ಪೈಲಟ್ ತರಬೇತಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಏರ್ ಏಷ್ಯಾಗೆ 20 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ

ಪೈಲಟ್ ತರಬೇತಿ ನಿಯಮಗಳನ್ನು ಸರಿಯಾಗಿ ಪಾಲಿಸದ ಏರ್ ಏಷ್ಯಾಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) 20 ಲಕ್ಷ ದಂಡ ವಿಧಿಸಿದೆ.
ಏರ್ ಏಷ್ಯಾ ಇಂಡಿಯಾ
ಏರ್ ಏಷ್ಯಾ ಇಂಡಿಯಾ

ನವದೆಹಲಿ: ಪೈಲಟ್ ತರಬೇತಿ ನಿಯಮಗಳನ್ನು ಸರಿಯಾಗಿ ಪಾಲಿಸದ ಏರ್ ಏಷ್ಯಾಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) 20 ಲಕ್ಷ ದಂಡ ವಿಧಿಸಿದೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯವು 2022ರ ನವೆಂಬರ್ 23 ಮತ್ತು ನವೆಂಬರ್ 25ರ ನಡುವೆ ಏರ್ ಲೈನ್ ಪೈಲಟ್‌ಗಳ ತರಬೇತಿಯನ್ನು ಸಹ ಪರೀಕ್ಷಿಸಿತ್ತು. ಬಳಿಕ ಕಂಪನಿಗೆ ಈ ದಂಡ ವಿಧಿಸಲಾಗಿದೆ. ಇದಲ್ಲದೇ, ಪಾಯಲ್ ತರಬೇತಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಡಿಜಿಸಿಎ ಏರ್‌ಲೈನ್‌ನ ಪರೀಕ್ಷಕರಿಗೆ ದಂಡ ವಿಧಿಸಿದೆ.

ಪೈಲಟ್ ತರಬೇತಿ ಮುಖ್ಯಸ್ಥರನ್ನು ಮೂರು ತಿಂಗಳ ಕಾಲ ಅಮಾನತು!
ತಪಾಸಣೆ ವೇಳೆ ಬೆಳಕಿಗೆ ಬಂದ ಪೈಲಟ್ ತರಬೇತಿ ನಿಯಮಗಳ ಉಲ್ಲಂಘನೆಗಾಗಿ ಏರ್ ಏಷ್ಯಾದ ಎಂಟು ಪರೀಕ್ಷಕರಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ತಲಾ ಮೂರು ಲಕ್ಷ ರೂಪಾಯಿ ದಂಡ ವಿಧಿಸಿದೆ. ನಾಗರಿಕ ವಿಮಾನಯಾನ ನಿಯಂತ್ರಕವು ಟಾಟಾ ಗ್ರೂಪ್ ಒಡೆತನದ ಏರ್‌ಲೈನ್ ಏರ್ ಏಷ್ಯಾದ ಪೈಲಟ್ ತರಬೇತಿ ಮುಖ್ಯಸ್ಥರನ್ನು ಮೂರು ತಿಂಗಳ ಕಾಲ ಅಮಾನತುಗೊಳಿಸಿದೆ ಎಂದು ಡಿಜಿಸಿಎ ಪ್ರಕಟಣೆ ತಿಳಿಸಿದೆ. ಪರೀಕ್ಷೆಯ ಸಮಯದಲ್ಲಿ, ಪೈಲಟ್ ಪ್ರಾವೀಣ್ಯತೆ ಮತ್ತು ಉಪಕರಣದ ರೇಟಿಂಗ್ ಪರಿಶೀಲನೆಗಳ ಸಮಯದಲ್ಲಿ ಕೆಲವು ಕಡ್ಡಾಯ ತರಬೇತಿ ವ್ಯಾಯಾಮಗಳನ್ನು ಅನುಸರಿಸಲಾಗಿಲ್ಲ ಎಂದು ಕಂಡುಬಂದಿದೆ.

ಕಾರಣ ತೋರಿಸಿ ನೋಟಿಸ್
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಕೂಡ ಈ ಸಂಪೂರ್ಣ ವಿಚಾರದಲ್ಲಿ ಏರ್ ಏಷ್ಯಾಗೆ ಶೋಕಾಸ್ ನೋಟಿಸ್ ನೀಡಿದೆ. ಶೋಕಾಸ್ ನೋಟಿಸ್ ಜಾರಿ ಮಾಡಿರುವ ಡಿಜಿಸಿಎ, ಪೈಲಟ್ ತರಬೇತಿ ವೇಳೆ ನಿಯಮಗಳನ್ನು ಸರಿಯಾಗಿ ಪಾಲಿಸದ ಏರ್‌ಏಷ್ಯಾ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಕೇಳಿದೆ. ಏರ್ ಏಷ್ಯಾದ ಉತ್ತರದ ನಂತರ, ಡಿಜಿಸಿಎ ವಿಮಾನಯಾನ ಕಂಪನಿಯ ಮೇಲೆ ಕ್ರಮವನ್ನು ಪ್ರಾರಂಭಿಸಿದೆ. ಡಿಜಿಸಿಎ ನವೆಂಬರ್ 23 ಮತ್ತು ನವೆಂಬರ್ 25, 2022 ರ ನಡುವೆ ಪರೀಕ್ಷೆಯನ್ನು ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com