ಗಳಷ್ಟಿದ್ದಂತೆ ಮಾಸಿಕ ಆದಾಯ ಸಂಗ್ರಹವು ವಾರ್ಷಿಕ ಆಧಾರದ ಮೇಲೆ 12% ರಷ್ಟು ಏರಿಕೆಯಾಗಿದೆ. ಏತನ್ಮಧ್ಯೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಜನವರಿ 2023 ರವರೆಗಿನ ಆದಾಯವು ಕಳೆದ ವರ್ಷದ ಇದೇ ಅವಧಿಯಲ್ಲಿ GST ಆದಾಯಕ್ಕಿಂತ ಶೇ.24% ರಷ್ಟು ಹೆಚ್ಚಾಗಿದೆ.

ಜನವರಿಯಲ್ಲಿನ GST ಸಂಗ್ರಹವು ಎಪ್ರಿಲ್ 2022 ರ ಸಂಗ್ರಹದ ನಂತರದ ಎರಡನೇ ಅತ್ಯಧಿಕವಾಗಿಕ ಸಂಗ್ರಹವಾಗಿದೆ. “ಈ ಅವಧಿಗೆ ಸರಕುಗಳ ಆಮದುಗಳಿಂದ ಬರುವ ಆದಾಯವು ಶೇ.29% ರಷ್ಟು ಹೆಚ್ಚಾಗಿದೆ ಮತ್ತು ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಮೂಲಗಳಿಂದ ದೇಶೀಯ ವಹಿವಾಟುಗಳಿಂದ (ಸೇವೆಗಳ ಆಮದು ಸೇರಿದಂತೆ) ಆದಾಯಕ್ಕಿಂತ ಶೇ. 22% ರಷ್ಟು ಹೆಚ್ಚಾಗಿತ್ತು ಎಂದು ಹೇಳಿಕೆ ತಿಳಿಸಿದೆ.

ಒಟ್ಟು 1.55 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹದಲ್ಲಿ ಸಿಜಿಎಸ್‌ಟಿ ರೂ 28,963 ಕೋಟಿ ಮತ್ತು ಎಸ್‌ಜಿಎಸ್‌ಟಿ ರೂ 36,730 ಕೋಟಿ, ಐಜಿಎಸ್‌ಟಿ ರೂ 79,599 ಕೋಟಿ ಮತ್ತು ಸೆಸ್ ರೂ 10,630 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ರೂ 768 ಕೋಟಿ ಸೇರಿದಂತೆ) ಗಳಾಗಿದೆ ಎನ್ನಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com